🔥 TRENDING Assam Film Critic Launches Regional Ci... Assam inks MoU with Bharti Airtel to b... Cabinet Approves ₹2,014-Crore Greenfie... AAP to Unveil Five-Year Performance Re... Two Punjab Hospitals Revamp Narrative... સુરેન્દ્રનગર LCBએ ધાંગધ્રા ના જેગડવા ગ...
25 Nov 2026•
ગુજરાતી मराठी ਪੰਜਾਬੀ বাংলা

ಹಮಾಲಿ ದರ ಪರಿಷ್ಕರಣೆ ಸಭೆ ಮುಂದೂಡಿಕೆ – ಡಿಸೆಂಬರ್ 5ರೊಳಗೆ ಮತ್ತೊಂದು ಸುತ್ತಿನ ಸಭೆ ನಡೆಸಿ ದರ ಪರಿಷ್ಕರಣೆಗೆ ಕ್ರಮ ಕೈಗೊಳ್ಳುವ ಭರವಸೆ!

✍️ Reporter: Ningappa 🗓 25 Nov 2026, 09:31 PM 👁 16
Share: 💬 WhatsApp 📘 Facebook 𝕏 Post
ಸಿಂಧನೂರು, ನ. 25: ಎಪಿಎಂಸಿ ಮಾರುಕಟ್ಟೆಯ ಹಮಾಲಿ ಕಾರ್ಮಿಕರ ಹಮಾಲಿ ದರಗಳನ್ನು ಕಳೆದ ಎರಡು ವರ್ಷಗಳಿಂದ ಪರಿಷ್ಕರಣೆ ಮಾಡದೆ ವಿಳಂಬ ಮಾಡುತ್ತಿರುವ ಹಿನ್ನೆಲೆಯಲ್ಲಿ, ಇಂದು ಎಪಿಎಂಸಿ ಆಡಳಿತ ಮಂಡಳಿಯವರು, ವರ್ತಕರು ಹಾಗೂ ಹಮಾಲಿ ಕಾರ್ಮಿಕರ ಎರಡು ಸಂಘಟನೆಗಳ ಪ್ರತಿನಿಧಿಗಳ ಸಮಕ್ಷಮದಲ್ಲಿ ಹಮಾಲಿ ದರ ಪರಿಷ್ಕರಣೆ ಕುರಿತು ಸಭೆ ನಡೆಯಿತು.

ಸಭೆಯಲ್ಲಿ ಹಮಾಲಿ ದರ ನಿಗದಿಪಡಿಸುವ ಕುರಿತು ಪ್ರಾಥಮಿಕ ಚರ್ಚೆ ನಡೆಯಿತು. ಈ ಸಂದರ್ಭದಲ್ಲಿ ಹಮಾಲಿ ಕಾರ್ಮಿಕರ ಮುಖಂಡರು ಮತ್ತು ವರ್ತಕರ ನಡುವೆ ಹಾಗೂ ಎಪಿಎಂಸಿ ಕಾರ್ಯದರ್ಶಿಯವರೊಂದಿಗೆ ದರ ಪರಿಷ್ಕರಣೆ ಕುರಿತು ಗಂಭೀರ ಚರ್ಚೆ ನಡೆಯಿತು.

ಹಮಾಲಿ ಕಾರ್ಮಿಕರ ಸಂಘವು ಎರಡು ತಿಂಗಳ ಹಿಂದೆಯೇ ದರ ಪರಿಷ್ಕರಣೆ ಮಾಡುವಂತೆ ಲಿಖಿತ ಮನವಿ ಸಲ್ಲಿಸಿದ್ದರೂ, ಎಪಿಎಂಸಿ ಆಡಳಿತ ಮಂಡಳಿಯು ನಿರ್ಲಕ್ಷ್ಯ ವಹಿಸುತ್ತಿರುವುದನ್ನು ಹಮಾಲಿ ಮುಖಂಡರು ತೀವ್ರವಾಗಿ ಆಕ್ಷೇಪಿಸಿದರು. ಎರಡು ವರ್ಷಗಳಿಂದ ದರ ಪರಿಷ್ಕರಣೆಯಾಗದೆ ಹಮಾಲಿ ಕಾರ್ಮಿಕರು ಸಂಕಷ್ಟ ಅನುಭವಿಸುತ್ತಿದ್ದು, ಇನ್ನು ವಿಳಂಬ ಮಾಡದೆ ಇಂದೇ ಪರಿಷ್ಕೃತ ದರಗಳನ್ನು ನಿಗದಿಪಡಿಸಬೇಕೆಂದು ಒತ್ತಾಯಿಸಿದರು.

ಹಮಾಲಿ ಮುಖಂಡರ ಒತ್ತಾಯಕ್ಕೆ ಸ್ಪಂದಿಸಿದ ಎಪಿಎಂಸಿ ಕಾರ್ಯದರ್ಶಿಯವರು ವಿಳಂಬಕ್ಕಾಗಿ ಕ್ಷಮೆಯಾಚಿಸಿ, ವರ್ತಕರ ಅಭಿಪ್ರಾಯದಂತೆ ಡಿಸೆಂಬರ್ 5, 2026ರೊಳಗಾಗಿ ಎರಡನೇ ಸುತ್ತಿನ ಸಭೆ ಕರೆದು, ಹಮಾಲಿ ದರ ಪರಿಷ್ಕರಣೆಗೆ ಖಂಡಿತವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಈ ಸಭೆಯಲ್ಲಿ ಶ್ರಮಜೀವಿ ಹಮಾಲಿ ಸಂಘದ ಕಾರ್ಮಿಕ ಮುಖಂಡರಾದ ಎಂ. ಗಂಗಾಧರ್, ನಾರಾಯಣ ಬೆಳಗುರ್ಕಿ, ಮಾಬುಸಾಬ ಬೆಳ್ಳಟ್ಟಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಹಮಾಲಿ ಕಾರ್ಮಿಕರ ನ್ಯಾಯಯುತ ಬೇಡಿಕೆಗೆ ಶೀಘ್ರ ಸ್ಪಂದಿಸಿ, ಎರಡು ವರ್ಷಗಳಿಂದ ಬಾಕಿ ಉಳಿದಿರುವ ಹಮಾಲಿ ದರ ಪರಿಷ್ಕರಣೆಯನ್ನು ಯಾವುದೇ ನೆಪವಿಲ್ಲದೆ ತಕ್ಷಣ ಜಾರಿಗೊಳಿಸಬೇಕೆಂದು ಶ್ರಮಜೀವಿ ಹಮಾಲಿ ಸಂಘ ಒತ್ತಾಯಿಸುತ್ತದೆ.
📲Get App