🔥 ट्रेंडिंग मंत्री सोमेन्द्र तोमर ने योगी आदित्यना... प्रधानमंत्री मोदी ने बिहार में ₹34,470... विकास सेठी ने चुनी Vesuvius India Ltd... बिहार सार्वजनिक सेवा आयोग ने 2026 के प... बैंक ऑफ महाराष्ट्र ने वर्ष के अंत तक 1... सांगली में गाड़ी गड्ढे में गिरकर तीन घ...
20 नव. 2026•
ગુજરાતી मराठी ਪੰਜਾਬੀ বাংলা

ನಾರಾಯಣಪುರ ಬಲದಂಡೆ ಕಾಲುವೆಗೆ ನ.22ರ ಗಡುವು: ನೀರು ಹರಿಸದಿದ್ದರೆ ರಾಯಚೂರು ಜಿಲ್ಲೆ ಬಂದ್ - ಪ್ರಭಾಕರ ಪಾಟೀಲ್ - ಎಕರೆಗೆ 1.50 ಲಕ್ಷ ಹೂಡಿಕೆ ಮಾಡಿದ ರೈತರು ಸಂಕಷ್ಟದಲ್ಲಿ

✍️ रिपोर्टर: Ningappa 🗓 20 नव. 2026, 06:15 PM 👁 23
शेयर करें: 💬 WhatsApp 📘 Facebook 𝕏 Post

ನಾರಾಯಣಪುರ ಬಲದಂಡೆ ಕಾಲುವೆಗೆ ನ.22ರ ಗಡುವು: ನೀರು ಹರಿಸದಿದ್ದರೆ ರಾಯಚೂರು ಜಿಲ್ಲೆ ಬಂದ್ - ಪ್ರಭಾಕರ ಪಾಟೀಲ್ - ಕೃಷ್ಣಾ ಮೇಲ್ದಂಡೆ ಯೋಜನೆಯ ಕಾಲುವೆಗಳಿಗೆ ನ.22ರೊಳಗೆ ನೀರು ಹರಿಸಬೇಕು - ಮುಂಗಾರು ಕೊರತೆಯಿಂದ ರೈತರು ಸಂಕಷ್ಟದಲ್ಲಿ - ತೆಲಂಗಾಣಕ್ಕೆ 10 ಟಿಎಂಸಿ ನೀರು ಹರಿಸಿದ್ದು ಅನ್ಯಾಯ - ಎಕರೆಗೆ 1.50 ಲಕ್ಷ ಹೂಡಿಕೆ ಮಾಡಿ ಮೆಣಸಿನಕಾಯಿ ಬಿತ್ತನೆ, ನೀರಿಲ್ಲದೆ ಬೆಳೆ ಒಣಗುವ ಭೀತಿ - ಜನವರಿ ವರೆಗೂ ನಿರಂತರ ನೀರು ಹರಿಸಲು ಆಗ್ರಹ

ನಾರಾಯಣಪುರ ಬಲದಂಡೆ ಕಾಲುವೆಗೆ ನ.22ರ ಗಡುವು: ನೀರು ಹರಿಸದಿದ್ದರೆ ರಾಯಚೂರು ಜಿಲ್ಲೆ ಬಂದ್ - ಪ್ರಭಾಕರ ಪಾಟೀಲ್

ದೇವದುರ್ಗ: ಕೃಷ್ಣಾ ಮೇಲ್ದಂಡೆ ಯೋಜನೆಯ ಕಾಲುವೆಗಳಿಗೆ ನವೆಂಬರ್ 22ರೊಳಗೆ ಸಮರ್ಪಕವಾಗಿ ನೀರು ಹರಿಸದಿದ್ದರೆ ರಾಯಚೂರು ಜಿಲ್ಲಾದ್ಯಂತ ಬಂದ್‌ಗೆ ಕರೆ ನೀಡಿ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು. ಸರ್ಕಾರ ಗೋಲಿಬಾರ್ ನಡೆಸಿದರೂ ರೈತರ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಭಾಕರ ಪಾಟೀಲ್ ಇಂಗಳದಾಳ ಎಚ್ಚರಿಕೆ ನೀಡಿದರು.

ದೇವದುರ್ಗ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಗಾರು ಮಳೆಯ ಕೊರತೆಯಿಂದಾಗಿ ಜಿಲ್ಲೆಯ ರೈತರು ಈಗಾಗಲೇ ಸಂಕಷ್ಟ ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನೀರಾವರಿ ಕಾಲುವೆಗಳಿಗೆ ನೀರು ಹರಿಸದೆ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿರುವುದು ರೈತರ ಬದುಕಿನೊಂದಿಗೆ ಚೆಲ್ಲಾಟವಾಡಿದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯುಕೆಪಿ ಎಡದಂಡೆ ಮತ್ತು ಬಲದಂಡೆ ಕಾಲುವೆಗಳಿಗೆ ನೀರು ಹರಿಸುವಂತೆ ನೀರಾವರಿ ಸಲಹಾ ಸಮಿತಿ ಸಭೆಯ ನಂತರದಿಂದಲೂ ನಿರಂತರವಾಗಿ ಒತ್ತಾಯಿಸುತ್ತಿದ್ದೇವೆ. ಆದರೆ, ಸ್ಥಳೀಯ ರೈತರ ಅಗತ್ಯಕ್ಕೆ ಸ್ಪಂದಿಸದ ಸರ್ಕಾರ ನೆರೆಯ ತೆಲಂಗಾಣಕ್ಕೆ ಈಗಾಗಲೇ 10 ಟಿಎಂಸಿ ನೀರು ಹರಿಸಿರುವುದು ಈ ಭಾಗದ ರೈತರಿಗೆ ಮಾಡಿರುವ ಅನ್ಯಾಯವಾಗಿದೆ ಎಂದು ಆರೋಪಿಸಿದರು.

ನೀರಾವರಿ ಸಮಸ್ಯೆ ಕುರಿತು ನವೆಂಬರ್ 14ರಂದು ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಿದ್ದು, ಕಾಲುವೆಗಳಿಗೆ ನೀರು ಹರಿಸುವುದಾಗಿ ಭರವಸೆ ನೀಡಿದ್ದಾರೆ. ರೈತರ ಹಿತದೃಷ್ಟಿಯಿಂದ ವಿವಿಧ ರೈತ ಸಂಘಟನೆಗಳು ಒಗ್ಗೂಡಿ ಶಹಾಪುರ ತಾಲೂಕಿನ ಭೀಮರಾಯನಗುಡಿಯ ಬಾಪುಗೌಡ ವೃತ್ತದಲ್ಲಿ ಅಹೋರಾತ್ರಿ ಧರಣೆ ನಡೆಸಿ ಸರ್ಕಾರದ ಗಮನ ಸೆಳೆದಿವೆ. ಆದರೂ ನೀರು ಹರಿಸುವ ವಿಚಾರದಲ್ಲಿ ವಿಳಂಬ ಧೋರಣೆ ಮುಂದುವರಿದಿದೆ ಎಂದು ದೂರಿದರು.

ಕಾಲುವೆ ನೀರಿನ ಭರವಸೆಯನ್ನೇ ನಂಬಿ ರೈತರು ಮೆಣಸಿನಕಾಯಿ ಬಿತ್ತನೆ ಮಾಡಿದ್ದಾರೆ. ಬೀಜ, ಗೊಬ್ಬರ, ಕೀಟನಾಶಕ ಸೇರಿದಂತೆ ಪ್ರತಿ ಎಕರೆಗೆ ಸುಮಾರು 1.50 ಲಕ್ಷ ವೆಚ್ಚ ಮಾಡಿದ್ದಾರೆ. ಈಗ ಬೆಳೆಗಳಿಗೆ ನೀರಿನ ತೀವ್ರ ಅವಶ್ಯಕತೆಯಿದ್ದು, ತಕ್ಷಣ ನೀರು ಹರಿಸದಿದ್ದರೆ ಬೆಳೆಗಳು ಒಣಗಿ ರೈತರು ಸಾಲದ ಸುಳಿಗೆ ಸಿಲುಕುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ರೈತರ ಹೂಡಿಕೆ ಮತ್ತು ಬೆಳೆಗಳನ್ನು ರಕ್ಷಿಸಲು ಜನವರಿ ತಿಂಗಳವರೆಗೂ ಕಾಲುವೆಗಳಿಗೆ ನಿರಂತರವಾಗಿ ನೀರು ಹರಿಸಬೇಕು. ನವೆಂಬರ್ 22ರೊಳಗೆ ನೀರು ಹರಿಸಿದರೆ ಸರ್ಕಾರದ ಕ್ರಮವನ್ನು ಸ್ವಾಗತಿಸಲಾಗುವುದು. ಇಲ್ಲವಾದರೆ ಜಿಲ್ಲಾ ಬಂದ್ ನಡೆಸಿ ರಾಜ್ಯ ಹೆದ್ದಾರಿಯ ಮೇಲೆಯೇ ವಾಸ್ತವ್ಯ ಹೂಡಿ ಹೋರಾಟ ನಡೆಸಲಾಗುವುದು. ರೈತರ ಹಕ್ಕಿಗಾಗಿ ಯಾವುದೇ ತ್ಯಾಗಕ್ಕೂ ಸಿದ್ಧರಿದ್ದೇವೆ ಎಂದು ಪ್ರಭಾಕರ ಪಾಟೀಲ್ ಇಂಗಳದಾಳ ಘೋಷಿಸಿದರು.

ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಹಾಜಿ ಮಸ್ತಾನಸಾಬ್, ಬಿ. ಗಣೇಶ್, ಮುಖಂಡರಾದ ಹನುಮಗೌಡ ಜಾಲಹಳ್ಳಿ, ಉಮ್ಮಣ್ಣ ಮಲದಕಲ್ ಸೇರಿದಂತೆ ಹಲವು ರೈತ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
📲Get App