🔥 TRENDING સુરતમાં પલસાણા તાલુકાના બગુમરા ગામની સ... સુરતના બારડોલી તાલુકા, નિઝર ગામમાં રાત... ದೇವದುರ್ಗದಲ್ಲಿ ರೂ.4.13 ಕೋಟಿ ವೆಚ್ಚದ ಮೌಲಾ... નરોડામાં યુવકની લાકડીઓ અને ધોકાથી માર... बड़ी खबर | इंदौर-धार रेल लाइन का हाईस्... સુરતમાં નેશનલ હાઈવે‑48 પર તેલનું છટકાવ...
03 Nov 2026•
ગુજરાતી मराठी ਪੰਜਾਬੀ বাংলা

ರಾಯಚೂರು ರಿಮ್ಸ್ ಆಸ್ಪತ್ರೆಯಲ್ಲಿ ಸ್ವಚ್ಛತಾ ಹೀ ಸೇವಾ ಜಾಗೃತಿ - ವಾರ್ಡ್ 29 ರಲ್ಲಿ ನಾಲ್ಕು ವಿಧದ ಕಸ ವಿಂಗಡಣೆ ಬಗ್ಗೆ ಅರಿವು

✍️ Reporter: Ningappa 🗓 03 Nov 2026, 06:12 PM 👁 11
Share: 💬 WhatsApp 📘 Facebook 𝕏 Post

ರಾಯಚೂರಿನ ವಾರ್ಡ್ 29 ಎಲ್ ಬಿಎಸ್ ನಗರದ ರಿಮ್ಸ್ ಆಸ್ಪತ್ರೆಯಲ್ಲಿ ಸ್ವಚ್ಛತೆಯೇ ಸೇವೆ ಅಭಿಯಾನ - ಆಸ್ಪತ್ರೆಯ ಅಪಾಯಕಾರಿ ತ್ಯಾಜ್ಯ, ಜೈವಿಕ, ರಾಸಾಯನಿಕ ತ್ಯಾಜ್ಯ ವಿಂಗಡಣೆ ಕುರಿತು ವೈದ್ಯರು, ಶುಶ್ರೂಷಕಿಯರಿಗೆ ಪಾಲಿಕೆಯ ಘನತ್ಯಾಜ್ಯ ತಜ್ಞ ಎಂಡಿ ಶಫಿ ಅವರಿಂದ ಜಾಗೃತಿ

ರಾಯಚೂರು ರಿಮ್ಸ್ ಆಸ್ಪತ್ರೆಯಲ್ಲಿ ಸ್ವಚ್ಛತಾ ಹೀ ಸೇವಾ ಅಭಿಯಾನ

ರಾಯಚೂರು, ನ. 3: ಸ್ವಚ್ಛತೆಯೇ ಸೇವೆ (ಸ್ವಚ್ಛತಾ ಹೀ ಸೇವಾ) ಅಭಿಯಾನದ ಅಂಗವಾಗಿ ಇಂದು ನಗರದ ವಾರ್ಡ್ ನಂಬರ್ 29ರ ಎಲ್ ಬಿಎಸ್ ನಗರದ ರಿಮ್ಸ್ ಆಸ್ಪತ್ರೆಯಲ್ಲಿ ಜಾಗೃತಿ ಅಭಿಯಾನವನ್ನು ಆಯೋಜಿಸಲಾಗಿತ್ತು.

ರೋಗಿಗಳ ಸ್ವಾಸ್ಥ್ಯವನ್ನು ಕಾಪಾಡುವಲ್ಲಿ ಶ್ರಮಿಸುತ್ತಿರುವ ಶುಶ್ರೂಷಕಿಯರು ಹಾಗೂ ವೈದ್ಯಾಧಿಕಾರಿಗಳ ಸಮ್ಮುಖದಲ್ಲಿ ಜರುಗಿದ ಅಭಿಯಾನದಲ್ಲಿ ನಾಲ್ಕು ತರದ ಕಸ ವಿಂಗಡಣೆ ಹಾಗೂ ಪ್ರಮುಖವಾಗಿ ಆಸ್ಪತ್ರೆಗಳಂತಹ ಸೂಕ್ಷ್ಮ ಪ್ರದೇಶದಲ್ಲಿ ಅಪಾಯಕಾರಿ ತ್ಯಾಜ್ಯ ವಿಂಗಡಣೆ ಕುರಿತು ಅರಿವು ಮೂಡಿಸಲಾಯಿತು.

ವೈದ್ಯರು ಹಾಗೂ ಶುಶ್ರೂಷಕಿಯರು ತಮ್ಮ ದಿನನಿತ್ಯದ ಜೀವನದಲ್ಲಿ ಅನೇಕ ವಿಧದ ಜೈವಿಕ ಹಾಗೂ ರಾಸಾಯನಿಕ ತ್ಯಾಜ್ಯದ ಸಮಸ್ಯೆಯನ್ನು ಎದುರಿಸುತ್ತಾರೆ. ಇದನ್ನು ಮೂಲದಲ್ಲಿಯೇ ಸಂಗ್ರಹಿಸಿ ಬೇರ್ಪಡಿಸಿ ನೂತನ ಘನತ್ಯಾಜ್ಯ ನಿರ್ವಹಣೆಯಲ್ಲಿ ಹೊಸತಾಗಿ ಜಾರಿಯಾಗಿರುವ ನಾಲ್ಕು ವಿಧದ ಕಸ ವಿಂಗಡಣೆಯ ಕುರಿತು ಪಾಲಿಕೆಯ ಘನತ್ಯಾಜ್ಯ ನಿರ್ವಹಣಾ ತಜ್ಞ ಎಂಡಿ ಶಫಿ ಅವರು ತಿಳಿಸಿದರು.

ಈ ಸಂದರ್ಭದಲ್ಲಿ ರಿಮ್ಸ್ ಆಸ್ಪತ್ರೆಯ ವೈದ್ಯಾಧಿಕಾರಿಯಾದ ಶ್ರೀ ಬಸವರಾಜ ಹಾಗೂ ಆಸ್ಪತ್ರೆಯ ಹಾಗೂ ಪಾಲಿಕೆಯ ಸಿಬ್ಬಂದಿಗಳು ಹಾಜರಿದ್ದರು.
📲Get App