🔥 TRENDING পুরুলিয়া জেলার বঙ্গভুক্তি দিবস উদযাপন... जयपुर में लकड़ी के गोदाम में लगी तीव्र... सरपंच कि गुंडागर्दी Punjab Police Suspends ASI Over Allege... Four Arrested in Delhi Fake ₹20 Coin S... Delhi Police Recover Woman's Body Afte...
01 Nov 2026•
ગુજરાતી मराठी ਪੰਜਾਬੀ বাংলা

ವರಟಿಗೇರಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅದ್ದೂರಿಯಾಗಿ 71ನೇ ಕರ್ನಾಟಕ ರಾಜ್ಯೋತ್ಸವ ಆಚರಣೆ

✍️ Reporter: Khaja Hussain 🗓 01 Nov 2026, 07:04 PM 👁 22
Watch on: 📘 Facebook
Share: 💬 WhatsApp 📘 Facebook 𝕏 Post
ಜಾಲಹಳ್ಳಿ | ಬ್ರೇಕಿಂಗ್ ನ್ಯೂಸ್

### ವರಟಿಗೇರಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅದ್ದೂರಿಯಾಗಿ 71ನೇ ಕರ್ನಾಟಕ ರಾಜ್ಯೋತ್ಸವ ಆಚರಣೆ

###; ಕನ್ನಡ ನಾಡು, ನುಡಿ, ನೆಲ, ಜಲ ಮತ್ತು ಭಾಷೆಯ ರಕ್ಷಣೆಗೆ ಚನ್ನಬಸವ ಮಾಲಿ ಪಾಟೀಲ್ ಕರೆ

ಜಾಲಹಳ್ಳಿ, ನ. 1: ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಪಟ್ಟಣದ ವರಟಿಗೇರಾ ಪ್ರದೇಶದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 71ನೇ ಕರ್ನಾಟಕ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ SDMC ಅಧ್ಯಕ್ಷ ರಂಗಣ್ಣ ತ್ಯಾಪ್ಲಿ ಹಾಗೂ ಶಾಲೆಯ ಮುಖ್ಯಶಿಕ್ಷಕಿ ಲಲಿತಾ ಅವರು ಧ್ವಜಾರೋಹಣ ನೆರವೇರಿಸಿದರು. ಬಳಿಕ ಶಾಲಾ ಮಕ್ಕಳು ರಾಷ್ಟ್ರಗೀತೆ ಹಾಗೂ ನಾಡಗೀತೆಯನ್ನು ಹಾಡಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ SDMC ಸದಸ್ಯ ಚನ್ನಬಸವ ಮಾಲಿ ಪಾಟೀಲ್ ಅವರು, ಕನ್ನಡ ನಾಡು, ನುಡಿ, ನೆಲ, ಜಲ ಹಾಗೂ ಭಾಷೆಯ ರಕ್ಷಣೆಗೆ ಪ್ರತಿಯೊಬ್ಬರೂ ಬದ್ಧರಾಗಿರಬೇಕು. ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಊರಿನ ಪ್ರಮುಖರಾದ ಶಿವನಗೌಡ ವಂದಲಿ (ತಾಲೂಕು ಜೆಡಿಎಸ್ ಪರಿಶಿಷ್ಟ ಪಂಗಡ ಘಟಕದ ಅಧ್ಯಕ್ಷರು), ಮಂಜುನಾಥ್ ಪಾಟೀಲ್, ರಮೇಶ್ ಮಾಸ್ಟರ್, ರಮೇಶ್ ಗಾಂಜಿ, ಮಲ್ಲೇಶ್ ಮಸ್ಕಿ, ನರಸಣ್ಣ ಡೆಂಗಿ, ರಂಗಪ್ಪ ಹಿರೇಮನಿ , SDMC ಸದಸ್ಯರಾದ ಚನ್ನಬಸವ ಮಾಲಿ ಪಾಟೀಲ್, ರಂಗಣ್ಣ ಹೊಸಮನಿ, ಶಿವರಾಜ್ ಹಿರೇಮನಿ , ಕೊಂಡಯ್ಯ ತ್ಯಾಪ್ಲಿ, ಯಲ್ಲಪ್ಪ ಕಟ್ಟಿಮನಿ, ಭೀಮಣ್ಣ ಗುಂಡಗುರ್ತಿ, ಶಿಕ್ಷಕರಾದ ಸಿದ್ದಣ್ಣ, ಮಲ್ಲಮ್ಮ, ವೆಂಕಟೇಶ್, ವೆಂಕಟೇಶ್ ದೊರೆ, ಶಿವಮನ್ಯಾ ತ್ಯಾಪ್ಲಿ, ಸುಜಾತ, ವಿಜಯಲಕ್ಷ್ಮಿ ಸೇರಿದಂತೆ ಶಾಲೆಯ ಸಿಬ್ಬಂದಿ ವರ್ಗದವರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ವರದಿ: ಖಾಜಾ ಹುಸೇನ್ ಬಾಬಾ, ಪತ್ರಕರ್ತರು, ಜಾಲಹಳ್ಳಿ.
📲Get App