🔥 ट्रेंडिंग ट्रम्प, शी और पुतिन ने ऐतिहासिक त्रिपक... दिल्ली के करोल बाग में कॉरपोरेट इमारत... અમરેલીમાં લીલીયા રોડ પર બુલડોઝર દ્વારા... तेलंगाना के इंदिरम्मा बीमा योजना से मह... सायक्लोन के कमज़ोर होने के बावजूद ओडिश... साइक्लोन ने ओडिशा के गोपालपुर में लैंड...
20 नव. 2026•
ગુજરાતી मराठी ਪੰਜਾਬੀ বাংলা

ಬಸವಣ್ಣನವರ ತತ್ವಗಳಿಗೆ ಅಪಮಾನ ಮಾಡುವ ಸಂವಿಧಾನ ವಿರೋಧಿ ಶಕ್ತಿಗಳನ್ನು ಖಂಡಿಸೋಣ - ಸಿಪಿಐ(ಎಂಎಲ್) ರೆಡ್ ಸ್ಟಾರ್ ಖಂಡನೆ - ನವೆಂಬರ್ 21ರಂದು ರಾಯಚೂರು ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆಗೆ ಕರೆ

✍️ रिपोर्टर: Ningappa 🗓 20 नव. 2026, 11:20 PM 👁 32
शेयर करें: 💬 WhatsApp 📘 Facebook 𝕏 Post

ಬಸವಣ್ಣನವರ ತತ್ವಗಳಿಗೆ ಅಪಮಾನ ಮಾಡುವ ಸಂವಿಧಾನ ವಿರೋಧಿ ಶಕ್ತಿಗಳನ್ನು ಖಂಡಿಸೋಣ - ಸಿಪಿಐ(ಎಂಎಲ್) ರೆಡ್ ಸ್ಟಾರ್ ಖಂಡನೆ - ಬಸವಣ್ಣನವರ ಹೆಸರಿಗೆ ಮಸಿ ಬಳಿಯುವ ಕೃತ್ಯ ಖಂಡನೀಯ - ಗುರುದ್ರೋಹಿ, ಸಮಾಜದ್ರೋಹಿ ಶಕ್ತಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ - ನಾಳೆ ನವೆಂಬರ್ 21 ಬೆಳಿಗ್ಗೆ 9 ಗಂಟೆಗೆ ರಾಯಚೂರು ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆಗೆ ಕರೆ

ಬಸವಣ್ಣನವರ ತತ್ವಗಳಿಗೆ ಅಪಮಾನ ಮಾಡುವ ಸಂವಿಧಾನ ವಿರೋಧಿ ಶಕ್ತಿಗಳನ್ನು ಖಂಡಿಸೋಣ - ನಾಳೆ ರಾಯಚೂರಿನಲ್ಲಿ ಪ್ರತಿಭಟನೆಗೆ ಸಿಪಿಐ(ಎಂಎಲ್) ರೆಡ್ ಸ್ಟಾರ್ ಕರೆ

ರಾಯಚೂರು: ಕಲ್ಯಾಣ ಕ್ರಾಂತಿಯ ಮಹಾನ್ ರೂವಾರಿ, ಸಮಾನತೆ-ಸಾಮಾಜಿಕ ನ್ಯಾಯದ ಪ್ರತಿಪಾದಕ, ಕರ್ನಾಟಕದ ಸಾಂಸ್ಕೃತಿಕ ನಾಯಕ ಶ್ರೀಗುರು ಬಸವಣ್ಣನವರ ಹೆಸರಿಗೆ ಮಸಿ ಬಳಿಯುವ ಮತ್ತು ಅವರ ವಿಚಾರಧಾರೆಗೆ ಅಪಮಾನ ಮಾಡುವ ಸಂಘಪರಿವಾರದ ಕೋಮುವಾದಿ ಕಿಡಿಗೇಡಿಗಳ ಕೃತ್ಯವನ್ನು ಸಿಪಿಐ(ಎಂಎಲ್) ರೆಡ್ ಸ್ಟಾರ್ ಕರ್ನಾಟಕ ರಾಜ್ಯ ಸಮಿತಿ ತೀವ್ರವಾಗಿ ಖಂಡಿಸುತ್ತದೆ.

ಬಸವಣ್ಣನವರ ಸಮಾನತೆಯ ತತ್ವಗಳನ್ನು ಅವಮಾನಿಸುವ ಗುರುದ್ರೋಹಿ, ಸಮಾಜದ್ರೋಹಿ ಶಕ್ತಿಗಳನ್ನು ಕಾನೂನಿನ ಅಡಿಯಲ್ಲಿ ನಿಯಂತ್ರಿಸಿ, ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತೇವೆ.

ಈ ಅನ್ಯಾಯದ ವಿರುದ್ಧ ನವೆಂಬರ್ 21ರಂದು ರಾಯಚೂರಿನ ಶ್ರೀ ಬಸವೇಶ್ವರ ವೃತ್ತದಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಸಕಲ ಶರಣ-ಶರಣೆಯರು, ಪ್ರಗತಿಪರರು ಹಾಗೂ ಸಮಾನತೆಯ ಆಶಯದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸಬೇಕೆಂದು ಎಂ. ಗಂಗಾಧರ್
ರಾಜ್ಯ ಕಾರ್ಯದರ್ಶಿ
ಸಿಪಿಐ(ಎಂಎಲ್) ರೆಡ್ ಸ್ಟಾರ್, ಅವರು ಕರೆ ನೀಡಿದ್ದಾರೆ.

ಬಸವಣ್ಣನವರ ವಿಚಾರಧಾರೆಯೇ ನಮ್ಮ ಹೋರಾಟದ ದಾರಿ!
ಮತ್ತೆ ಕಲ್ಯಾಣ - ನಿತ್ಯ ಕಲ್ಯಾಣ - ಸತ್ಯ ಕಲ್ಯಾಣಕ್ಕಾಗಿ ಒಂದಾಗೋಣ ಎಂದರು!
📲Get App