🔥 TRENDING Punjab vs Haryana SMAT Showdown Stream... Haryana Approves ₹54 Crore Development... Bihar, captained by Sooryavanshi, aims... Bhuwan Bam Says Perfection Is Counterp... Man Drowns While Retrieving Fish from... इकौना क्षेत्र अहिरानपुरवा बेलकर में रा...
14 Nov 2026•
ગુજરાતી मराठी ਪੰਜਾਬੀ বাংলা

ಎಂ.ಬಿ. ಪಾಟೀಲ್ ಅವರ ನಿರಂತರ ಶ್ರಮದ ಫಲ: ಉದ್ಯೋಗೋನ್ಮುಖ ಕೈಗಾರಿಕಾ ಹಬ್ ಆಗಿ ಬೆಳೆಯುತ್ತಿರುವ ಮಳಿನಾಡ ಕೈಗಾರಿಕಾ ಪ್ರದೇಶ 3,500 ಎಕರೆ ಭೂಪ್ರದೇಶದಲ್ಲಿ ಕೈಗಾರಿಕಾ ಅಭಿವೃದ್ಧಿಗೆ ವೇಗ; ಕ್ಯಾಂಪಾ ಕೋಲಾದಿಂದ ₹1,800 ಕೋಟಿಗೂ ಅಧಿಕ ಹೂಡಿಕೆ, 1,200ಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ

✍️ Reporter: YALLAPPA RAGATE (PATIL) 🗓 14 Nov 2026, 08:24 AM 👁 33
Share: 💬 WhatsApp 📘 Facebook 𝕏 Post
ಎಂ.ಬಿ. ಪಾಟೀಲ್ ಅವರ ನಿರಂತರ ಶ್ರಮದ ಫಲ: ಉದ್ಯೋಗೋನ್ಮುಖ ಕೈಗಾರಿಕಾ ಹಬ್ ಆಗಿ ಬೆಳೆಯುತ್ತಿರುವ ಮಳಿನಾಡ ಕೈಗಾರಿಕಾ ಪ್ರದೇಶ
3,500 ಎಕರೆ ಭೂಪ್ರದೇಶದಲ್ಲಿ ಕೈಗಾರಿಕಾ ಅಭಿವೃದ್ಧಿಗೆ ವೇಗ; ಕ್ಯಾಂಪಾ ಕೋಲಾದಿಂದ ₹1,800 ಕೋಟಿಗೂ ಅಧಿಕ ಹೂಡಿಕೆ, 1,200ಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ
ವಿಜಯಪುರ: ಸಚಿವ ಎಂ.ಬಿ. ಪಾಟೀಲ್ ಅವರ ನಿರಂತರ ಪ್ರಯತ್ನ ಹಾಗೂ ಶ್ರಮದ ಫಲವಾಗಿ ಮಳಿನಾಡ ಕೈಗಾರಿಕಾ ಪ್ರದೇಶವು ಉದ್ಯೋಗೋನ್ಮುಖ ಕೈಗಾರಿಕಾ ಹಬ್ ಆಗಿ ಬೆಳೆಯುತ್ತಿದೆ. ಈ ಪ್ರದೇಶದಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಸುಮಾರು 3,500 ಎಕರೆ ಭೂಪ್ರದೇಶದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಅವಕಾಶ ಕಲ್ಪಿಸಲಾಗುತ್ತಿದೆ.
ಈ ಕೈಗಾರಿಕಾ ಪ್ರದೇಶದಲ್ಲಿ ಕ್ಯಾಂಪಾ ಕೋಲಾ ಕಂಪನಿಯು ₹1,800 ಕೋಟಿಗೂ ಅಧಿಕ ಬಂಡವಾಳ ಹೂಡಿಕೆ ಮಾಡಿದ್ದು, ಇದರ ಮೂಲಕ 1,200ಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ಪ್ರಚಾರ ಫಲಕದಲ್ಲಿ ತಿಳಿಸಲಾಗಿದೆ.
ಕೈಗಾರಿಕೆಗಳ ಸ್ಥಾಪನೆಯಿಂದ ಸ್ಥಳೀಯ ಯುವಜನತೆಗೆ ಉದ್ಯೋಗಾವಕಾಶಗಳು ದೊರೆಯಲಿದ್ದು, ಈ ಭಾಗದ ಆರ್ಥಿಕ ಹಾಗೂ ಕೈಗಾರಿಕಾ ಅಭಿವೃದ್ಧಿಗೆ ಮತ್ತಷ್ಟು ಉತ್ತೇಜನ ಸಿಗುವ ನಿರೀಕ್ಷೆಯಿದೆ.
ಸಚಿವ ಎಂ.ಬಿ. ಪಾಟೀಲ್ ಅವರ ಕೈಗಾರಿಕಾ ಅಭಿವೃದ್ಧಿಯ ಪ್ರಯತ್ನಗಳಿಗೆ ಅಭಿನಂದನೆ ಸಲ್ಲಿಸಿ, ವಿಜಯಪುರ ಜಿಲ್ಲಾ ಜಾಗೃತಿ ಉಸ್ತುವಾರಿ ಸಮಿತಿ ಸದಸ್ಯರು ಹಾಗೂ ದಸಂಸ ಸಮಿತಿಯ ಜಿಲ್ಲಾ ಅಧ್ಯಕ್ಷರಾದ ಯಮನಪ್ಪ ಸಿದರಡ್ಡಿ ಅವರು ಶುಭಾಶಯಗಳನ್ನು ಕೋರಿದ್ದಾರೆ.
📲Get App