🔥 TRENDING ई-विकास पोर्टल से 3,626 किसानों ने उर्... जयपुर में ऑटो एक्सपो 2026: नवीनतम वाहन... ઉર્જા રાજ્યમંત્રીશ્રી કૌશિકભાઈ વેકરિયા... हजारीबाग के केरेडारी में देर रात गोलीब... રાષ્ટ્રીય એકતા દિવસની તૈયારીઓ વચ્ચે આર... ગુજરાત નેચરલ ફાર્મિંગ સાયન્સ યુનિવર્સિ...
24 Oct 2026•
ગુજરાતી मराठी ਪੰਜਾਬੀ বাংলা

1 ಕೋಟಿ ವೆಚ್ಚದಲ್ಲಿ ಚನ್ನಮ್ಮ ವೃತ್ತ ಅಭಿವೃದ್ಧಿ ಕಿತ್ತೂರು ಚನ್ನಮ್ಮಾಜಿ ಮೂರ್ತಿ ಪ್ರತಿಷ್ಠಾಪನಾ ಸಮಿತಿ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ

✍️ Reporter: Mallikarjun Gabbur 🗓 24 Oct 2026, 10:15 AM 👁 21
Share: 💬 WhatsApp 📘 Facebook 𝕏 Post

ದಾನಿಗಳ ಸಹಕಾರ ಹಾಗೂ ಶಾಸಕ ಶಿವಾನಂದ ಪಾಟೀಲ ಅವರ ಅನುದಾನದ ನೆರವಿನೊಂದಿಗೆ ಪಟ್ಟಣದಲ್ಲಿ ಕನಿಷ್ಠ ₹1 ಕೋಟಿ ವೆಚ್ಚದಲ್ಲಿ ವೀರಮಾತೆ ಕಿತ್ತೂರು ಚನ್ನಮ್ಮಾಜಿ ಅವರ ಮೂರ್ತಿ ಪ್ರತಿಷ್ಠಾಪಿಸಿ, ಸುಸಜ್ಜಿತ ವೃತ್ತ ಅಭಿವೃದ್ಧಿ-ಪಡಿಸಲಾಗುವುದು' ಎಂದು ಕಿತ್ತೂರು ಚನ್ನಮ್ಮಾಜಿ ಮೂರ್ತಿ ಪ್ರತಿಷ್ಠಾಪನಾ ಸಮಿತಿ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ತಿಳಿಸಿದರು.

ಪಟ್ಟಣದ ಚನ್ನಮ್ಮಾಜಿ ವೃತ್ತದಲ್ಲಿ ನಡೆದ ಚನ್ನಮ್ಮ ಜಯಂತ್ಯುತ್ಸವ ಹಾಗೂವಿಜಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅವರು

'ಮೂರ್ತಿ ನಿರ್ಮಾಣ ಹಾಗೂ ವೃತ್ತ ಅಭಿವೃದ್ಧಿಗಾಗಿ ಸುಮಾರು 40ರಿಂದ 45 ದಾನಿಗಳು ತಲಾ ₹1 ಲಕ್ಷ ನೀಡುವುದಾಗಿ ವಾಗ್ದಾನ ಮಾಡಿದ್ದಾರೆ. ಕೆಲವರು ಈಗಾಗಲೇ ಹಣ ನೀಡಿದ್ದಾರೆ. ಶಾಸಕ ಶಿವಾನಂದ ಪಾಟೀಲ ಅವರು ಸರ್ಕಾರದ ಯೋಜನೆಯಡಿ ₹60 ಲಕ್ಷ ಅನುದಾನ ಒದಗಿಸಿದ್ದಾರೆ. ಈ ಅನುದಾನ ಹಾಗೂ ದಾನಿಗಳ ನೆರವಿನಿಂದ ಭವ್ಯ ವೃತ್ತ ನಿರ್ಮಿಸುವ ಉದ್ದೇಶವಿದೆ' ಎಂದರು.

'.
ರಾಣಿ ಚನ್ನಮ್ಮ ಕೇವಲ ಒಂದು ಪ್ರದೇಶದ ರಾಣಿಯಾಗಿರದೆ, ಇಡೀ ಭಾರತೀಯ ನಾರಿಯರ ಸ್ವಾಭಿಮಾನ, ಧೈರ್ಯ ಮತ್ತು ದೇಶಭಕ್ತಿಯ ಸಂಕೇತವಾಗಿದ್ದಾರೆ. ಅವರ ಹೋರಾಟ, ಕೆಚ್ಚೆದೆ ಮತ್ತು ಸ್ವಾಭಿಮಾನ ಪ್ರತಿಯೊಬ್ಬ ಭಾರತೀಯನಿಗೂ ಸದಾ ಸ್ಫೂರ್ತಿ ಎಂದು ತಹಶೀಲ್ದಾರ್ ವೈ.ಎಸ್. ಸೋಮನಕಟ್ಟಿಮಾತನಾಡಿದರು.
, ಸ್ಥಳೀಯ ಪಿಕೆಪಿಎಸ್ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ, ಶಿಕ್ಷಕ ಸಿದ್ದಣ್ಣ ಉಕ್ಕಲಿ ಹಾಗೂ ಹಿರಿಯರಾದ ಎಂ.ಜಿ.ಆದಿಗೊಂಡ ಮಾತನಾಡಿದರು. ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಮತ್ತು ಹಿರೇಮಠದ ಶಿವಪ್ರಕಾಶ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ತಾಲ್ಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷ ಬಸವರಾಜ ಗೊಳಸಂಗಿ, ಹಿರಿಯರಾದ ಬಸವರಾಜ ಹಾರಿವಾಳ, ಸುರೇಶಗೌಡ ಪಾಟೀಲ, ಚಂದ್ರಶೇಖರಗೌಡ ಪಾಟೀಲ, ರವಿ ಪಟ್ಟಣಶೆಟ್ಟಿ, ಜಗದೀಶ ಕೊಟ್ರಶೆಟ್ಟಿ, ಸುರೇಶ ಹಾರಿವಾಳ, ಶೇಖರ ಗೊಳಸಂಗಿ, ಶಂಕರಗೌಡ ಬಿರಾದಾರ, ಶ್ರೀಕಾಂತ ಕೊಟ್ರಶೆಟ್ಟಿ, ಮುರುಗೇಶ ನಾಲ್ನೋಡಿ, ಜಗದೇವಿ ಗುಂಡಳ್ಳಿ, ರವಿ ರಾಠೋಡ, ಸಂಗಮೇಶ ಕಾಳಹಸ್ತೇಶ್ವರಮಠ ಸೇರಿದಂತೆ ಸಮಾಜದ ಪ್ರಮುಖರು ಪಾಲ್ಗೊಂಡಿದ್ದರು
📲Get App