🔥 TRENDING ಜೆಡಿಎಸ್ ಮುಖಂಡ ಅಂಬರೀಶ್ ಬಿ. ಗಣೇಕಲ್ ನೂತನ... ग्राम कारोली पंचायत का थमा विवाद, मुख्... Bihar to Fast‑Track Industrial Clearan... Bihar signs MoUs worth ₹1.72 trillion... Police attacked by inmates at Jehanaba... ભરૂચમાં દબાણો દૂર કરવા વહીવટી તંત્રની...
20 Nov 2026•
ગુજરાતી मराठी ਪੰਜਾਬੀ বাংলা

ಭೂ ಗ್ಯಾರಂಟಿ ಯೋಜನೆ: ಅನುಷ್ಠಾನಕ್ಕೆ ಕೈಗೊಳ್ಳಬೇಕಾದ 11 ಪ್ರಮುಖ ಕ್ರಮಗಳು - ರಾಯಚೂರು ಜಿಲ್ಲಾ ಪಂಚಾಯತ್ ಸೂಚನೆ - ನ.2 ರಿಂದ ನ.27 ರವರೆಗೆ ವ್ಯಾಪಕ ಪ್ರಚಾರ

✍️ Reporter: Ningappa 🗓 20 Nov 2026, 10:15 PM 👁 21
Share: 💬 WhatsApp 📘 Facebook 𝕏 Post

ಭೂ ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ 11 ಪ್ರಮುಖ ಕ್ರಮಗಳು - ರಾಯಚೂರು ಜಿಲ್ಲಾ ಪಂಚಾಯತ್ ಸೂಚನೆ - ನ.2 ರಿಂದ ನ.27 ರವರೆಗೆ ಗ್ರಾಮ ಪಂಚಾಯಿತಿಗಳಲ್ಲಿ ವ್ಯಾಪಕ ಪ್ರಚಾರ - 11A, 11B ವಿತರಣೆ, ಮೊಬೈಲ್ ಆಪ್ ಮೂಲಕ ಸರ್ವೆ, ಅರ್ಜಿ ನೋಂದಣಿ ಕಡ್ಡಾಯ - ಹಕ್ಕುಪತ್ರ, ವಸತಿ ಮನೆ, ಕೃಷಿ ಭೂಮಿ ಕಟ್ಟಡ, ಅರಣ್ಯ ಹಕ್ಕು ಆಸ್ತಿಗಳಿಗೆ 11B - ತಿದ್ದುಪಡಿ, ಅಮಾನ್ಯೀಕರಣಕ್ಕೆ ನಿಯಮಾನುಸಾರ ಕ್ರಮ

ರಾಯಚೂರು: ಭೂ ಗ್ಯಾರಂಟಿ ಯೋಜನೆಯ ಪರಿಣಾಮಕಾರಿ ಅನುಷ್ಠಾನ ಹಾಗೂ ಸಾರ್ವಜನಿಕರಿಗೆ ಸಕಾಲದಲ್ಲಿ ಸೇವೆ ಒದಗಿಸುವ ಉದ್ದೇಶದಿಂದ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಕೆಳಕಂಡ ಕ್ರಮಗಳನ್ನು ಕಡ್ಡಾಯವಾಗಿ ಕೈಗೊಳ್ಳುವಂತೆ ಜಿಲ್ಲಾ ಪಂಚಾಯತ್, ರಾಯಚೂರು ಸೂಚಿಸಿದೆ.

ದಿನಾಂಕ: 02.11.2026 ರಿಂದ 27.11.2026 ರವರೆಗೆ ವ್ಯಾಪಕ ಪ್ರಚಾರ ನಡೆಸಬೇಕು.

ಕೈಗೊಳ್ಳಬೇಕಾದ ಪ್ರಮುಖ ಕ್ರಮಗಳು ಹೀಗಿವೆ:

1. ಇ-ಸ್ವತ್ತು ನಮೂನೆ 11A ವಿತರಣೆ: ಭೂ ಗ್ಯಾರಂಟಿ ಯೋಜನೆಯಡಿ ನಮೂನೆ 11A ವಿತರಿಸುವ ಸಂದರ್ಭದಲ್ಲಿ ಮೂಲ ಮಾಲೀಕರ ಆಸ್ತಿಗಳಿಗೆ ಮೊದಲ ಆದ್ಯತೆ ನೀಡಬೇಕು. ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಪಡೆಯಬೇಕು.

2. ಭೂ ಗ್ಯಾರಂಟಿ ಯೋಜನೆಯ ವ್ಯಾಪಕ ಪ್ರಚಾರ: ದಿನಾಂಕ: 02.11.2026 ರಿಂದ 27.11.2026 ರವರೆಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಾಗೃತಿ ಮತ್ತು ಪ್ರಚಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಿ, ಕರಪತ್ರಗಳನ್ನು ವಿತರಿಸಿ, ಕಸ ವಿಲೇವಾರಿ ವಾಹನಗಳಿಂದ ಧ್ವನಿಪ್ರಚಾರ ಕೈಗೊಳ್ಳಿ.

3. ಆಸ್ತಿಗಳ ಪಟ್ಟಿ ಸಿದ್ಧಪಡಿಸುವುದು: ಗ್ರಾಮ ಠಾಣಾ ವ್ಯಾಪ್ತಿಯಲ್ಲಿನ ಆಸ್ತಿಗಳ ವಿವರಗಳನ್ನು ವಾರ್ಡ್‌ವಾರು, ಗ್ರಾಮವಾರು ಮತ್ತು ಪಂಚಾಯಿತಿವಾರು ವಿಂಗಡಿಸಿ ಸಮಗ್ರ ಪಟ್ಟಿಯನ್ನು ಸಿದ್ಧಪಡಿಸಬೇಕು.

4. ಭೂ ಗ್ಯಾರಂಟಿ ಮೊಬೈಲ್ ಅಪ್ಲಿಕೇಶನ್ ಬಳಕೆ: ನಮೂನೆ 11A ಮತ್ತು 11B ಅರ್ಜಿಗಳಿಗೆ ಸಂಬಂಧಿಸಿದಂತೆ ಮೊಬೈಲ್ ಅಪ್ಲಿಕೇಶನ್ ಮೂಲಕ ಸ್ಥಳ ಪರಿಶೀಲನೆ ಹಾಗೂ ಸರ್ವೆ ಕಾರ್ಯ ಕಡ್ಡಾಯವಾಗಿರುತ್ತದೆ.

5. ಅರ್ಜಿಗಳ ಕಡ್ಡಾಯ ನೋಂದಣಿ: ದಿನಾಂಕ: 01.11.2026 ರಿಂದ ಪ್ರತಿ ಗ್ರಾಮ ಪಂಚಾಯತಿಯು ಕನಿಷ್ಠ 05 ಅರ್ಜಿಗಳನ್ನು ಭೂ ಗ್ಯಾರಂಟಿ ತಂತ್ರಾಂಶದಲ್ಲಿ ನೋಂದಾಯಿಸಿ.

6. 64C, 94CC ಮತ್ತು 94D ಅಡಿಯಲ್ಲಿ ವಿತರಿಸಿದ ಹಕ್ಕುಪತ್ರಗಳು: 24.04.2025 ಕ್ಕಿಂತ ಪೂರ್ವದಲ್ಲಿ ವಿತರಿಸಿದ ಹಕ್ಕುಪತ್ರಗಳ ಫಲಾನುಭವಿಗಳ ಪಟ್ಟಿಯನ್ನು ಸಂಬಂಧಪಟ್ಟ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿ, ದೃಢೀಕರಣದೊಂದಿಗೆ ಪಡೆಯಬೇಕು.

7. ಇ-ಸ್ವತ್ತು ನಮೂನೆ 11B - ಕೃಷಿ ಭೂಮಿಯಲ್ಲಿನ ಕಟ್ಟಡಗಳು: ಕೃಷಿ ಭೂಮಿಯಲ್ಲಿ ಮೂಲ ಮಾಲೀಕರು ನಿರ್ಮಿಸಿಕೊಂಡ ಕಟ್ಟಡಗಳಿಗೆ ಅನ್ವಯವಾಗುವ ನಿಯಮಗಳನ್ವಯ ನಮೂನೆ 11B ವಿತರಿಸಬೇಕು.

8. ಇ-ಸ್ವತ್ತು ನಮೂನೆ 11B - ವಸತಿ ಯೋಜನೆಯ ಮನೆಗಳು: ವಸತಿ ಯೋಜನೆಯಡಿ ನಿರ್ಮಿಸಿದ ಮನೆಗಳಿಗೆ, ಮೂಲ ಮಾಲೀಕರ ಒಪ್ಪಿಗೆ ಪತ್ರ ಹೊಂದಿರುವ ಪ್ರಕರಣಗಳಲ್ಲಿ Non-Transactionalble ಷರತ್ತಿನೊಂದಿಗೆ ನಮೂನೆ 11B ವಿತರಿಸಬೇಕು.

9. Forest Rights Act, 2006 - ಪೂರ್ವಜರಿಂದ ಬಂದಿರುವ ಆಸ್ತಿಗಳು: Forest Rights Act, 2006 ಅಡಿಯಲ್ಲಿ ಅನ್ವಯವಾಗುವ ಪೂರ್ವಜರಿಂದ ಬಂದಿರುವ ಆಸ್ತಿಗಳಿಗೆ Non-Transactionalble ಷರತ್ತಿನೊಂದಿಗೆ ನಮೂನೆ 11B ವಿತರಿಸಬೇಕು.

10. ಆಸ್ತಿಗಳ ವಿಸ್ತೀರ್ಣ ಮತ್ತು ಆಯಾಮಗಳ ತಿದ್ದುಪಡಿ: 2,400 ಚದರ ಅಡಿಗಿಂತ ಹೆಚ್ಚಿರುವ ವಿಸ್ತೀರ್ಣದ ಆಸ್ತಿಗಳಿಗೆ Area and Dimension Correction ಬಾಕಿಯಿರುವ ಮನೆಕಟ್ಟಡಗಳಲ್ಲಿ ಅಂತಹ ಕಾರ್ಯಕರ್ತಗಳ ಇ-ಸ್ವತ್ತು ಲಾಗಿನ್ ಮೂಲಕ ಅನುಮೋದನೆ ಪಡೆದುಕೊಂಡ ನಂತರವೇ ತಿದ್ದುಪಡಿ ಮಾಡಬೇಕು.

11. ಇ-ಸ್ವತ್ತು ತಂತ್ರಾಂಶದಲ್ಲಿ ಆಸ್ತಿಗಳ ಅಮಾನ್ಯೀಕರಣ: Invalidation ಮಾಡುವ ಸಂದರ್ಭದಲ್ಲಿ ಆಸ್ತಿ ಮಾಲೀಕರಿಗೆ ವಿಚಾರಣೆಗೆ ಅವಕಾಶ ನೀಡಿ (Hearing), ನಿಯಮಾನುಸಾರ ಅಮಾನ್ಯೀಕರಣದ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು.

ವಿಶೇಷ ಸೂಚನೆ: ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಸೂಚನೆ: ಮೇಲುಕಂಡ ಎಲ್ಲಾ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಿ, ಭೂ ಗ್ಯಾರಂಟಿ ಯೋಜನೆಯ ಅನುಷ್ಠಾನಕ್ಕೆ ಅಗತ್ಯ ಪೂರಕ ಕ್ರಮಗಳನ್ನು ನಿಗದಿತ ಕಾಲಮಿತಿಯೊಳಗಾಗಿ ಪೂರ್ಣಗೊಳಿಸಬೇಕು. ಅಡಿಟಿಪ್ಪಣಿ: ಈ ಕಾರ್ಯದಲ್ಲಿ ಯಾವುದೇ ವಿಳಂಬ ಅಥವಾ ನಿರ್ಲಕ್ಷ್ಯ ವಹಿಸದಂತೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು.
📲Get App