🔥 ट्रेंडिंग गुजरात के दो लोगों को दुबई के हैंडलर्स... आरईडी परेड में CRPF और छत्तीसगढ़ पुलिस... मुख्य मंत्री मोहन और साई ने लाइव एनडीट... बैलाडिला बुल्स ने 6-2 से मेनपट टाइटन्स... राजकीय नर्सेस संघ ने उत्तर प्रदेश के स... বিশ্বজুড়ে যত বড় সংকটই আসুক, আপনাদের...
31 अक्टू. 2026•
ગુજરાતી मराठी ਪੰਜਾਬੀ বাংলা

ತಾಲೂಕು ಸೇರ್ಪಡೆ ವಿವಾದ: ನ.3 ರಂದು ಗ್ರಾಮ ಸಭೆ ಕರೆದ ತಹಶೀಲ್ದಾರ್ ಅರಕೇರಾ - ನಾಗರೀಕರ ಅಭಿಪ್ರಾಯ ಸಂಗ್ರಹಕ್ಕೆ ಸೂಚನೆ

✍️ रिपोर्टर: Ningappa 🗓 30 अक्टू. 2026, 10:54 PM 👁 18
शेयर करें: 💬 WhatsApp 📘 Facebook 𝕏 Post
ದೇವದುರ್ಗ: ತಾಲೂಕಿನ ಸೋಮನಮರಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳನ್ನು ಯಾವ ತಾಲೂಕಿನಲ್ಲಿ ಮುಂದುವರಿಸಬೇಕು ಎಂಬ ವಿವಾದಕ್ಕೆ ಸಂಬಂಧಿಸಿದಂತೆ ಅರಕೇರಾ ತಹಶೀಲ್ದಾರ್ ಕಚೇರಿ ಮಹತ್ವದ ಹೆಜ್ಜೆ ಇಟ್ಟಿದೆ.

ಗ್ರಾಮಸ್ಥರು ದಿನಾಂಕ 12.10.2026 ರಂದು ಪ್ರತಿಭಟನೆ ಮೂಲಕ ಸಲ್ಲಿಸಿದ್ದ ಮನವಿ ಪತ್ರದ ಆಧಾರದ ಮೇಲೆ, ನವೆಂಬರ್ 03, 2026 ರಂದು ಬೆಳಿಗ್ಗೆ 11 ಗಂಟೆಗೆ ಸೋಮನಮರಡಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಗ್ರಾಮ ಸಭೆಯನ್ನು ನಿಗದಿ ಮಾಡಲಾಗಿದೆ.

ಅರಕೇರಾ ತಹಶೀಲ್ದಾರ್ ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳ ನೇತೃತ್ವದಲ್ಲಿ ನಡೆಯುವ ಈ ಸಭೆಯಲ್ಲಿ ಗ್ರಾಮಗಳನ್ನು ಅರಕೇರಾ ತಾಲೂಕಿನಲ್ಲಿಯೇ ಮುಂದುವರಿಸಬೇಕೇ ಅಥವಾ ದೇವದುರ್ಗ ತಾಲೂಕಿಗೆ ಸೇರ್ಪಡೆ ಮಾಡಬೇಕೇ ಎಂಬ ಬಗ್ಗೆ ಗ್ರಾಮಸ್ಥರ ಅಭಿಪ್ರಾಯ ಸಂಗ್ರಹಿಸಲಾಗುವುದು.

ಈ ಸಭೆಗೆ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಸ್ಥರು ಕಡ್ಡಾಯವಾಗಿ ಹಾಜರಾಗಬೇಕು ಎಂದು ತಹಶೀಲ್ದಾರರು ಸೂಚನಾ ಪತ್ರದಲ್ಲಿ ಕೋರಿದ್ದಾರೆ.

ಇದು ಅಖಂಡ ದೇವದುರ್ಗ ಹೋರಾಟಗಾರರಿಗೆ ಸಿಕ್ಕ ಮೊದಲ ಗೆಲುವು ಎಂದು ಹೇಳಲಾಗುತ್ತಿದೆ.
📲Get App