🔥 ट्रेंडिंग ଭୁବନେଶ୍ୱରରେ ଘର ଭଡ଼ା ନାଁରେ ମହାଠକେଇ; ମା’... ઓલપાડમાં સિદ્ધનાથ એવન્યુ એપાર્ટમેન્ટમા... ଘରର ମୁଖ୍ୟ ଦ୍ୱାରରେ ତୁଳସୀ ଗଛ ରଖିଛନ୍ତି କି... सरकार ने भारतीय सैटकॉम कंपनियों के लिए... केरल में मिनी कूपर दुर्घटना: 144 किमी/... ଧନତେରସରେ କିଣାକିଣି ପାଇଁ କେବଳ ଏତିକି ଘଣ୍ଟ...
06 नव. 2026•
ગુજરાતી मराठी ਪੰਜਾਬੀ বাংলা

ನ. 7 ರಿಂದ ಮೂರು ದಿನಗಳ ಕಾಲ ವಿದ್ಯಾರ್ಥಿ ಯುವಜನರ ಅಧ್ಯಯನ ಶಿಬಿರ - ತಾವರಗೇರಾ ಬುದ್ಧ ವಿಹಾರದಲ್ಲಿ ಡಿವಿಎಸ್ ಹಾಗೂ ಭಾರತ ಕ್ರಾಂತಿಕಾರಿ ಯುವಜನರ ಒಕ್ಕೂಟದಿಂದ ಆಯೋಜನೆ - ಮೌನೇಶ ಜಾಲವಾಡಗಿ

✍️ रिपोर्टर: Ningappa 🗓 06 नव. 2026, 03:20 PM 👁 18
शेयर करें: 💬 WhatsApp 📘 Facebook 𝕏 Post

ಸಿಂಧನೂರು ತಾವರಗೇರಾದ ಬುದ್ಧ ವಿಹಾರದಲ್ಲಿ ನ. 7 ರಿಂದ 3 ದಿನಗಳ ಕಾಲ ವಿದ್ಯಾರ್ಥಿ ಯುವಜನರ ಅಧ್ಯಯನ ಶಿಬಿರ - ಜಾತಿ ವಿನಾಶನೆ, ಕೋಮುವಾದ, ನಿರುದ್ಯೋಗ ವಿರುದ್ಧ ಹೋರಾಟ, ಸಂವಿಧಾನ ಅಧ್ಯಯನ, ಸಾಂಸ್ಕೃತಿಕ ಕಾರ್ಯಕ್ರಮ - ಡಿವಿಎಸ್ ಜಿಲ್ಲಾಧ್ಯಕ್ಷ ಮೌನೇಶ ಜಾಲವಾಡಗಿ ಮಾಹಿತಿ

ಸಿಂಧನೂರು: ದಲಿತ ವಿದ್ಯಾರ್ಥಿ ಪರಿಷತ್ ಹಾಗೂ ಭಾರತ ಕ್ರಾಂತಿಕಾರಿ ಯುವಜನರ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ತಾವರಗೇರಾ ಟಾಟಾ ಇರುವ ಬುದ್ಧ ವಿಹಾರದಲ್ಲಿ ನ. 7 ರಿಂದ ಮೂರು ದಿನಗಳ ಕಾಲ ವಿದ್ಯಾರ್ಥಿ - ಯುವಜನರ ಅಧ್ಯಯನ ಶಿಬಿರ ಆಯೋಜಿಸಲಾಗಿದೆ ಎಂದು ಡಿವಿಎಸ್ ಜಿಲ್ಲಾಧ್ಯಕ್ಷ ಮೌನೇಶ ಜಾಲವಾಡಗಿ ಹೇಳಿದರು.

ಗುರುವಾರ ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತಿ ವಿನಾಶನೆ, ಕೋಮುವಾದ, ನಿರುದ್ಯೋಗ ಮತ್ತು ಬೇರೋಜಗಾರಿ ವಿರುದ್ಧ ಸ್ಥಳೀಯ ಹೋರಾಟದ ವಿಷಯವಾಗಿ ಚರ್ಚಿಸಲಾಗುವುದು ಎಂದು ತಿಳಿಸಿದರು.

ಹಿಂದೆ ದೇಶದ ರಾಜಕೀಯ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ. ಸಂವಿಧಾನದ ಅಧ್ಯಯನ, ಪ್ರವಾಸ ಮತ್ತು ಮೌಲ್ಯಗಳು, ವೈಜ್ಞಾನಿಕ ಮನೋಭಾವ, ಸಾಮಾಜಿಕ ನ್ಯಾಯದ ಮೇಲೆ ಸಂಘಟಿತ ದಾಳಿಗಳು ನಡೆಯುತ್ತಿವೆ. ಜಾತಿ ತಾರತಮ್ಯ, ಅಸ್ಪೃಶ್ಯತೆ, ದಲಿತರ ಮೇಲಿನ ದಾಳಿ, ಕೋಮುವಾದ, ರಾಜಕಾರಣ, ನಿರುದ್ಯೋಗ, ಶಿಕ್ಷಣ ಖಾಸಗೀಕರಣ ಹಾಗೂ ವಿದ್ಯಾರ್ಥಿ ಯುವಜನರ ಹಕ್ಕುಗಳ ದಮನ ಹೆಚ್ಚಾಗುತ್ತಿದೆ ಎಂದು ಹೇಳಿದರು.

ಇಂತಹ ಸಂದರ್ಭದಲ್ಲಿ ಯುವಜನರು ಕೇವಲ ಉದ್ಯೋಗಕ್ಕಾಗಿ ಅಲೆಯುವವರಾಗದೆ, ಸಮಾಜ ಬದಲಾವಣೆಯೇ ಮುನ್ನೋಟವನ್ನಾಗಿ ರೂಪುಗೊಳ್ಳಬೇಕು ಎಂದರು.

ಭಾರತೀಯ ಸಂವಿಧಾನದ ಸಮಿತಿ ಪ್ರಧಾನ ಕಾರ್ಯದರ್ಶಿ ಆರ್.ಕೆ. ಮಾಣಸಯ್ಯ, ಹಾಗೂ ಬೆಂಗಳೂರು ಸಂಸ್ಥಾಪಕ ಅಧ್ಯಕ್ಷ ಶ್ರೀನಾಥ್ ಪೂಜಾರಿ ಉದ್ಘಾಟನಾ ನುಡಿಗಳನ್ನಾಡಲಿದ್ದಾರೆ. ಹಿಂದೂ ಪೂಜ್ಯಮಾನ್ಯರು, ಜನಸೇವಕರು, ಪ್ರಗತಿಪರ ಚಿಂತಕರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಲಿದ್ದಾರೆ.

ಶಿಬಿರದಲ್ಲಿ ಅಧ್ಯಯನದ ವಿಷಯವಾಗಿ ಗುಂಪುಗಳ ಅಧ್ಯಯನ ಮತ್ತು ಚರ್ಚೆ ನಡೆಯಲಿದೆ. ಮಾನವ ಸಮಾಜದ ಇತಿಹಾಸದಿಂದ ಹಿಂದೂ ಭಾರತದ ಆಧುನಿಕ ರಾಜಕೀಯ ಚರ್ಚೆ, ದಲಿತ ಚಳವಳಿಯ ಕೇಶವಮೂರ್ತಿ, ಸಂವಿಧಾನದ ಆಶಯಗಳು, ಅಸ್ಪೃಶ್ಯತೆ ಮತ್ತು ಜಾತಿ ನಿರ್ಮೂಲನೆಯ ವಾದಿ ಹಾಗೂ ಇಂದಿನ ವಿದ್ಯಾರ್ಥಿ ಯುವಜನರ ಮುನ್ನೋಟದ ರಾಜಕೀಯ ಮತ್ತು ಸಾಮಾಜಿಕ ಕಾರ್ಯಭಾರಗಳ ಬಗ್ಗೆ ವಿಚಾರ ವಿನಿಮಯ ನಡೆಯಲಿದೆ ಎಂದು ವಿವರಿಸಿದರು.

ಕ್ರಾಂತಿಕಾರಿ ದಾಸುಗಳ ತರಣಿ, ಕಲೆಯಾನಿಕ ಸಂಘ ತಿಮ್ಮು ಕಲ್ಲೂರು ಸಭಾದ, ಹಾಡುಗಳ ಮೂಲಕ ಚಲನವಲನ, ಕಲಾವಿದರ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕ್ರಾಂತಿಕಾರಿ ಸಾಂಸ್ಕೃತಿಕ ವೇದಿಕೆ ಪ್ರಮುಖರು ಈ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುತ್ತಾರೆ.

ಇದು ಕೇವಲ ಮನರಂಜನಾ ಶಿಬಿರವಲ್ಲ, ಯುವಜನರ ಚಿಂತನೆಗೆ ಹೊಸ ದಿಕ್ಕು, ಹೋರಾಟಕ್ಕೆ ಹೊಸ ಶಕ್ತಿ ನೀಡುವ ವೈಚಾರಿಕ ವೇದಿಕೆಯಾಗಿದೆ. ಜಾತಿ ವ್ಯವಸ್ಥೆಯ ಸಂಕೋಲೆ ಕಳಚಲು, ಕೋಮುವಾದಿ ವ್ಯಾಸಿಸ್ ವಿರುದ್ಧ ಎದುರಾಗಲು, ಶಿಕ್ಷಣದ ಗ್ರಾಹಕೀಕರಣ, ಪೂಜಾ ದಾಸನ, ಸಾಹಿತ್ಯ, ಸಮಾನತೆಯ ಸಮಾಜ ಕಟ್ಟಲು ಎಲ್ಲಾ ವಿದ್ಯಾರ್ಥಿ ಯುವಜನರು ವೈಜ್ಞಾನಿಕ ಮತ್ತು ಕ್ರಾಂತಿಕಾರಿ ಚಿಂತನೆ ಬೆಳೆಸಿಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಭಾರತ ಕ್ರಾಂತಿಕಾರಿ ಯುವಜನ ಒಕ್ಕೂಟದ ಜಿಲ್ಲಾ ಸಂಚಾಲಕ ನಿರ್ಮಲಕುಮಾರ್ ಎಂ., ಮುಖಂಡರಾದ ಬಸವರಾಜ ಬಾಗಲ್ವಾಡ, ಚನ್ನಬಸವ ಯಾಪಲಪರ್ವಿ, ಶಶಿಕುಮಾರ್ ಕೆಸರಟ್ಟಿ, ಮೌನೇಶ ತುಗ್ಗಲದಿನ್ನಿ, ದುರ್ಗೇಶ ಕಲಮಂಗಿ, ಅಪ್ಪಯ್ಯ ಗೋಮೂರ್ಷಿ ಇದ್ದರು.
📲Get App