🔥 TRENDING ପ୍ରଜ୍ଞାନ ମିଶନ ତରଫରୁ ବ୍ଲକ ସ୍ତରୀୟ ଗୀତା ଆ... दीपावली‑छठ महापर्व पर अररिया में यात्र... NPG News Launches Live Top News Servic... Chhattisgarh Housing Board Sells 7,650... अनूपपुर कलेक्टर श्री रत्नाकर जाने जनपद... Woman Accuses Open Drug Sale in Front...
07 Nov 2026•
ગુજરાતી मराठी ਪੰਜਾਬੀ বাংলা

ದಲಿತ ಸಂಘರ್ಷ ಸಮಿತಿಯಿಂದ ಜಿಲ್ಲಾಧಿಕಾರಿಗೆ ಮನವಿ - ವಸತಿ, ನಿವೇಶನ ಸಮಸ್ಯೆ ಹಾಗೂ ಮೂಲಭೂತ ಸೌಕರ್ಯಕ್ಕೆ ಆಗ್ರಹ - ಡಿ. 2025ರ ಭರವಸೆ ಈಡೇರಿಲ್ಲ, ಪ್ರಜಾ ಸೇವಾ ಆಂದೋಲನದಲ್ಲಿ ಮತ್ತೆ ಮನವಿ

✍️ Reporter: Ningappa 🗓 07 Nov 2026, 07:08 PM 👁 14
Share: 💬 WhatsApp 📘 Facebook 𝕏 Post

ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ದೇವದುರ್ಗ ತಾಲೂಕು ಸಮಿತಿಯಿಂದ ಜಿಲ್ಲಾಧಿಕಾರಿಗೆ ಮನವಿ - ವಸತಿ ಹಾಗೂ ನಿವೇಶನ ಸಮಸ್ಯೆ, ಮೂಲಭೂತ ಸೌಕರ್ಯಕ್ಕಾಗಿ ವಿನಂತಿ - 04/06/2026 ರ ಪ್ರತಿಭಟನೆ ಹಾಗೂ 23/12/2025 ರ ಭರವಸೆ ಈಡೇರಿಲ್ಲ ಎಂದು ಆರೋಪ - ಅರಕೇರಾ ಸರ್ವೆ ನಂ. 39ರ 83 ಎಕರೆ 30 ಗುಂಟೆ ಭೂಮಿ ಗುರುತಿಸಿ ನಿವೇಶನ ಹಂಚಿಕೆ, ರಸ್ತೆ ದುರಸ್ತಿ, ಕುಡಿಯುವ ನೀರಿಗೆ ಬೇಡಿಕೆ

ದಲಿತ ಸಂಘರ್ಷ ಸಮಿತಿಯಿಂದ ಜಿಲ್ಲಾಧಿಕಾರಿಗೆ ಮನವಿ

ದೇವದುರ್ಗ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಮಹಾತ್ಮ ಬಿ. ಕೃಷ್ಣಪ್ಪ ಸ್ಥಾಪಿತ ರಿ. ನಂ. 386/2020-21, ಮಹಾತ್ಮ ಬಿ. ಕೃಷ್ಣಪ್ಪ ತಾಲೂಕು ಸಮಿತಿ, ದೇವದುರ್ಗ ವತಿಯಿಂದ ಜಿಲ್ಲಾಧಿಕಾರಿಗಳು, ರಾಯಚೂರು ಅವರಿಗೆ ಪ್ರಜಾ ಸೇವಾ ಆಂದೋಲನ ಕಾರ್ಯಕ್ರಮದಲ್ಲಿ ಇಂದು ಮನವಿ ಸಲ್ಲಿಸಲಾಯಿತು.

ವಸತಿ ಹಾಗೂ ನಿವೇಶನ ಸಮಸ್ಯೆಗಳು ಹಾಗೂ ಮೂಲಭೂತ ಸೌಕರ್ಯಗಳಿಗಾಗಿ ಒತ್ತಾಯಿಸಿ ದಿನಾಂಕ 04/06/2026ರಂದು ತಾಲೂಕಿನ ಗಾಂಧಿ ವೃತ್ತದ ಮುಂದೆ ಬೃಹತ್ ಪ್ರತಿಭಟನೆ ನಡೆಸಿ ಸಲ್ಲಿಸಿದ ಮನವಿ ಪತ್ರದ ಬೇಡಿಕೆಗಳನ್ನು ಹಿಡೇರಿಸುವ ಕುರಿತು ಮನವಿ ಮಾಡಲಾಯಿತು.

ಮನವಿಯಲ್ಲಿ ತಿಳಿಸಿರುವಂತೆ, ಬಡತನ ರೇಖೆಯೊಳಗಿನ ಕುಲಿ ಕಾರ್ಮಿಕರು ಒಂದು ಮನೆಯಲ್ಲಿ 2-3 ಕುಟುಂಬಗಳು ತೀರಾ ಅಯೋಗ್ಯಕರ ಪರಿಸ್ಥಿತಿಯಲ್ಲಿ ವಾಸವಾಗಿದ್ದು, ಇಂತಹ ಕುಟುಂಬಗಳಿಗೆ ಜಾಗುನಿ ನಿವೇಶನ ಖರೀದಿಸಿ ಪ್ರತ್ಯೇಕ ವಸತಿ ನಿವೇಶನ ನೀಡಬೇಕು. ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಸತಿ ರಹಿತರ ಮತ್ತು ನಿವೇಶನ ರಹಿತರ ನಿವೇಶನ ಕೋರಿ ಅರ್ಜಿ ಸಲ್ಲಿಸಿದರೂ ಇಲ್ಲಿಯವರೆಗೆ ನಿವೇಶನ ಸಿಕ್ಕಿಲ್ಲ. ಸರ್ಕಾರ ಭೂಮಿ ಗುರುತಿಸಿ, ಅಥವಾ ಖಾಸಗಿ ಭೂಮಿ ಖರೀದಿಸಿ ವಸತಿ ರಹಿತರಿಗೆ ನಿವೇಶನ ಹಂಚಿಕೆ ಮಾಡಬೇಕು ಎಂದು ಕೋರಲಾಗಿದೆ.

2025 ರ ಡಿಸೆಂಬರ್ 23 ರಂದು ದೇವದುರ್ಗ ಮಿನಿವಿಧಾನಸೌಧ ಮುಂದೆ ಬೃಹತ್ ಪ್ರತಿಭಟನೆ ನಡೆಸಿ ಹಮ್ಮಿಕೊಂಡಿದ್ದೇವೆ. ಅಂದು ಪ್ರತಿಭಟನೆ ಸಂದರ್ಭದಲ್ಲಿ ಅಧಿಕಾರಿಗಳು ಮನವಿ ಸ್ವೀಕರಿಸಿ ಮುಂದಿನ 03 ತಿಂಗಳ ಅವಧಿಯೊಳಗೆ ಬೇಡಿಕೆಗಳನ್ನು ಈಡೇರಿಸಿ ಸೂಕ್ತ ಪರಿಹಾರ ಕಲ್ಪಿಸುವುದಾಗಿ ಭರವಸೆ ನೀಡಿದ್ದರು. ಆದರೆ 5-6 ತಿಂಗಳು ಕಳೆದು ಹೋದರೂ ಬೇಡಿಕೆಗಳನ್ನು ಈಡೇರಿಸಿಲ್ಲ ಎಂದು ಮನವಿಯಲ್ಲಿ ಆರೋಪಿಸಲಾಗಿದೆ. ಆದ್ದರಿಂದ ಬೇಡಿಕೆಗಳ ಈಡೇರಿಕೆಗಾಗಿ ಈ ಮನವಿ ಪತ್ರದ ಮೂಲಕ ಒತ್ತಾಯಿಸಲಾಗುತ್ತದೆ.

ಬೇಡಿಕೆಗಳು:
1) ಅರಕೇರಾ ತಾಲೂಕಿನ ಸರ್ವೆ ನಂ. 39 ರ 83 ಎಕರೆ 30 ಗುಂಟೆ ಇದ್ದ ಭೂಮಿಯಲ್ಲಿ, ಈಗಾಗಲೇ 25 ಎಕರೆ ಭೂಮಿಯನ್ನು ಪಂಚಾಯಿತಿ ವತಿಯಿಂದ ತಹಶೀಲ್ದಾರ್ ಕಛೇರಿಗೆ ಪುರಸ್ಕಾರ ಸಲ್ಲಿಸಿದ್ದರೂ, ಕೂಡಲೇ ಭೂಮಿ ಗುರುತಿಸಿ, ನಿವೇಶನ ರಹಿತರು ಹಾಗೂ ವಸತಿ ರಹಿತರಿಗೆ ಹಂಚಿಕೆ ಮಾಡಬೇಕು.
2) ಸುವರ್ಣ ಗ್ರಾಮಯೋಜನೆಯ ಯೋಜನೆಯಡಿ ಗ್ರಾಮಗಳಿಗೆ ಸೌಲಭ್ಯ ಕಲ್ಪಿಸಬೇಕು.
3) ಅರಕೇರಾ ಗ್ರಾಮದ ಈಲಕುಂಟಿ ಗ್ರಾಮದ, ಹೋಗುವ ರಸ್ತೆ ತೀರಾ ಹದಗೆಟ್ಟಿದ್ದು, ಕೂಡಲೇ ದುರಸ್ತಿ ಮಾಡಬೇಕು. ಮತ್ತು ಜಿ.ಪಂ ಯೋಜನೆ ಅನುಷ್ಠಾನದಲ್ಲಿ ಕಾಮಗಾರಿ ಅಭಿವೃದ್ಧಿ ಆಗಿದ್ದು, ತನಿಖೆ ಮಾಡಿ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಂಡು, ಈ ಕೂಡಲೇ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು.

ಇದೇ ಸಂದರ್ಭದಲ್ಲಿ ರಮೇಶ ಭಾವಿಮನಿ, ಚನ್ನಮ್ಮ ಅರಕೇರಾ, ರಾಜ್ಯ ಸಂಚಾಲಕರು ಶಿವಪ್ಪ ಪಲಕನಮರಡಿ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.
📲Get App