🔥 ट्रेंडिंग स्नातक एमएलसी कांति सिंह का रायबरेली म... सतीश देवासी ने बेड़ा से पाली कलेक्टर क... बिहार शिक्षा विभाग ने जिलाधिकारी शिक्ष... बिहार के किशनगंज में दो बहनों सहित तीन... शेतक़र्‍सों ने 227 करोड़ की फसल बीमा र... कांग्रेस ने कहा, सत्ता में आकर ज्ञानेश...
04 नव. 2026•
ગુજરાતી मराठी ਪੰਜਾਬੀ বাংলা

ಸೋಮನಮರಡಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳನ್ನು ದೇವದುರ್ಗ ತಾಲೂಕಿಗೆ ಮರುಸೇರ್ಪಡೆಗೊಳಿಸಲು ತಹಸೀಲ್ದಾರ್‌ರಿಂದ ಸಹಾಯಕ ಆಯುಕ್ತರಿಗೆ ವರದಿ ಸಲ್ಲಿಕೆಗ್ರಾಮಸಭೆಯಲ್ಲಿ 1,000ರಿಂದ 1,020 ಗ್ರಾಮಸ್ಥರ ಭಾಗಿ; ದೇವದುರ್ಗ ತಾಲೂಕಿಗೆ ಮರುಸೇರ್ಪಡೆಗೊಳಿಸಲು ಒಮ್ಮತದ ಅಭಿಪ್ರಾಯ

✍️ रिपोर्टर: Khaja Hussain 🗓 04 नव. 2026, 04:42 PM 👁 18
शेयर करें: 💬 WhatsApp 📘 Facebook 𝕏 Post
**ದೇವದುರ್ಗ–ಅರಕೇರಾ | ಬ್ರೇಕಿಂಗ್ ನ್ಯೂಸ್**

# ಸೋಮನಮರಡಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳನ್ನು ದೇವದುರ್ಗ ತಾಲೂಕಿಗೆ ಮರುಸೇರ್ಪಡೆಗೊಳಿಸಲು ತಹಸೀಲ್ದಾರ್‌ರಿಂದ ಸಹಾಯಕ ಆಯುಕ್ತರಿಗೆ ವರದಿ ಸಲ್ಲಿಕೆ

### ಗ್ರಾಮಸಭೆಯಲ್ಲಿ 1,000ರಿಂದ 1,020 ಗ್ರಾಮಸ್ಥರ ಭಾಗಿ; ದೇವದುರ್ಗ ತಾಲೂಕಿಗೆ ಮರುಸೇರ್ಪಡೆಗೊಳಿಸಲು ಒಮ್ಮತದ ಅಭಿಪ್ರಾಯ

**ಅರಕೇರಾ, ನ. 4:** ರಾಯಚೂರು ಜಿಲ್ಲೆಯ ಅರಕೇರಾ ತಾಲೂಕಿಗೆ ಒಳಪಟ್ಟಿರುವ ಸೋಮನಮರಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳನ್ನು ಅರಕೇರಾ ತಾಲೂಕಿನಿಂದ ಕೈಬಿಟ್ಟು ದೇವದುರ್ಗ ತಾಲೂಕಿಗೆ ಮರುಸೇರ್ಪಡೆಗೊಳಿಸುವಂತೆ ಗ್ರಾಮಸ್ಥರು ವ್ಯಕ್ತಪಡಿಸಿರುವ ಒತ್ತಾಯಕ್ಕೆ ಸಂಬಂಧಿಸಿದಂತೆ ಅರಕೇರಾ ತಹಸೀಲ್ದಾರ್ ಅವರು ರಾಯಚೂರು ಸಹಾಯಕ ಆಯುಕ್ತರಿಗೆ ಅಧಿಕೃತ ವರದಿ ಸಲ್ಲಿಸಿದ್ದಾರೆ.

ನವೆಂಬರ್ 3ರಂದು ಸೋಮನಮರಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿಶೇಷ ಗ್ರಾಮಸಭೆ ನಡೆಸಿ ಗ್ರಾಮಸ್ಥರ ಅಭಿಪ್ರಾಯ ಸಂಗ್ರಹಿಸಲಾಯಿತು. ಸಭೆಯಲ್ಲಿ ಸೋಮನಮರಡಿ, ಬಿ.ಆರ್. ಗುಂಡ ಹಾಗೂ ಮ್ಯಾಕಲದೊಡ್ಡಿ ಗ್ರಾಮಗಳ ಸುಮಾರು 1,000ರಿಂದ 1,020 ಗ್ರಾಮಸ್ಥರು ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಗ್ರಾಮಸಭೆಯಲ್ಲಿ ಭಾಗವಹಿಸಿದ್ದ ಗ್ರಾಮಸ್ಥರು ತಮ್ಮ ಗ್ರಾಮಗಳನ್ನು ದೇವದುರ್ಗ ತಾಲೂಕಿಗೆ ಮರುಸೇರ್ಪಡೆಗೊಳಿಸುವಂತೆ ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅರಕೇರಾ ತಾಲೂಕು ಕೇಂದ್ರಕ್ಕೆ ತೆರಳಲು ದೂರದ ಪ್ರಯಾಣ ಮಾಡಬೇಕಾಗಿರುವುದರಿಂದ ಸಾರ್ವಜನಿಕರು ವಿವಿಧ ಸರ್ಕಾರಿ ಕೆಲಸಕಾರ್ಯಗಳಿಗಾಗಿ ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾಗಿ ಆಡಳಿತಾತ್ಮಕ ಹಾಗೂ ಸಾರ್ವಜನಿಕರ ಅನುಕೂಲದ ದೃಷ್ಟಿಯಿಂದ ಗ್ರಾಮಗಳನ್ನು ದೇವದುರ್ಗ ತಾಲೂಕಿಗೆ ಸೇರ್ಪಡೆಗೊಳಿಸುವುದು ಸೂಕ್ತ ಎಂದು ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದಾರೆ.

ಗ್ರಾಮಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳು, ಸಭೆಯ ನಡಾವಳಿ ಹಾಗೂ ಹಾಜರಾತಿ ಪಟ್ಟಿಯನ್ನು ಲಗತ್ತಿಸಿ ಅರಕೇರಾ ತಹಸೀಲ್ದಾರ್ ಅವರು ನವೆಂಬರ್ 3, 2026ರಂದು ರಾಯಚೂರು ಸಹಾಯಕ ಆಯುಕ್ತರಿಗೆ ಅಧಿಕೃತ ವರದಿ ಸಲ್ಲಿಸಿದ್ದಾರೆ.

ಈ ಕುರಿತು ಸೋಮನಮರಡಿ ಹಾಗೂ ಗಾಣದಾಳ್ ಗ್ರಾಮಗಳನ್ನು ದೇವದುರ್ಗ ತಾಲೂಕಿಗೆ ಸೇರ್ಪಡೆಗೊಳಿಸುವ ಹೋರಾಟ ಸಮಿತಿಯ ಅಧ್ಯಕ್ಷ ಹಾಗೂ ವಕೀಲ ವಸಂತಕುಮಾರ್ ಮಾತನಾಡಿ, ಗ್ರಾಮಸ್ಥರ ಒಮ್ಮತದ ಅಭಿಪ್ರಾಯದಂತೆ ತಾಲೂಕು ಮರುಸೇರ್ಪಡೆ ಪ್ರಕ್ರಿಯೆಯನ್ನು ಸರ್ಕಾರ ಆದಷ್ಟು ಶೀಘ್ರ ಕೈಗೆತ್ತಿಕೊಂಡು ಜನರ ಬಹುದಿನಗಳ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.

ತಹಸೀಲ್ದಾರ್ ಸಲ್ಲಿಸಿರುವ ವರದಿಯ ಆಧಾರದ ಮೇಲೆ ಮುಂದಿನ ಹಂತದಲ್ಲಿ ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂಬುದನ್ನು ಗ್ರಾಮಸ್ಥರು ಎದುರು ನೋಡುತ್ತಿದ್ದಾರೆ.

**— ವರದಿ: ಖಾಜಾ ಹುಸೇನ್ ಬಾಬಾ, ಜಾಲಹಳ್ಳಿ**
📲Get App