🔥 ट्रेंडिंग कुड़ाकुड़ाह में गाय पाई गई, डीएमआरसी न... दिल्ली को मिली रिकॉर्ड ₹2,711 करोड़ रे... दिल्ली ऑटो‑टैक्सी यूनियनों ने 19 नवंबर... திருவாரூர் ஆட்சியரக கூட்டரங்கில் தமிழக... हरियाणा ने मांग की मघमुद गज़नी द्वारा... मैक्स लैब ने पैनिपत में नई डायग्नोस्टि...
18 नव. 2026•
ગુજરાતી मराठी ਪੰਜਾਬੀ বাংলা

25 ದಿನಗಳಿಂದ ಸುಟ್ಟುಹೋದ ಬೋರ್‌ವೆಲ್ ಮೋಟಾರ್ - ಕುಡಿಯುವ ನೀರಿಗಾಗಿ ಬೀದಿಗಿಳಿದ ಯಲಗಟ್ಟಾ ಗ್ರಾಮದ ಮಹಿಳೆಯರು - ಪಂಚಾಯಿತಿ ನಿರ್ಲಕ್ಷ್ಯಕ್ಕೆ ಬೇಸತ್ತ ಜನತೆ - ತಾಯಮ್ಮನ ಬೋರ್ ಮುಂದೆ ಕಾದು ಕುಳಿತ ಅಂಬೇಡ್ಕರ್ ನಗರದ ನಿವಾಸಿಗಳು

✍️ रिपोर्टर: Ningappa 🗓 18 नव. 2026, 09:17 PM 👁 24
शेयर करें: 💬 WhatsApp 📘 Facebook 𝕏 Post

25 ದಿನಗಳಿಂದ ಸುಟ್ಟುಹೋದ ಬೋರ್‌ವೆಲ್ ಮೋಟಾರ್ - ಕುಡಿಯುವ ನೀರಿಗಾಗಿ ಬೀದಿಗಿಳಿದ ಯಲಗಟ್ಟಾ ಗ್ರಾಮದ ಮಹಿಳೆಯರು - ಅಂಬೇಡ್ಕರ್ ನಗರ, ಕೆಂಚಮ್ಮನ ಓಣಿಯಲ್ಲಿ ಹನಿ ನೀರಿಗೂ ಪರದಾಟ - ತಾಯಮ್ಮನ ಬೋರ್ ಮುಂದೆ ಗಂಟೆಗಟ್ಟಲೆ ಕಾದು ನೀರು ತರುವ ದುಸ್ಥಿತಿ - ದುರಸ್ತಿ ಮಾಡದಿದ್ದರೆ ಪಂಚಾಯಿತಿಗೆ ಮುತ್ತಿಗೆ ಹಾಕುವ ಎಚ್ಚರಿಕೆ

ಲಿಂಗಸುಗೂರು: ತಾಲೂಕಿನ ರೋಡಲಬಂಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಲಗಟ್ಟಾ ಗ್ರಾಮದಲ್ಲಿ ಕುಡಿಯುವ ನೀರಿನ ಹಾಹಾಕಾರ ಮುಗಿಲು ಮುಟ್ಟಿದ್ದು, ಗ್ರಾಮ ಪಂಚಾಯಿತಿ ಆಡಳಿತ ವ್ಯವಸ್ಥೆಯ ವಿರುದ್ಧ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ರಾಮದ ಒಂದನೇ ವಾರ್ಡ್‌ನ ಅಂಬೇಡ್ಕರ್ ನಗರದ ಬೋರ್‌ವೆಲ್ ಮೋಟಾರ್ ಸುಟ್ಟು ಹೋಗಿ ಬರೋಬ್ಬರಿ 25 ದಿನಗಳು ಕಳೆದಿವೆ. ಆದರೆ, ಇದುವರೆಗೂ ಪಂಚಾಯಿತಿ ಅಧಿಕಾರಿಗಳಾಗಲಿ ಅಥವಾ ಜನಪ್ರತಿನಿಧಿಗಳಾಗಲಿ ಮೋಟಾರ್ ದುರಸ್ತಿಗೊಳಿಸುವ ಗೋಜಿಗೆ ಹೋಗಿಲ್ಲ. ಅಧಿಕಾರಿಗಳ ಈ ದಿವ್ಯ ನಿರ್ಲಕ್ಷ್ಯದಿಂದಾಗಿ ಅಂಬೇಡ್ಕರ್ ನಗರ ಹಾಗೂ ಕೆಂಚಮ್ಮನ ಓಣಿಯ ನಿವಾಸಿಗಳು ಹನಿ ನೀರಿಗೂ ಪರದಾಡುವಂತಾಗಿದೆ.

ಬಡಾವಣೆಯ ಮಹಿಳೆಯರು, ವೃದ್ಧರು ಮತ್ತು ಮಕ್ಕಳು ತಮ್ಮ ದೈನಂದಿನ ಕೆಲಸಗಳನ್ನು ಬಿಟ್ಟು, ಊರಿನ ಮತ್ತೊಂದು ಭಾಗದಲ್ಲಿರುವ ತಾಯಮ್ಮನ ಬೋರ್‌ವೆಲ್ ಬಳಿ ಕೊಡಗಳನ್ನು ಹಿಡಿದು ಗಂಟೆಗಟ್ಟಲೆ ಕಾದು ಕುಳಿತು ನೀರು ತರುವ ದುಸ್ಥಿತಿ ನಿರ್ಮಾಣವಾಗಿದೆ.

ಮೋಟಾರ್ ಸುಟ್ಟು 25 ದಿನಗಳಾದರೂ ಪಂಚಾಯಿತಿ ಸಿಬ್ಬಂದಿ ಕ್ಯಾರೆ ಎನ್ನುತ್ತಿಲ್ಲ. ಈ ಬಗ್ಗೆ ಹಲವು ಬಾರಿ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ತಕ್ಷಣವೇ ಸಂಬಂಧಪಟ್ಟ ಮೇಲಧಿಕಾರಿಗಳು ಎಚ್ಚೆತ್ತುಕೊಂಡು ಸುಟ್ಟುಹೋದ ಮೋಟಾರ್ ದುರಸ್ತಿಗೊಳಿಸಬೇಕು ಮತ್ತು ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಇಲ್ಲದಿದ್ದರೆ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಬಡಾವಣೆಯ ಮಹಿಳೆಯರು ಎಚ್ಚರಿಕೆ ನೀಡಿದ್ದಾರೆ.
📲Get App