🔥 TRENDING महाराष्ट्रात मान्सून परतीचा प्रवास २५‑... ಆವರಗೊಳ್ಳದಲ್ಲಿ ವಿಜೃಂಭಣೆಯ ವೀರಭದ್ರೇಶ್ವರ ಜ... महाराष्ट्रात मान्सून परतीचा प्रवास २५‑... सभी भक्तों को आमंत्रण Sports Creating New Opportunities for... J&K Government Approves Bilquis Mirs’...
15 Sep 2026
ગુજરાતી मराठी ਪੰਜਾਬੀ বাংলা

ಜಾಲಹಳ್ಳಿ ಪಶು ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯ, ಔಷಧಿ ದುರುಪಯೋಗ ಆರೋಪ: ರೈತ ಸಂಘದಿಂದ ಧರಣಿ ತಾಲೂಕು ಪಶುವೈದ್ಯಾಧಿಕಾರಿ ಲಿಖಿತ ಭರವಸೆ ಬಳಿಕ ಪ್ರತಿಭಟನೆ ವಾಪಸ್ ಜಾಲಹಳ್ಳಿ, ಸೆ.15: ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮದ ಸರ್ಕಾರಿ ಪಶು ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಯ ಕರ್ತವ್ಯಲೋಪ,

✍️ Reporter: Khajahussain baba Jalahalli 🗓 15 Sep 2026, 08:14 PM 👁 11
Watch on: ▶️ YouTube
Share: 💬 WhatsApp 📘 Facebook 𝕏 Post
📰 ಜಾಲಹಳ್ಳಿ–ದೇವದುರ್ಗ | ಬ್ರೇಕಿಂಗ್ ನ್ಯೂಸ್

ಜಾಲಹಳ್ಳಿ ಪಶು ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯ, ಔಷಧಿ ದುರುಪಯೋಗ ಆರೋಪ: ರೈತ ಸಂಘದಿಂದ ಧರಣಿ

ತಾಲೂಕು ಪಶುವೈದ್ಯಾಧಿಕಾರಿ ಲಿಖಿತ ಭರವಸೆ ಬಳಿಕ ಪ್ರತಿಭಟನೆ ವಾಪಸ್

ಜಾಲಹಳ್ಳಿ, ಸೆ.15: ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮದ ಸರ್ಕಾರಿ ಪಶು ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಯ ಕರ್ತವ್ಯಲೋಪ, ಜಾನುವಾರುಗಳಿಗೆ ಸಮರ್ಪಕ ಚಿಕಿತ್ಸೆ ದೋ ರೆಯದಿರುವುದು ಹಾಗೂ ಸರ್ಕಾರದಿಂದ ಪೂರೈಕೆಯಾಗುವ ಔಷಧಿಗಳ ದುರುಪಯೋಗ ಮತ್ತು ಅಕ್ರಮ ಮಾರಾಟದ ಆರೋಪಗಳನ್ನು ಖಂಡಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಜಾಲಹಳ್ಳಿ ಗ್ರಾಮ ಸಮಿತಿ ನೇತೃತ್ವದಲ್ಲಿ ಮಂಗಳವಾರ ಪಶು ಆಸ್ಪತ್ರೆಯ ಎದುರು ಧರಣಿ ಪ್ರತಿಭಟನೆ ನಡೆಸಲಾಯಿತು.

ಆಸ್ಪತ್ರೆಯ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ನಿಗದಿತ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ. ಇದರಿಂದ ಜಾನುವಾರು ಸಾಕಾಣಿಕೆ ಮಾಡುವ ರೈತರಿಗೆ ಸಮಯಕ್ಕೆ ಸರಿಯಾಗಿ ಪಶುವೈದ್ಯಕೀಯ ಸೇವೆ ದೊರೆಯುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಅಲ್ಲದೆ, ಸರ್ಕಾರದಿಂದ ಜಾನುವಾರುಗಳ ಚಿಕಿತ್ಸೆಗಾಗಿ ಉಚಿತವಾಗಿ ಪೂರೈಕೆಯಾಗುವ ಔಷಧಿಗಳನ್ನು ಆಸ್ಪತ್ರೆಯಿಂದ ಹೊರಗಡೆ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪಗಳ ಕುರಿತು ಸೂಕ್ತ ತನಿಖೆ ನಡೆಸಬೇಕು ಎಂದು ರೈತ ಮುಖಂಡರು ಆಗ್ರಹಿಸಿದರು.

ಅರ್ಹತೆಯಿಲ್ಲದ ಸಿಬ್ಬಂದಿಯಿಂದ ಚಿಕಿತ್ಸೆ ಆರೋಪ

ಕನಿಷ್ಠ ಅರ್ಹತೆಯಿಲ್ಲದ ಡಿ-ಗ್ರೂಪ್ ಹಾಗೂ ಮೈತ್ರಿ ಸಿಬ್ಬಂದಿಗಳೇ ಜಾನುವಾರುಗಳಿಗೆ ಚಿಕಿತ್ಸೆ ನೀಡುತ್ತಿರುವ ಆರೋಪ ಕೇಳಿಬರುತ್ತಿದ್ದು, ಇದು ರೈತರ ಜಾನುವಾರುಗಳ ಜೀವದೊಂದಿಗೆ ಆಟವಾಡಿದಂತಾಗಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಇದುವರೆಗೆ ಸೂಕ್ತ ಕ್ರಮ ಕೈಗೊಳ್ಳದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಪ್ರಮುಖ ಬೇಡಿಕೆಗಳು

ವೈದ್ಯಾಧಿಕಾರಿಗಳು ನಿಯಮಿತವಾಗಿ ಆಸ್ಪತ್ರೆಯಲ್ಲಿ ಹಾಜರಿದ್ದು ಜಾನುವಾರುಗಳಿಗೆ ಚಿಕಿತ್ಸೆ ನೀಡಬೇಕು.

ಪಶು ಆಸ್ಪತ್ರೆಗೆ ಪೂರೈಕೆಯಾಗುವ ಔಷಧಿಗಳ ಸ್ಟಾಕ್ ಹಾಗೂ ವಿತರಣಾ ವಿವರಗಳನ್ನು ನೋಟಿಸ್ ಬೋರ್ಡ್‌ನಲ್ಲಿ ಸಾರ್ವಜನಿಕರಿಗೆ ಕಾಣುವಂತೆ ಪ್ರಕಟಿಸಬೇಕು.

ಉಚಿತ ಔಷಧಿಗಳ ಅಕ್ರಮ ಮಾರಾಟದ ಆರೋಪದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಬೇಕು.

ನಿಯಮಬಾಹಿರವಾಗಿ ಚಿಕಿತ್ಸೆ ನೀಡುತ್ತಿರುವ ಡಿ-ಗ್ರೂಪ್ ಹಾಗೂ ಮೈತ್ರಿ ಸಿಬ್ಬಂದಿಗಳ ವಿರುದ್ಧ ಇಲಾಖಾ ಕ್ರಮ ಕೈಗೊಳ್ಳಬೇಕು.

ರೈತರಿಗೆ ಸಮರ್ಪಕ ಪಶುವೈದ್ಯಕೀಯ ಸೇವೆ ಒದಗಿಸುವುದರ ಜೊತೆಗೆ ಹೈನುಗಾರಿಕೆಗೆ ಉತ್ತೇಜನ ನೀಡುವ ಕಾರ್ಯಕ್ರಮಗಳನ್ನು ರೂಪಿಸಬೇಕು.


ಪ್ರತಿಭಟನೆಯ ಸಂದರ್ಭದಲ್ಲಿ ಇಲಾಖೆಯ ಮುಖ್ಯಸ್ಥರು, ತಹಶೀಲ್ದಾರ್ ಹಾಗೂ ಪೊಲೀಸ್ ಇಲಾಖೆಗೆ ಮನವಿ ಪತ್ರ ಸಲ್ಲಿಸಲಾಯಿತು.

ಕರ್ನಾಟಕ ಪ್ರಾಂತ ರೈತ ಸಂಘದ ಜಾಲಹಳ್ಳಿ ಗ್ರಾಮ ಸಮಿತಿ ಅಧ್ಯಕ್ಷ ಹನುಮಂತ ಮಡಿವಾಳ, ಕಾರ್ಯದರ್ಶಿ ರಂಗನಾಥ ಬುoಕಲದೊಡ್ಡಿ, ಗ್ರಾಮ ಪಂಚಾಯತ್ ಸದಸ್ಯರಾದ, ರಮೇಶ್ ತೆಗ್ಗೆಳ್ಳಿ, ಕೃಷಿ ಕೂಲಿ ಕಾರರ ಸಂಘಟನೆ ಅಧ್ಯಕ್ಷ ಲಿಂಗಣ್ಣ ನಾಯಕ ಮಕಾಶಿ,ದುರುಗಪ್ಪ ವಠಾರ, ಬಸವರಾಜ್ ವಂದಲಿ, ಬಸವರಾಜ್ ಲಿಂಗದಹಳ್ಳಿ, ಸುರೇಶ್ ಗೌಡ, ಚಂದ್ರು ನಾಯಕ, ನರೇಶ್, ರಂಗಪ್ಪ ಕೋರಬುರ್, ಭೀಮಶಪ್ಪ, ದೇವರಾಯ, ನರಸಣ್ಣ ದರೇಪುರ್,ಮಲ್ ಯ್ಯ್ ಗೌಡುರ್,ವೆಂಕಟೇಶ್ ತ್ಯಾಪಿಲಿ,ಚನ್ನಬಸವ ಕಾವಲಿ ಸೇರಿದಂತೆ ರೈತ ಮುಖಂಡರು ಹಾಗೂ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಲೂಕು ಪಶುವೈದ್ಯಾಧಿಕಾರಿ ಮುಕ್ತಾರ್ ಸಾಬ್ ಅವರು ರೈತ ಮುಖಂಡರಿಗೆ ಲಿಖಿತ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ವಾಪಸ್ ಪಡೆಯಲಾಯಿತು.

ವರದಿ: ಖಾಜಾ ಹುಸೇನ್ ಬಾಬಾ, ಜಾಲಹಳ್ಳಿ
📲Get App