🔥 TRENDING ਇੰਸਪੈਕਟਰ ਜਸਵੀਰ ਸਿੰਘ ਪਦਉਨਤ ਬਣੇ ਡੀਐਸਪੀ विकसित भारत बनाने के लिए विकसित बिहार... ਕੱਲ੍ਹ ਨੂੰ ਖੇਡਿਆ ਜਾਵੇਗਾ ਨਿਉਜੀਲੈਡ ਅਤੇ ਭਾ... रायपुर में आयोजित नेशनल कराटे चैंपियनश... *“बीदर डिस्ट्रिक्ट पुलिस, औरद-B पुलिस... पिंपळनेरमध्ये गुटखा तस्करी उघड; ३० लाख...
03 Nov 2026•
ગુજરાતી मराठी ਪੰਜਾਬੀ বাংলা

ರಾಂಪುರದಲ್ಲಿ 50 ಸಾವಿರದ ಪಾಲಿಸಿಗೆ 5 ಲಕ್ಷದ ಮರಣ ಪರಿಹಾರ ಇತ್ಯರ್ಥ - 2 ತಿಂಗಳಲ್ಲೇ ಹೃದಯಾಘಾತದಿಂದ ನಿಧನರಾಗಿದ್ದ ಭಾರತಿ ಗ್ರಾಹಕಿಯ ಕುಟುಂಬಕ್ಕೆ ಎಸ್ ಬಿ ಐ ಲೈಫ್‌ ನೆರವು

✍️ Reporter: Ningappa 🗓 03 Nov 2026, 02:01 PM 👁 11
Share: 💬 WhatsApp 📘 Facebook 𝕏 Post

ಗುರುಮಟ್ಕಲ್ ತಾಲೂಕಿನ ರಾಂಪುರ ಜಿ ಗ್ರಾಮದ ಭಾರತಿ ಗ್ರಾಹಕಿ ಡಿಸೆಂಬರ್ 2025ರಲ್ಲಿ 50 ಸಾವಿರದ SMART FORTUNE BUILDER ಪಾಲಿಸಿ ಪಡೆದು ಫೆಬ್ರವರಿ 2026ರಲ್ಲಿ ಹೃದಯಾಘಾತದಿಂದ ನಿಧನ - ಪತಿ ನಾಮಿನಿ ಶಿವರಾಜ್ ಅವರಿಗೆ DSM ಶರಣಯ್ಯ ರಾವೂರಮಠ, ಡೆವಲಪ್ಮೆಂಟ್ ಮ್ಯಾನೇಜರ್ ಚನ್ನವೀರಯ್ಯ ಮಠ, ಲೈಫ್ ಮಿತ್ರ ಲಕ್ಷ್ಮಿ ಬಸವರಾಜ್ ಸಮ್ಮುಖದಲ್ಲಿ 5 ಲಕ್ಷ ರೂ. ಮರಣ ಪರಿಹಾರ ವಿತರಣೆ

ಗುರುಮಟ್ಕಲ್ (ಯಾದಗಿರಿ),ನ. 3: ವಿಮೆ ಎಂದರೆ ಕುಟುಂಬಕ್ಕೆ ಭದ್ರತೆ ಎಂಬುದಕ್ಕೆ ಮತ್ತೊಂದು ನಿದರ್ಶನ ಗುರುಮಟ್ಕಲ್ ತಾಲೂಕಿನ ರಾಂಪುರ ಜಿ ಗ್ರಾಮದಲ್ಲಿ ನಡೆದಿದೆ.

ಡಿಸೆಂಬರ್ 2025 ರಂದು ರಾಂಪುರ ಜಿ ಗ್ರಾಮದ *BHARATHI* ಎಂಬ ಗ್ರಾಹಕರಿಗೆ *₹50,000/- ಮೌಲ್ಯದ SBI LIFE SMART FORTUNE BUILDER* ಪಾಲಿಸಿಯನ್ನು ನೀಡಲಾಗಿತ್ತು. ದುರದೃಷ್ಟವಶಾತ್ ಪಾಲಿಸಿ ತೆಗೆದುಕೊಂಡ ಕೇವಲ *ಎರಡು ತಿಂಗಳ ನಂತರ ಫೆಬ್ರವರಿ 2026 ರಲ್ಲಿ* ಅವರು ಹೃದಯಾಘಾತದಿಂದ ನಿಧನರಾದರು.

ಗ್ರಾಹಕಿಯ ನಿಧನದ ನಂತರ ಕಂಪನಿಯ ನಿಯಮದಂತೆ ಮರಣ ಹಕ್ಕು (Death Claim) ಪ್ರಕ್ರಿಯೆ ನಡೆಸಲಾಯಿತು. ಈಗ *SHARANAYYA RAVOORMATH (DSM Yadgir) ಮತ್ತು CHANNAVEERAYYA MATH (Development Manager) ಮತ್ತು LAXMI BASAWARAJ (Life Mitra)* ಅವರ ಸಮ್ಮುಖದಲ್ಲಿ ಮೃತರ ಗಂಡ ಮತ್ತು ನಾಮಿನಿ ಆಗಿರುವ *SHIVARAJ* ಅವರಿಗೆ *₹5,00,000/- ಮೊತ್ತದ ವಿಮಾ ಮೊತ್ತವನ್ನು (ಮರಣ ಪ್ರಯೋಜನ) ಇತ್ಯರ್ಥಪಡಿಸಲಾಗಿದೆ.*

ಕೇವಲ 50 ಸಾವಿರ ಹೂಡಿಕೆ ಮಾಡಿದ್ದ ಕುಟುಂಬಕ್ಕೆ ಸಂಕಷ್ಟದ ಸಮಯದಲ್ಲಿ 5 ಲಕ್ಷ ರೂಪಾಯಿ ನೆರವು ಸಿಕ್ಕಿದ್ದು, ವಿಮೆಯ ಮಹತ್ವವನ್ನು ಮತ್ತೊಮ್ಮೆ ಸಾರಿದೆ. ಸಕಾಲದಲ್ಲಿ ಪಾಲಿಸಿ ಮಾಡಿಸಿದ್ದರಿಂದ ಕುಟುಂಬಕ್ಕೆ ಆರ್ಥಿಕ ಆಧಾರ ಸಿಕ್ಕಂತಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಈ ಸಂದರ್ಭದಲ್ಲಿ DSM ಶರಣಯ್ಯ ರಾವೂರಮಠ ಅವರು ಮಾತನಾಡಿ, ಪ್ರತಿಯೊಬ್ಬರೂ ತಮ್ಮ ಕುಟುಂಬದ ಭವಿಷ್ಯಕ್ಕಾಗಿ ಎಸ್ ಬಿ‌ ಐ ಲೈಫ್ ವಿಮಾ ರಕ್ಷಣೆ ಪಡೆದುಕೊಳ್ಳುವುದು ಅತ್ಯಗತ್ಯ ಎಂದು ಕರೆ ನೀಡಿದರು.
📲Get App