ಕೌಜಲಗಿ ಸುತ್ತಮುತ್ತಲಿನ ಲಕ್ಷಗಟ್ಟಲೆ ಭಕ್ತರ ಸಹಕಾರದಿಂದ ಗಣೇಶ ವಿಸರ್ಜನೆ ಹಬ್ಬ ಯಶಸ್ವಿಯಾಗಿ ಸಂಪನ್- LLD Report: Ciddu Koujalagi
यहाँ देखें:
▶️ YouTube
ಕೌಜಲಗಿ: ಗಣೇಶ ಹಬ್ಬದ ವಿಸರ್ಜನಾ ಮೆರವಣಿಗೆ ಭಕ್ತಿ, ಸಡಗರದಿಂದ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಜನರ ಸಹಕಾರಕ್ಕೆ ಪೊಲೀಸರು ಹಾಗೂ ಸಂಘಟಕರಿಂದ ಧನ್ಯವಾದ ತಿಳಿಸಲಾಗಿದೆ. ಗಣಪತಿ ಬಪ್ಪಾ ಮೋರ್ಯಾ ಘೋಷಣೆಯೊಂದಿಗೆ ಭಕ್ತರು ಬೀಳ್ಕೊಟ್ಟರು
ಕೌಜಲಗಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಗಣೇಶ ವಿಸರ್ಜನಾ ಮಹೋತ್ಸವವು ಅತ್ಯಂತ ಭಕ್ತಿ ಭಾವದಿಂದ ಹಾಗೂ ಶಾಂತಿಯುತವಾಗಿ ಯಶಸ್ವಿಯಾಗಿ ಜರುಗಿತು.
ನೂರಾರು ಗಣೇಶ ಮೂರ್ತಿಗಳನ್ನು ಭವ್ಯ ಮೆರವಣಿಗೆಯೊಂದಿಗೆ ಸ್ಥಳೀಯ ಕೆರೆ ಹಾಗೂ ನಿಗದಿತ ವಿಸರ್ಜನಾ ಸ್ಥಳದಲ್ಲಿ ವಿಸರ್ಜಿಸಲಾಯಿತು. ಮೆರವಣಿಗೆಯುದ್ದಕ್ಕೂ ಯುವಕರು ಡಿಜೆ ಸದ್ದಿಗೆ ಕುಣಿದು ಕುಪ್ಪಳಿಸಿದರು.
ಯಾವುದೇ ಅಹಿತಕರ ಘಟನೆ ನಡೆಯದಂತೆ ಕೌಜಲಗಿ ಪೊಲೀಸರು ಹಾಗೂ ಗ್ರಾಮದ ಹಿರಿಯರು ಬಿಗಿ ಭದ್ರತೆ ಕೈಗೊಂಡಿದ್ದರು. ಜನರ ಸಹಕಾರದಿಂದ ಹಬ್ಬ ಯಶಸ್ವಿಯಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ವರದಿ: Siddu Koujalagi, Koujalagi Live News