🔥 TRENDING Congress Unveils Udaipur Election Mani... Congress Releases Resolution in Udaipu... વિરમગામ શહેરમાં જન્માષ્ટમી પર્વની પરંપ... માતરીયા તળાવથી શક્તિનાથ સુધી 90 ભાગલેન... *காட்பாடியில் ஏரியில் மிதந்த அடையாளம்... Landslide Blocks Naga–Tosa Road, Disru...
06 Sep 2026
ગુજરાતી मराठी ਪੰਜਾਬੀ বাংলা

ಶ್ರೀ ಹಾಲು ಮರದ ಚೌಡಮ್ಮ ದೇವಿಗೆ ಮಹಾರುದ್ರಾಭಿಷೇಕ, ವಿಶೇಷ ಅಲಂಕಾರ

✍️ Reporter: Viswanatha D R 🗓 05 Sep 2026, 06:47 AM 👁 21
Watch on: ▶️ YouTube
Share: 💬 WhatsApp 📘 Facebook 𝕏 Post
ಕೆ. ಬೇವಿನಹಳ್ಳಿ, ಸೆ. 5: ಹರಿಹರ ತಾಲ್ಲೂಕಿನ ಕೆ. ಬೇವಿನಹಳ್ಳಿ ಗ್ರಾಮದ ದೇವತೆ ಹಾಲು ಮರದ ಶ್ರೀ ಚೌಡಮ್ಮ ದೇವಿಗೆ ಶುಕ್ರವಾರ ಮಹಾರುದ್ರಾಭಿಷೇಕ ಹಾಗೂ ವಿಶೇಷ ಅಲಂಕಾರ ಸೇವೆಯನ್ನು ಭಕ್ತಿಭಾವದಿಂದ ನೆರವೇರಿಸಲಾಯಿತು.

ಬೆಳಿಗ್ಗೆಯಿಂದಲೇ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ದೇವಿಗೆ ಮಹಾರುದ್ರಾಭಿಷೇಕ ನೆರವೇರಿಸಿ, ವಿವಿಧ ಪುಷ್ಪಗಳಿಂದ ವಿಶೇಷ ಅಲಂಕಾರ ಮಾಡಲಾಯಿತು. ಬಳಿಕ ಭಕ್ತರು ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು.

ನಂತರ ದೇವಾಲಯಕ್ಕೆ ಆಗಮಿಸಿದ್ದ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರು, ಭಕ್ತರು, ಮಹಿಳೆಯರು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
📲Get App