🔥 TRENDING Consultant Manager Rahul Thakur’s Body... थाने के कलवा में थाने नगर निगम द्वारा... थाने के कलवा में थाने नगर निगम द्वारा... ରାଜଧାନୀ ଭୁବନେଶ୍ୱରରେ ଚଳିତ ସିଜିନର ପ୍ରଥମ... 16 hours ago जोकीहाट थाना अध्यक्ष राजीव कुमार झा ने...
31 Oct 2026•
ગુજરાતી मराठी ਪੰਜਾਬੀ বাংলা

ಜನಮನದ ಅಧಿಕಾರಿ ಮಲ್ಲಿಕಾರ್ಜುನ ಇನ್ನಿಲ್ಲ - ಅರಕೇರಾ ತಾಲೂಕಿನ ಗಲಗದ KEB JE ರಸ್ತೆ ಅಪಘಾತದಲ್ಲಿ ದುರ್ಮರಣ - "ಮಳ್ಳಿ ಹಂಗ ಹೋಗಿ..." ಹಾಡು ನಿಜವಾಯಿತು

✍️ Reporter: Ningappa 🗓 31 Oct 2026, 11:39 AM 👁 18
Share: 💬 WhatsApp 📘 Facebook 𝕏 Post

ಗಲಗ ಗ್ರಾಮದ KEB ಯಲ್ಲಿ ಕಿರಿಯ ಅಭಿಯಂತರರಾಗಿ ಸೇವೆ ಸಲ್ಲಿಸುತ್ತಿದ್ದ ಜನಪ್ರಿಯ JE ಮಲ್ಲಿಕಾರ್ಜುನ ಅವರು ರಸ್ತೆ ಅಪಘಾತದಲ್ಲಿ ವಿಧಿವಶ - ಜನರ ಮನಸ್ಸಿನಲ್ಲಿ ಅಜರಾಮರರಾದ ಮಾನವೀಯ ಅಧಿಕಾರಿ

ದೇವದುರ್ಗ/ಗಲಗ: ನಮ್ಮ ಹಳ್ಳಿ ಕಡೆ ಜನಪದರು ಹಾಡುವ ಒಂದು ಭಜನೆ ಹಾಡಿದೆ. "ಮಳ್ಳಿ ಹಂಗ ಹೋಗಿ ನೀನು ಒಳ್ಳಿ ಬರಬಾರದು, ನೀನು ಹೋದ ಮರುದಿನ ನಿನ್ನ ಹೆಸರು ಮರೆಯಬಾರದು" - ಈ ಸಾಲು ಇಂದು ರಾಯಚೂರು ಜಿಲ್ಲೆಯ ಅರಕೇರಾ ತಾಲೂಕಿನ ಗಲಗ ಗ್ರಾಮದ ಜನರ ಪಾಲಿಗೆ ನಿಜವಾಯಿತು.

ಕರ್ನಾಟಕ ವಿದ್ಯುತ್ ಮಂಡಳಿ (KEB) ಗಲಗ ಶಾಖೆಯಲ್ಲಿ ಕಿರಿಯ ಅಭಿಯಂತರರಾಗಿ (JE) ಸೇವೆ ಸಲ್ಲಿಸುತ್ತಿದ್ದ ಮಲ್ಲಿಕಾರ್ಜುನ ಅವರು ಇಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ವಿಧಿವಶರಾಗಿದ್ದಾರೆ ಎಂಬ ಸುದ್ದಿ ಕೇಳಿ ಇಡೀ ಭಾಗದ ಜನರ ಮನಸ್ಸಿಗೆ ತೀವ್ರ ನೋವುಂಟಾಗಿದೆ.

ಮಲ್ಲಿಕಾರ್ಜುನ ಅವರು ಸಾಮಾನ್ಯ ಅಧಿಕಾರಿಯಾಗಿರಲಿಲ್ಲ. ತಮ್ಮ ವ್ಯಾಪ್ತಿಗೆ ಒಳಪಡುವ ಹಳ್ಳಿಗಳಲ್ಲಿ ಏನೇ ವಿದ್ಯುತ್ ಸಮಸ್ಯೆ ಬಂದರೂ ತಕ್ಷಣ ಸ್ಪಂದಿಸುತ್ತಿದ್ದರು. ಚಿಕ್ಕ ಮಕ್ಕಳಿಂದ ಹಿಡಿದು ಮುದುಕರವರೆಗೆ ಯಾರು, ಎಷ್ಟೊತ್ತಿನಲ್ಲಿಯೇ ಕರೆ ಮಾಡಿದರೂ ಕರೆ ಸ್ವೀಕರಿಸಿ ಸಮಸ್ಯೆ ಬಗೆಹರಿಸುತ್ತಿದ್ದ ಒಳ್ಳೆಯ ಮನೋಭಾವನೆಯ ವ್ಯಕ್ತಿ.

ಹಿರಿಯರು ಹೇಳುವಂತೆ "ಜನರು ಮಾತನಾಡಿಕೊಳ್ಳುವ ಹಾಗೆ ಏನಾದರೂ ಒಳ್ಳೆಯ ಕೆಲಸ ಮಾಡಿ ಹೋಗಿ" ಎಂಬ ಮಾತಿನಂತೆ ಬದುಕಿದವರು ಸಾಹೇಬರು. ದೈಹಿಕವಾಗಿ ಇಂದು ನಮ್ಮನ್ನು ಅಗಲಿದರೂ, ತಮ್ಮ ಒಳ್ಳೆಯ ನಡೆ-ನುಡಿ ಮತ್ತು ಸೇವೆಯಿಂದಾಗಿ ಜನರ ಮನಸ್ಸಿನಲ್ಲಿ ಅಜರಾಮರವಾಗಿ ಉಳಿಯುತ್ತಾರೆ.

ಇವರ ಕಾರ್ಯವೈಖರಿಯ ವರ್ಣನೆ ಯಾವ ಲೇಖನಿಗೂ ನಿಲುಕದು. ಸತ್ತು ಕೂಡ ಜನರ ನಡುವೆ ಜೀವಂತವಿರುವವರು ಇವರು.

ಮೃತರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಭಗವಂತ ನೀಡಲಿ. ಶಾಶ್ವತ ಸೂರಿನೆಡೆಗೆ ನಡೆದ ಮಲ್ಲಿಕಾರ್ಜುನ ಸಾಹೇಬರಿಗೆ ಭಾರವಾದ ಮನಸ್ಸಿನಿಂದ ಭಾವಪೂರ್ಣ ಅಂತಿಮ ವಿದಾಯದ ನಮನಗಳು
📲Get App