🔥 TRENDING Odisha Revenue Minister Reviews Heavy... Kalinga Ghat in Bhubaneswar Closed by... ED Conducts Raid in Gamda, Seals Headq... Indore Merchants Observe 'No UPI Day'... 79-Year-Old Digvijay Singh Begins 950... बुलंदशहर: खुर्जा के ग्रैंड होटल में दे...
23 Sep 2026
ગુજરાતી मराठी ਪੰਜਾਬੀ বাংলা

HIV/ಏಡ್ಸ್ ಕುರಿತು ಅರಿವು ಮೂಡಿಸುವುದು ಪ್ರತಿಯೊಬ್ಬರ ಜವಾಬ್ದಾರಿ: ಶೈಲಜಾ ಪಾಟೀಲ್

✍️ Reporter: Viswanatha D R 🗓 23 Sep 2026, 02:40 PM 👁 10
Share: 💬 WhatsApp 📘 Facebook 𝕏 Post
ಹರಿಹರ, ಸೆ. 23: ಜಿಲ್ಲಾ ಏಡ್ಸ್ ಪ್ರತಿಬಂಧಕ ಹಾಗೂ ನಿಯಂತ್ರಣ ಘಟಕ, ದಾವಣಗೆರೆ ಹಾಗೂ ಐ.ಸಿ.ಟಿ.ಸಿ., ಸಾರ್ವಜನಿಕ ಆಸ್ಪತ್ರೆ, ಹರಿಹರ ಇವರ ಸಂಯುಕ್ತಾಶ್ರಯದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ “HIV/ಏಡ್ಸ್ ಕುರಿತು ಅರಿವು ಕಾರ್ಯಕ್ರಮ ಮತ್ತು ಪ್ರಬಂಧ ಸ್ಪರ್ಧೆ” ಕಾರ್ಯಕ್ರಮವನ್ನು ಬುಧವಾರ ಆಯೋಜಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಶಕುಂತಲಾ ಎನ್. ಅವರು ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ, ಹರಿಹರದ ಆಪ್ತಸಮಾಲೋಚಕರಾದ ಶ್ರೀಮತಿ ಶೈಲಜಾ ಪಾಟೀಲ್ ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ, HIV/ಏಡ್ಸ್ ಸೋಂಕು ಹರಡುವ ವಿಧಾನಗಳು, ಸೋಂಕಿನಿಂದ ದೂರವಿರಲು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಹಾಗೂ ಏಡ್ಸ್ ತಡೆಗಟ್ಟುವ ವಿಧಾನಗಳ ಕುರಿತು ಮಾಹಿತಿ ನೀಡಿದರು.

HIV/ಏಡ್ಸ್ ಕುರಿತು ಸಮಾಜದಲ್ಲಿರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವ ಅಗತ್ಯವಿದ್ದು, HIV ಸೋಂಕಿತರ ಬಗ್ಗೆ ಯಾವುದೇ ರೀತಿಯ ತಾರತಮ್ಯ ಮಾಡದೆ ಮಾನವೀಯತೆಯಿಂದ ನಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು. ಯುವಜನರಲ್ಲಿ HIV/ಏಡ್ಸ್ ಕುರಿತು ವೈಜ್ಞಾನಿಕ ಅರಿವು ಮೂಡಿಸುವುದು ಅತ್ಯಂತ ಅಗತ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಎನ್‌ಎಸ್‌ಎಸ್ ಹಾಗೂ ರೆಡ್ ಕ್ರಾಸ್ ಸಂಯೋಜಕರಾದ ಯೋಗೇಶ್ ಕೆ. ಜೆ ಹಾಗೂ ಹನುಮಂತಪ್ಪ. ಕೆ. ವೈ.ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ರೇಖಾ ಪಿ.ಬಿ. ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಮರಿಯಮ್ಮ ಅವರು ಸ್ವಾಗತಿಸಿದರು. ರೆಡ್ ಕ್ರಾಸ್ ಸಂಚಾಲಕರಾದ ಶ್ರೀ ಯೋಗೇಶ್ ಕೆ.ಜೆ. ಅವರು ಪ್ರಾಸ್ತಾವಿಕ ನುಡಿಗಳ ಮೂಲಕ ಕಾರ್ಯಕ್ರಮದ ಉದ್ದೇಶ ಹಾಗೂ ಮಹತ್ವವನ್ನು ವಿವರಿಸಿದರು.

ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಆಸಕ್ತಿಯಿಂದ ಭಾಗವಹಿಸಿ HIV/ಏಡ್ಸ್ ತಡೆಗಟ್ಟುವಿಕೆ, ಆರೋಗ್ಯ ಜಾಗೃತಿ ಹಾಗೂ ಸಾಮಾಜಿಕ ಹೊಣೆಗಾರಿಕೆಯ ಕುರಿತು ಮಾಹಿತಿ ಪಡೆದುಕೊಂಡರು. ಕಾರ್ಯಕ್ರಮದ ಅಂಗವಾಗಿ ಪ್ರಬಂಧ ಸ್ಪರ್ಧೆಯನ್ನೂ ಆಯೋಜಿಸಲಾಗಿತ್ತು.

ಕೊನೆಯಲ್ಲಿ ಕು. ಸೃಷ್ಟಿ ಆರ್.ಬಿ. ಅವರು ವಂದನಾರ್ಪಣೆ ಸಲ್ಲಿಸಿದರು. ಆಕಾಶ್ ಎಚ್. ಅವರು ಕಾರ್ಯಕ್ರಮವನ್ನು ನಿರೂಪಿಸಿದರು.

HIV/ಏಡ್ಸ್ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವಲ್ಲಿ ಕಾರ್ಯಕ್ರಮವು ಮಹತ್ವದ ಪಾತ್ರ ವಹಿಸಿತು.
📲Get App