🔥 TRENDING Delhi Police Request Extra Time to Pro... Delhi clears path for release of Rs 73... ग्राम पंचायत मूलाना मगाराम में 152 मतो... ધાંગધ્રામાં પૂર્વ મંત્રીઆઈ કે જાડેજા સ... ગોપાષ્ટમી નિમિત્તે કુકસવાડાની 'માં ગૌ... झारखंड स्थापना दिवस पर पाकुड़िया में अ...
17 Nov 2026•
ગુજરાતી मराठी ਪੰਜਾਬੀ বাংলা

ಮಲ್ಲಿನ ಮಡಗು ಗ್ರಾಮದಲ್ಲಿ ವಿಬಿ-ಜಿ ರಾಮ್-ಜಿ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ಶಿಬಿರ - ಬಿಪಿ, ಶುಗರ್, ಕಫ ಪರೀಕ್ಷೆ, ಸ್ಥಳದಲ್ಲೇ ಮಾತ್ರೆ ವಿತರಣೆ - 382 ರೂ. ಸಮಾನ ಕೂಲಿ, ಬಿಮಾ ಯೋಜನೆಗಳ ಬಗ್ಗೆ ಮಾಹಿತಿ

✍️ Reporter: Ningappa 🗓 17 Nov 2026, 09:41 PM 👁 14
Share: 💬 WhatsApp 📘 Facebook 𝕏 Post

ಮಲ್ಲಿನ ಮಡಗು ಗ್ರಾಮದಲ್ಲಿ ವಿಬಿ-ಜಿ ರಾಮ್-ಜಿ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ಶಿಬಿರ - ಕೆಲಸದ ಸ್ಥಳದಲ್ಲೇ ಬಿಪಿ, ಶುಗರ್, ಕಫ ಪರೀಕ್ಷೆ, ಜ್ವರ, ಕೆಮ್ಮಿಗೆ ಮಾತ್ರೆ ವಿತರಣೆ - 382 ರೂ. ಸಮಾನ ಕೂಲಿ, ಪ್ರಧಾನ ಮಂತ್ರಿ ಬಿಮಾ ಯೋಜನೆಗಳ ಬಗ್ಗೆ ಮಾಹಿತಿ ನೀಡಿದ ಅಧಿಕಾರಿಗಳು

ಮಲ್ಲಿನ ಮಡಗು ಗ್ರಾಮದಲ್ಲಿ ವಿಬಿ-ಜಿ ರಾಮ್-ಜಿ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ಶಿಬಿರ

ರಾಯಚೂರು: ಮಾನ್ವಿ ತಾಲೂಕಿನ ಸಂಗಾಪುರ ಗ್ರಾಮ ಪಂಚಾಯತಿಯ ಮಲ್ಲಿನ ಮಡಗು ಗ್ರಾಮದಲ್ಲಿ ಇದೇ ನವೆಂಬರ್-17 ರಂದು ವಿಬಿ-ಜಿ ರಾಮ್-ಜಿ (ವಿಕಸಿತ ಭಾರತ-ಗ್ಯಾರಂಟಿ ಫಾರ್ ರೋಜ್ ಗಾರ್ ಅಂಡ್ ಆಜೀವಿಕ ಮಿಷನ್ ಗ್ರಾಮೀಣ) ಯೋಜನೆಯ ಕೂಲಿ ಕಾರ್ಮಿಕರ ಕೆಲಸದ ಸ್ಥಳದಲ್ಲಿ ಉಚಿತ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಯಿತು.

ಸಂಗಾಪುರದ ಸಮುದಾಯ ಆರೋಗ್ಯ ಅಧಿಕಾರಿ ಸುಭಾನ್ ಮಾತನಾಡಿ, ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡಬೇಕು, ಕೆಲಸ ಮಾಡಲು ಆರೋಗ್ಯ ಮುಖ್ಯ, ಆರೋಗ್ಯವಿಲ್ಲದಿದ್ದರೆ ಕೆಲಸ ಮಾಡಲು ಸಾಧ್ಯವಿಲ್ಲ, ಗ್ರಾಮೀಣ ಮಟ್ಟದಲ್ಲಿ ಉಪ-ಕೇಂದ್ರಕ್ಕೆ ಹೋಗಿ ಆರೋಗ್ಯ ತಪಾಸಣೆ ಮಾಡಿಸುವುದಿಲ್ಲ, ಅದಕ್ಕಾಗಿ ಕಾಮಗಾರಿ ಸ್ಥಳದಲ್ಲಿ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ, ಕೈ ತೊಳೆದುಕೊಂಡು ಊಟ ಮಾಡಬೇಕು, ನಿರಂತರ ಕಫ ಇರುವವರು ಕಫ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಸಂಗಾಪುರ ಗ್ರಾಮದ ಸಮುದಾಯ ಆರೋಗ್ಯ ಅಧಿಕಾರಿ ಸುಭಾನ್ ಮತ್ತು ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ತನುಜಾ ಅವರು ಕೂಲಿ ಕಾರ್ಮಿಕರಿಗೆ ಬಿಪಿ, ಶುಗರ್, ಅತಿಯಾದ ಕೆಮ್ಮು ಇರುವ ವ್ಯಕ್ತಿಗಳಿಗೆ ಗಂಟಲು ಕಫ ಪರೀಕ್ಷೆ ಮಾಡುವುದರ ಜೊತೆಗೆ ಅವಶ್ಯಕತೆ ಇರುವ ವ್ಯಕ್ತಿಗಳಿಗೆ ಜ್ವರ, ಕೆಮ್ಮು ಹಾಗೂ ಇನ್ನಿತರ ಸಣ್ಣಪುಟ್ಟ ಕಾಯಿಲೆಗಳಿಗೆ ಸ್ಥಳದಲ್ಲಿಯೇ ಮಾತ್ರೆ ನೀಡಿದರು.

ತಾಲೂಕು ಪಂಚಾಯಿತಿ ಮಾನ್ವಿಯ ತಾಲೂಕು ಐಇಸಿ ಸಂಯೋಜಕ ಈರೇಶ ಮಾತನಾಡಿ, ಮೇಟಿಗಳು ಎನ್ ಎಂ ಎಂ ಎಸ್ ತಂತ್ರಾಂಶದಲ್ಲಿ ಮುಖ ಚಹರೆ ಕಡ್ಡಾಯವಾಗಿ ಎರಡು ಬಾರಿ ಹಾಜರಾತಿ ದಾಖಲಿಸಬೇಕು, ವಲಸೆ ಹೋಗಬೇಡಿ ನಿಮ್ಮೂರಲ್ಲೇ ಉದ್ಯೋಗ ಖಾತರಿ ಇದೆ ಹಾಗೂ ಸ್ತ್ರೀ ಚೇತನ ಅಭಿಯಾನದಡಿ ಗಂಡು ಮತ್ತು ಹೆಣ್ಣಿಗೆ 382 ರೂ. ಗಳ ಸಮಾನ ಕೂಲಿ ಇದೆ ಎಂದು ತಿಳಿಸಿದರು.

ಸಂಗಾಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸೈಯದ್ ಶಾ ಮಾತನಾಡಿ, ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ ಬಗ್ಗೆ ಮಾಹಿತಿ ನೀಡಿದರು.

ಸಾಮಾಜಿಕ ಭದ್ರತೆ ಕಲ್ಪಿಸಲು ಯೋಜನೆಯಡಿ 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು, ವಿಶೇಷ ಚೇತನರು ಹಾಗೂ ಗರ್ಭಿಣಿಯರಿಗೆ ಶೇಕಡಾ 50 ರಷ್ಟು ಕೆಲಸ ಮಾಡಿದರೂ ಪೂರ್ತಿ ಪ್ರಮಾಣದ ಕೂಲಿ ನೀಡಲಾಗುತ್ತದೆ. ತಾವು ನಿರ್ವಹಿಸುವ ಕೆಲಸದ ಆಧಾರದ ಮೇಲೆ ಕೂಲಿ ನೀಡಲಾಗುತ್ತಿದೆ. ಕೂಲಿ ಕಾರ್ಮಿಕರು ಎರಡು ಸಲ ಹಾಜರಾತಿ ಹಾಕಿದ ಮೇಲೆ ಮನೆಗೆ ಹೋಗಬೇಕು ಎಂದು ತಿಳಿಸಿದರು.

ಸದರಿ ಸಂದರ್ಭದಲ್ಲಿ ಕಪಗಲ್ ಗ್ರಾಮ ಪಂಚಾಯಿತಿ ಬಿಎಫ್ಟಿ ರಾಯಪ್ಪ, ಗ್ರಾಮದ ವಿಬಿ-ಜಿ ರಾಮ್-ಜಿ ಕೂಲಿ ಕಾರ್ಮಿಕರು ಹಾಗೂ ಮೇಟಿಗಳು ಹಾಜರಿದ್ದರು.
📲Get App