ಅಲೆಮಾರಿ ಕುಟುಂಬದಲ್ಲಿ ಸಂಭ್ರಮ - ಹಗಲು ವೇಷ ಕಲಾವಿದ ದೇವದುರ್ಗದ ಈರಣ್ಣ ರುದ್ರಾಕ್ಷಿಗೆ ರಾಜ್ಯೋತ್ಸವ ಪ್ರಶಸ್ತಿ - 50 ವರ್ಷಗಳ ಕಲಾ ಸೇವೆಗೆ ಸಂದ ಗೌರವ
ದೇವದುರ್ಗದ ಹಗಲು ವೇಷ ಕಲಾವಿದ ಈರಣ್ಣ ರುದ್ರಾಕ್ಷಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ - ಅಲೆಮಾರಿ ಕಾಲೋನಿಯಲ್ಲಿ ಸಂಭ್ರಮ, 50 ವರ್ಷದಿಂದ ಹಗಲು ವೇಷವೇ ಜೀವನ
ದೇವದುರ್ಗ: ಪಟ್ಟಣದ ನಿವಾಸಿ, ಅಲೆಮಾರಿ ಕುಟುಂಬದ ಹಗಲು ವೇಷ ಕಲಾವಿದ ಈರಣ್ಣ ರುದ್ರಾಕ್ಷಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ ಮಾಡುತ್ತಿದ್ದಂತೆ ಮಾಳಗಡ್ಡೆಯ ಅಲೆಮಾರಿ ಕಾಲೋನಿಯಲ್ಲಿ ಸಂತೋಷದ ಹೊನಲು ಹರಿಯಿತು.
ಈರಣ್ಣ ರುದ್ರಾಕ್ಷಿ ಸುಮಾರು 50 ವರ್ಷಗಳಿಂದ ಹಗಲು ವೇಷ ಕಲೆಯನ್ನೇ ಬದುಕಾಗಿಸಿಕೊಂಡಿದ್ದಾರೆ. ಊರಿಂದ ಊರಿಗೆ ಅಲೆಯುತ್ತಾ ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಹಾಗೂ ರಾಮಾಯಣ, ಮಹಾಭಾರತದ ಕಥೆಗಳಿಗೆ ಹಗಲು ವೇಷ ಹಾಕಿಕೊಂಡು ನಟನೆ ಮಾಡಿ ಸೈ ಎನಿಸಿಕೊಂಡಿದ್ದಾರೆ. ಕಲೆ ಉಳಿಸಿ ಬೆಳೆಸುವದಕ್ಕಾಗಿ ರುದ್ರಾಕ್ಷಿ ಹಗಲು ವೇಷ ಕಲಾ ಸಾಂಸ್ಕೃತಿಕ ಸಂಘ ಸ್ಥಾಪನೆ ಮಾಡಿದ್ದಾರೆ. ಬಡ ಮಕ್ಕಳಿಗೆ ಉಚಿತವಾಗಿ ರಂಗ ತರಬೇತಿ, ಹಾರ್ಮೋನಿಯಂ ವಾದನ, ಮುಖವರ್ಣಿಕೆ ಕಲೆ ಕಲಿಸಿಕೊಡುತ್ತಿದ್ದಾರೆ.
ಊರೂರು ಅಲೆದು ಜನರಿಗೆ ಮಹಾಕಾವ್ಯಗಳ ಪರಿಚಯ ಮಾಡಿಸುವ ಜೊತೆಗೆ ಸರ್ಕಾರದಿಂದ ನಡೆಯುವ ಜಯಂತಿ, ಕನ್ನಡ ಸಾಹಿತ್ಯ ಸಮ್ಮೇಳನ, ಕನ್ನಡ ರಾಜ್ಯೋತ್ಸವ, ಹಂಪಿ ಉತ್ಸವ, ಮೈಸೂರು ದಸರಾ, ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರದರ್ಶನ ನೀಡಿದ್ದಾರೆ. ನೆರೆ ಜಿಲ್ಲೆ, ತೆಲಂಗಾಣದ ಗಡಿಯಲ್ಲೂ ಪ್ರದರ್ಶನ ನೀಡಿದ್ದಾರೆ.
ಇವರ ಸಾಧನೆಗೆ 48ಕ್ಕೂ ಹೆಚ್ಚು ಪ್ರಶಸ್ತಿ ಲಭಿಸಿದ್ದು, ಸಂಘ ಸಂಸ್ಥೆಗಳು ಹಲವು ಬಿರುದು ನೀಡಿ ಗೌರವಿಸಿವೆ. 2014ರಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, 2017ರಲ್ಲಿ ರಾಜ್ಯ ಜಾನಪದ ಪ್ರಶಸ್ತಿ, ಜಿಲ್ಲಾ ಉತ್ಸವ ಪ್ರಶಸ್ತಿ, ರಾಷ್ಟ್ರಮಟ್ಟದ ಕಲಾರತ್ನ, ಮಹಾಕಂಠಶ್ರೀ, ಎಡದೊರೆ ನಾಡಿನ ಜಾನಪದ ಸಾಧಕ, ಜಾನಪದ ಪರಿಶ್ರಮ ಪ್ರಶಸ್ತಿ, ಮಹಿಳಾ ರಾಷ್ಟ್ರೀಯ ಸೇವಾ ಪ್ರಶಸ್ತಿ, ರಾಜ್ಯ ಜಾನಪದ ಪ್ರವಂತ ಪ್ರಶಸ್ತಿ, ಸಂಗೊಳ್ಳಿ ರಾಯಣ್ಣ ಮತ್ತಿತರ ಪ್ರಶಸ್ತಿಗಳು ಲಭಿಸಿವೆ.
ಬಹುರೂಪಿ ವೇಷ: ಭೀಮಾಂಜನೇಯ ಯುದ್ಧ, ಮೋಹಿನಿ ಭಸ್ಮಾಸುರ, ಜಟಾಸುರ ವಧೆ, ಸಂಪೂರ್ಣ ರಾಮಾಯಣ ಹಾಗೂ ಮಹಾಭಾರತ ನಾಟಕದಲ್ಲಿ ರಾಜ, ಕೃಷ್ಣ, ದುರ್ಯೋಧನ, ಅರ್ಜುನ, ಭೀಮನ ಪಾತ್ರ ಮಾಡಿದ್ದಾರೆ. ಕಂಸಾಸುರ ವಧೆ, ಅರ್ಜುನ ಬಬ್ರುವಾಹನ ಕಾಳಗ, ಭೀಷ್ಮ ಪರ್ವ, ಕೌರವ ನತಿ ಸಂಹಾರ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಗಂಡುಗಲಿ ಕುಮಾರರಾಮ, ವೀರಮದಕರಿ ನಾಯಕ ಸೇರಿದಂತೆ ಹಲವು ಐತಿಹಾಸಿಕ ನಾಟಕದಲ್ಲಿ ಬಣ್ಣ ಹಚ್ಚಿದ್ದಾರೆ. ಇದಲ್ಲದೆ ಸಾಂಪ್ರದಾಯಿಕ ಬಹುರೂಪಿ ವೇಷ ತೊಟ್ಟು ಜನರನ್ನು ರಂಜಿಸಿದ್ದಾರೆ.
> "ಊರೂರು ಅಲೆದು ಹಗಲು ವೇಷ ಕಲೆಯನ್ನೇ ಜೀವನ ಮಾಡಿಕೊಂಡಿದ್ದೇವೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನಮ್ಮ ಗುಡಿಸಿಲಿಗೆ ಹುಡುಕಿಕೊಂಡು ಬಂದಿರುವುದು ತುಂಬಾ ಖುಷಿಯಾಗಿದೆ. ಸರ್ಕಾರ ನಮ್ಮಂತಹ ಕಲಾವಿದರನ್ನು ಗುರುತಿಸಿರುವುದು ಸಂತಸ ತಂದಿದೆ" - *ಈರಣ್ಣ ರುದ್ರಾಕ್ಷಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ, ದೇವದುರ್ಗ