🔥 TRENDING Kashmir support Pandit mr Nazir Ahmad... Dr. H.M. Babu Appointed Raichur Distri... Dr. H.M. Babu Appointed Raichur Distri... Dantares में खरीदारी का आयोजन BJP Alleges Maoist Influence Behind Ne... Sikkim's Nunam Phung Subba Secures Top...
06 Nov 2026•
ગુજરાતી मराठी ਪੰਜਾਬੀ বাংলা

ಮನವಿ ಪತ್ರ ಅಲ್ಲ, ರಾಜೀನಾಮೆ ಪತ್ರ ಕೊಡ್ತೀವಿ ಅಂತ ಹೇಳಿ ನೀರು ತನ್ನಿ - ರೈತರಿಗೆ 30 ರವರೆಗೆ ನೀರು ಬಿಡಿ - ದೆಹಲಿಗೆ ಹೋಗಿ ಫೋಟೋ, ಸೆಲ್ಫಿ ಬೇಡ, ರೈತರಿಗೆ ನೀರು ಬೇಕು - ಧರಣಿಯಲ್ಲಿ ಮಾಜಿ ಶಾಸಕ ರಾಜುಗೌಡ ಸಹೋದರ ಬಬುಲ್ ಗೌಡ ಆಕ್ರೋಶ

✍️ Reporter: Ningappa 🗓 06 Nov 2026, 09:31 PM 👁 19
Share: 💬 WhatsApp 📘 Facebook 𝕏 Post

ರೈತರಿಗೆ ನೀರಿಗಾಗಿ ಧರಣಿಯಲ್ಲಿ ಮಾಜಿ ಶಾಸಕ ರಾಜುಗೌಡ ಸಹೋದರ ಬಬುಲ್ ಗೌಡ ಆಕ್ರೋಶ ಭಾಷಣ - ಮನವಿ ಪತ್ರ ಕೊಡುವ ಸ್ಥಾನಕ್ಕೆ ನಿಮ್ಮನ್ನು ಕೂರಿಸಿಲ್ಲ, ರಾಜೀನಾಮೆ ಕೊಡ್ತೀವಿ ಅಂತ ಹೇಳಿ ಹೋಗಿ ನೀರು ತನ್ನಿ, ರೈತರಿಗೆ 30 ರವರೆಗೆ ನೀರು ಬರಲಿ ಎಂದು ಆಗ್ರಹ - ದೆಹಲಿಗೆ ಹೋಗಿ ಫೋಟೋ, ಸೆಲ್ಫಿ ಬೇಡ, ರೈತರಿಗೆ ನೀರು ಬೇಕು - ನ. 6 ಯಾದಗಿರಿ ಜಿಲ್ಲೆ ಬಂದ್ ಗೆ ರಾಜಕಾರಣಿಗಳ ಡಂಬರಾಟ ಎಂದು ಪ್ರಶ್ನೆ

ಮನವಿ ಪತ್ರ ಅಲ್ಲ, ರಾಜೀನಾಮೆ ಪತ್ರ ಕೊಡ್ತೀವಿ ಅಂತ ಹೇಳಿ ನೀರು ತನ್ನಿ - ಬಬುಲ್ ಗೌಡ ಆಕ್ರೋಶ

ರಾಯಚೂರು/ಸುರಪುರ: ರೈತರಿಗೆ ನೀರಿಗಾಗಿ ನಡೆದ ಧರಣಿಯಲ್ಲಿ ಮಾತನಾಡಿದ ಮಾಜಿ ಶಾಸಕ ರಾಜುಗೌಡ ಸಹೋದರ ಬಬುಲ್ ಗೌಡ ಅವರು, ನೀವು ಮನವಿ ಪತ್ರ ಕೊಡುವಂತ ಸ್ಥಾನಕ್ಕೆ ಕುಂದ್ರಿಸಿಲ್ಲ, ನಿಮಗೆ ಜನರು ನಮ್ಮ ಜನರಿಗೆ ನೀರಿನ ಕಷ್ಟ ಆಗ್ಯದ ಮನವಿ ಪತ್ರ ಅಲ್ಲ ರಾಜೀನಾಮೆ ಪತ್ರ ಕೊಡ್ತೀವಿ ಅಂತ ಹೇಳಿ ನೀವು ಹೋಗಿ ರಾಜೀನಾಮೆ ಕೊಡ್ರಿ, ನಮ್ಮ ರೈತರಿಗೆ ಮೂವತ್ತರವರೆಗೆ ನೀರು ಬರಲಿ ಎಂದು ಆಗ್ರಹಿಸಿದರು.

ಹಿಂಗೇ ಪರಿಸ್ಥಿತಿ ಬಂದಾಗ ನಮ್ಮದೇ ಬಿಜೆಪಿ ಸರ್ಕಾರ ಇದ್ದಂತ ಸಮಯದಾಗ ರಾಜು ಗೌಡ ಆಗಿರಬಹುದು, ಶಿವನಗೌಡ ಆಗಿರಬಹುದು ಹೋಗಿ ಮನವಿ ಪತ್ರ ಕೊಡಲಿಲ್ಲ, ರಾಜೀನಾಮೆ ಕೊಡ್ತೀವಿ ಅಂತ ಹೇಳಿ ಜಗಳ ಆಡಿದಾಗ ನಿಮಗೆ ಆಲಮಟ್ಟಿ ಡ್ಯಾಂನಿಂದ ನೀರು ಬಿಡಿಸೋದು ಆಗವಲ್ದು, ಅವರು ಗಂಡು ಮಕ್ಕಳು ಕೊಯ್ನಾ ಡ್ಯಾಂನಲ್ಲಿ ನೀರು ಬಿಡಿಸಿದಂತವರು ಎಂದು ಹೇಳಿದರು.

ಈಗೇನು ಬಿಡಕ್ಕೆ ತಯಾರಿಲ್ಲ ಯಾಕ, ನಮ್ಮಲ್ಲಿ ಯಾರು ಕೇಳೋರಿಲ್ಲ ಎಂದು ಪ್ರಶ್ನಿಸಿದರು.

ಅಲ್ಲಿ ರೈತರು ಅವರಿಗೆ ಕಬ್ಬಿಗೆ ನೀರು ಕೊಡಿಸಲಿಲ್ಲ, ಮುಂದಿನ ಸರಿ ಡೊಮ್ಮು ಅವರು ಇವುಕ್ಕೆ ಅಲ್ಲೂ ವಿಚಾರ ಏನು, ಎಂಎಲ್ಎ ಮಾಡಿ ಕುಂದ್ರಿಸಿರಲ್ಲ, ನಮ್ಮ ಜಿಲ್ಲೆಗಳಾಯ್ತು, ಈ ಡ್ಯಾಂಗೆ ಸಂಬಂಧಪಟ್ಟಂತವರಿಗೆ ಪುಣ್ಯಾತ್ಮರೇ ನೀವು ಮೊದಲನೇ ಪೀಳಿಗೆ ನೀರು ಕೊಡಿಸಲಿಲ್ಲ ಅಂದರೆ ನಿಮ್ಮ ರೈತರು ಸಾಯೋ ತನಕ ಎಂಎಲ್ಎ ಮಾಡಲ್ಲ, ನೀವು ರೈತರ ಸಲುವಾಗಿ ಗುಡಿಸಬೇಡಿರಿ ಎಂದು ಎಚ್ಚರಿಸಿದರು.

ದೆಹಲಿಗೆ ಹೋಗಿ ಫೋಟೋಗಳು ಬರ್ತಾವ, ಸೆಲ್ಫಿಗಳು ಬರ್ತಾವ, ಚೈನ್ ಹೊಡಿಯೋಕೆ ದೆಹಲಿಗೆ ಹೋಗಿ ಅದು ಅವಶ್ಯಕತೆ ಆದ್ರಾ ಎಂದು ಪ್ರಶ್ನಿಸಿದ ಬಬುಲ್ ಗೌಡ ಅವರು, ರೈತರಿಗೆ ಏನು ಬೇಕು, ನಮ್ಮ ತಾಲೂಕಿನ ರೈತರಿಗೆ ನೀರು ಬೇಕು ಎಂದರು.

ರೈತರಿಗೆ ನೀರು ಮುಖ್ಯ, ಇಲ್ಲಿ ಮುಖ್ಯ ಇದ್ದಂತ ರೈತರಿಗೆ ಬೆನ್ನೆಲುಬಾಗಿ ನಿಂತರೆ ನಾಳೆ ನೀನು ಬಂದಾಗ ನಿನಗೆ ಸನ್ಮಾನ ಮಾಡುತ್ತಾರೆ, ಮತ್ತೊಮ್ಮೆ ಎಂಎಲ್ಎ ಆಗಿ ಮಾಡಿ ಕಳುಹಿಸುತ್ತಾರೆ. ಇಷ್ಟೇ ವಿಚಾರ ಮಾಡಿರಿ ಎಂದು ಹೇಳಿದರು.

ರಾಜಕೀಯ ಅಂದರೆ ಹೇಗೆ ಇರುತ್ತದೆ, ಕೇವಲ ರಾಜು ಗೌಡ ಅನೌನ್ಸ್ ಮಾಡಿದ ಆರನೇ ತಾರೀಖು ಯಾದಗಿರಿ ಜಿಲ್ಲೆ ಬಂದ್ ಅನ್ನುವುದಕ್ಕೆ ಇವರು ಹೆಂಗೆ ಡಂಬರಾಟ ಆಡುತ್ತಾರೆ ರಾಜಕಾರಣಿಗಳು ಅನ್ನುವುದು ನೀವು ತಿಳಿದುಕೊಳ್ಳಿರಿ. ಎಲ್ಲಾ ರೈತರು ಬಂದು ಆರನೇ ತಾರೀಖು ಅಂದ ಅವರ ಹೆಸರು ಬರುತ್ತದೆ, ಮಂದಿ ಕೇಳುತ್ತಾರೆ ಎಂದು ಹೇಳಿದರು.

ಭಾಷಣಪೂರ್ಣ ಹಿಡಿದುಕೊಂಡು ಒಬ್ಬ ಮಿನಿಸ್ಟರ್ ಹಿಡಿದುಕೊಂಡು ಓಡಿ ಹೋಗಿ ಮೂವರು ಮನವಿ ಪತ್ರ ಕೊಟ್ಟರು. ಎಕ್ಕಡ ನಿಂತು ಹೊಯ್ಕೊಂಡು ಸರ್ಕಾರದ ಅವರದೇ, ಆ ಅಧಿಕಾರದಾಗೈತಿ ಎಂದು ಹೇಳಿದರು.

ಮತ್ತೆ ನೀವು ಎಷ್ಟು ಸತ್ಯ ಹರಿಶ್ಚಂದ್ರ ಇದ್ದೀರಪ್ಪ, ಮಂದಿಗೆ ನೀವು ಎಷ್ಟು ಮೋಸ ಮಾಡಾಕತ್ತಿರಪ್ಪ, ಅಲ್ಲ ಸರ್ಕಾರ ನಿಮ್ಮದು ಇಟ್ಟುಕೊಂಡು ಎಂಎಲ್ಎಗಳು ನೀವೇ ಇದ್ದು ಹೋಗಿ ನೀವೇ ಮನವಿ ಪತ್ರ ಕೊಟ್ಟರೆ ಹೇಗೆ ಎಂದು ಪ್ರಶ್ನಿಸಿದರು.
📲Get App