🔥 ट्रेंडिंग અરવલ્લી જિલ્લા પોલીસ અને સુરક્ષા સેતુ... छपरा मुजफरपुर मार्ग पर स्थित रायपुरा ब... छपरा मुजफरपुर मार्ग पर स्थित रायपुरा ब... लोहारा परिसरात शेती साहित्य चोरीचे सत्... ছেলের খুন নিয়ে মুখ্যমন্ত্রীর দরবারে ভ... सहरसा में विदेशी शराब की तस्करी, गिट्ट...
30 अक्टू. 2026•
ગુજરાતી मराठी ਪੰਜਾਬੀ বাংলা

ರೈತರು, ಕೃಷಿ ಕೂಲಿಕಾರರ ಹೋರಾಟಕ್ಕೆ ಸ್ಪಂದನೆ: ನ. 2ರಂದು ಜಿಲ್ಲಾಧಿಕಾರಿಗಳಿಂದ ಸಭೆ

✍️ रिपोर्टर: Khaja Hussain 🗓 30 अक्टू. 2026, 10:58 AM 👁 18
शेयर करें: 💬 WhatsApp 📘 Facebook 𝕏 Post
**ರಾಯಚೂರು | ವಿಶೇಷ ವರದಿ**

# ರೈತರು, ಕೃಷಿ ಕೂಲಿಕಾರರ ಹೋರಾಟಕ್ಕೆ ಸ್ಪಂದನೆ: ನ. 2ರಂದು ಜಿಲ್ಲಾಧಿಕಾರಿಗಳಿಂದ ಸಭೆ

### ಹೋರಾಟಕ್ಕೆ ಜಯದ ಸ್ಪಂದನೆ ಎಂದ ಸಿಪಿಐ(ಎಂ) ಕಾರ್ಯದರ್ಶಿ ನರಸಣ್ಣ ನಾಯಕ; ವಿವಿಧ ಬೇಡಿಕೆಗಳ ಕುರಿತು ಚರ್ಚೆ, ದಾಖಲೆಗಳೊಂದಿಗೆ ಹಾಜರಾಗಲು ಅಧಿಕಾರಿಗಳಿಗೆ ಸೂಚನೆ

**ರಾಯಚೂರು, ಅ. 30:** ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಅಕ್ಟೋಬರ್ 27ರಂದು ರಾಯಚೂರಿನಲ್ಲಿ ನಡೆದ ಹೋರಾಟಕ್ಕೆ ಜಿಲ್ಲಾಡಳಿತ ಸ್ಪಂದಿಸಿದೆ. ರೈತರು, ಕೃಷಿ ಕೂಲಿಕಾರರು ಹಾಗೂ ಗ್ರಾಮೀಣ ಕಾರ್ಮಿಕರ ವಿವಿಧ ಬೇಡಿಕೆಗಳ ಕುರಿತು ಚರ್ಚಿಸಲು ನವೆಂಬರ್ 2ರಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ಕರೆಯಲಾಗಿದೆ ಎಂದು ಸಿಪಿಐ(ಎಂ) ಕಾರ್ಯದರ್ಶಿ ನರಸಣ್ಣ ನಾಯಕ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರು ಹಾಗೂ ಕೃಷಿ ಕೂಲಿಕಾರರ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ನಡೆಸಿದ ಹೋರಾಟಕ್ಕೆ ಸಕಾರಾತ್ಮಕ ಸ್ಪಂದನೆ ದೊರೆತಿದೆ. ಜಿಲ್ಲಾಧಿಕಾರಿಗಳು ಸಭೆ ಕರೆದಿರುವುದು ಹೋರಾಟಕ್ಕೆ ದೊರೆತ ಜಯದ ಸ್ಪಂದನೆಯಾಗಿದೆ ಎಂದು ಹೇಳಿದರು.

ಜಿಲ್ಲೆಯ ಸಮಗ್ರ ನೀರಾವರಿ ವ್ಯವಸ್ಥೆ, ವಿದ್ಯುತ್ ಸಮಸ್ಯೆ, ಬರಗಾಲ, ಬೆಳೆ ಪರಿಹಾರ ಸೇರಿದಂತೆ ವಿವಿಧ ಬೇಡಿಕೆಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ.

ರಾಯಚೂರು ಜಿಲ್ಲಾಧಿಕಾರಿಗಳ ಕಚೇರಿಯಿಂದ ಅಕ್ಟೋಬರ್ 27ರಂದು ಹೊರಡಿಸಿರುವ ಸಭೆಯ ಸೂಚನಾ ಪತ್ರದ ಪ್ರಕಾರ, ನವೆಂಬರ್ 2ರಂದು ಮಧ್ಯಾಹ್ನ 3 ಗಂಟೆಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ.

ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರ ಮತ್ತು ಗ್ರಾಮೀಣ ಕಾರ್ಮಿಕರ ಸಂಘ, ಲೋಹರವಾಡಿ ವತಿಯಿಂದ ಸಲ್ಲಿಸಿರುವ ಮನವಿಯಲ್ಲಿ ಪ್ರಸ್ತಾಪಿಸಲಾದ ಬೇಡಿಕೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು.

ಸಭೆಗೆ ಜಿಲ್ಲೆಯ ಎಲ್ಲಾ ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಅಗತ್ಯ ಮಾಹಿತಿ ಮತ್ತು ಸಂಬಂಧಿತ ದಾಖಲೆಗಳೊಂದಿಗೆ ಕಡ್ಡಾಯವಾಗಿ ಹಾಜರಾಗುವಂತೆ ಜಿಲ್ಲಾಧಿಕಾರಿಗಳ ಕಚೇರಿ ಸೂಚನೆ ನೀಡಿದೆ.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿಗಳು, ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರು, ತಹಶೀಲ್ದಾರರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸಭೆಯ ಸೂಚನಾ ಪತ್ರ ರವಾನಿಸಲಾಗಿದೆ.

ಅಕ್ಟೋಬರ್ 27ರಂದು ರೈತರು, ಕೃಷಿ ಕೂಲಿಕಾರರು ಹಾಗೂ ಗ್ರಾಮೀಣ ಕಾರ್ಮಿಕರು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರಾಯಚೂರಿನಲ್ಲಿ ಹೋರಾಟ ನಡೆಸಿದ್ದರು. ಇದೀಗ ಜಿಲ್ಲಾಧಿಕಾರಿಗಳೇ ಸಭೆ ಕರೆದಿರುವುದರಿಂದ ಹೋರಾಟದ ಬೇಡಿಕೆಗಳ ಕುರಿತು ಯಾವ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂಬ ನಿರೀಕ್ಷೆ ಸಂಘಟನೆಗಳ ಮುಖಂಡರು ಹಾಗೂ ರೈತರಲ್ಲಿದೆ ಎಂದು ನರಸಣ್ಣ ನಾಯಕ ತಿಳಿಸಿದರು.

**ವರದಿ: ಖಾಜಾ ಹುಸೇನ್ ಬಾಬಾ, ಪತ್ರಕರ್ತರು, ಜಾಲಹಳ್ಳಿ**
📲Get App