🔥 TRENDING Dulquer Salmaan’s ‘I’m Game’ earns Rs ... Tamil Nadu CM Vijay says assembly gest... Tamil Nadu Assembly concludes 28‑day b... TVK-led alliance to devise new Tamil n... Medical interns protest in Bhopal dema... MP receives ₹53,000 crore investment p...
09 Sep 2026
ગુજરાતી मराठी ਪੰਜਾਬੀ বাংলা

ಹಿರೇಹೆಗ್ಡಾಳ್ ಗ್ರಾಮದಲ್ಲಿ ವಿದ್ಯುತ್ ಕಂಬ ಧರೆಗುರುಳಿದ ಘಟನೆ – ಸಾರ್ವಜನಿಕರ ಆಕ್ರೋಶ

✍️ Reporter: ಮಂಜುನಾಥ ಹೂಡೇಂ 🗓 09 Sep 2026, 01:17 PM 👁 4
Share: 💬 WhatsApp 📘 Facebook 𝕏 Post

ಶಿಥಿಲಗೊಂಡ ವಿದ್ಯುತ್ ಕಂಬಗಳು: ಅನಾಹುತದ ಬಳಿಕವೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು?

ಕೂಡ್ಲಿಗಿ: ತಾಲೂಕಿನ ಹಿರೇಹೆಗ್ಡಾಳ್ ಗ್ರಾಮದಲ್ಲಿ ಮಂಗಳವಾರ ಸಂಜೆ ಶಿಥಿಲಗೊಂಡಿದ್ದ ವಿದ್ಯುತ್ ಕಂಬ ಧರೆಗುರುಳಿದ ಪರಿಣಾಮ ಭಾರಿ ಅನಾಹುತ ಸಂಭವಿಸುವ ಸ್ಥಿತಿ ನಿರ್ಮಾಣವಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಘಟನೆ ಬಳಿಕವೂ ಗ್ರಾಮದಲ್ಲಿರುವ ಅಪಾಯಕಾರಿ ವಿದ್ಯುತ್ ಕಂಬಗಳ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂಬ ಆರೋಪ ಸ್ಥಳೀಯರಿಂದ ಕೇಳಿಬಂದಿದೆ.
ಗ್ರಾಮದ ಹಲವು ಕಡೆಗಳಲ್ಲಿ ಹಳೆಯ ವಿದ್ಯುತ್ ಕಂಬಗಳು ಸಂಪೂರ್ಣವಾಗಿ ಶಿಥಿಲಗೊಂಡಿದ್ದು, ಯಾವ ಕ್ಷಣದಲ್ಲಾದರೂ ಧರೆಗುರುಳಿ ಅಪಾಯ ಸಂಭವಿಸುವ ಆತಂಕ ಸಾರ್ವಜನಿಕರಲ್ಲಿ ಮೂಡಿದೆ. ಸುಮಾರು 8ರಿಂದ 9 ವಿದ್ಯುತ್ ಕಂಬಗಳು ಇದೇ ರೀತಿಯ ಅಪಾಯಕಾರಿ ಸ್ಥಿತಿಯಲ್ಲಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕಂಬಗಳು ಶಿಥಿಲಗೊಂಡಿರುವ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮಾಹಿತಿ ಹಾಗೂ ದೂರು ನೀಡಿದ್ದರೂ, ಇದುವರೆಗೂ ಸೂಕ್ತ ಕ್ರಮ ಕೈಗೊಂಡಿಲ್ಲ. ಪಿಡಿಒ ಹಾಗೂ ಕೆಇಬಿ ಅಧಿಕಾರಿಗಳ ನಿರ್ಲಕ್ಷ್ಯವೇ ಇಂತಹ ಪರಿಸ್ಥಿತಿಗೆ ಕಾರಣವಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿದ್ಯುತ್ ಕಂಬಗಳು ಬಿದ್ದ ಸಂದರ್ಭದಲ್ಲಿ ವಿದ್ಯುತ್ ತಂತಿಗಳು ನೆಲಕ್ಕೆ ಬೀಳುವ ಸಾಧ್ಯತೆ ಇದ್ದು, ಜನನಿಬಿಡ ಪ್ರದೇಶದಲ್ಲಿ ಇಂತಹ ಘಟನೆ ಸಂಭವಿಸಿದರೆ ಜೀವಹಾನಿ ಸೇರಿದಂತೆ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇದೆ. ಅದರಲ್ಲೂ ಮಕ್ಕಳು, ವೃದ್ಧರು ಹಾಗೂ ದಾರಿಹೋಕರ ಸುರಕ್ಷತೆ ಕುರಿತು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
📲Get App