🔥 TRENDING સાબરકાંઠા: લાકડાં ભરેલા ટ્રેક્ટર પર પત... टोकावडे ग्रामीण रुग्णालयात डिसेंबरच्या... ಬಸವಣ್ಣನವರ ತತ್ವಗಳಿಗೆ ಅಪಮಾನ ಮಾಡುವ ಸಂವಿಧಾ... স্থানীয় ব্যক্তির দারুন বার্তা Police officer fan writes to Rajinikan... Cyclone Akvan Approaches Andhra Prades...
20 Nov 2026•
ગુજરાતી मराठी ਪੰਜਾਬੀ বাংলা

SIR ವಿರೋಧಿ ಮೂರನೇ ಹಂತದ ಹೋರಾಟಕ್ಕೆ ಸಿದ್ಧತೆ - ಒಕ್ಕೂಟದ ಕರೆ - ಬೆಂಗಳೂರಿನಲ್ಲಿ SIR ವಿರೋಧಿ ಜಾತ್ಯತೀತ ಪಕ್ಷಗಳು, ಜನಪರ ಸಂಘಟನೆಗಳ ಪತ್ರಿಕಾಗೋಷ್ಠಿ - ಚುನಾವಣಾ ಆಯೋಗದ ನಿಲುವು ಖಂಡನೆ, ರಾಜ್ಯ ಸರ್ಕಾರ ಸ್ಪಷ್ಟ ನಿಲುವು ತಳೆಯಲು ಆಗ್ರಹ

✍️ Reporter: Ningappa 🗓 20 Nov 2026, 11:08 PM 👁 18
Share: 💬 WhatsApp 📘 Facebook 𝕏 Post

SIR ವಿರೋಧಿ ಮೂರನೇ ಹಂತದ ಹೋರಾಟಕ್ಕೆ ಸಿದ್ಧತೆ - ಒಕ್ಕೂಟದ ಕರೆ - ಬೆಂಗಳೂರಿನಲ್ಲಿ SIR ವಿರೋಧಿ ಜಾತ್ಯತೀತ ಪಕ್ಷಗಳು, ಜನಪರ ಸಂಘಟನೆಗಳ ಪತ್ರಿಕಾಗೋಷ್ಠಿ - ಚುನಾವಣಾ ಆಯೋಗದ ನಿಲುವು ಖಂಡನೆ, SSR ಮುಂದಿಟ್ಟು ನೈತಿಕ ಸೋಲು ಮರೆಮಾಚುವ ಆರೋಪ - ಕಾಂಗ್ರೆಸ್ ಸಚಿವರ ದ್ವಂದ್ವ ನಿಲುವಿಗೆ ಅಸಮಾಧಾನ - ಮತದಾರರ ಹಕ್ಕುಗಳ ರಕ್ಷಣೆಗೆ ರಾಜ್ಯ ಸರ್ಕಾರ ಸ್ಪಷ್ಟ ನಿಲುವು ತಳೆಯಲು ಆಗ್ರಹ

SIR ವಿರೋಧಿ ಮೂರನೇ ಹಂತದ ಹೋರಾಟಕ್ಕೆ ಸಿದ್ಧತೆ - ಒಕ್ಕೂಟದ ಕರೆ

ಬೆಂಗಳೂರು: ನಗರದ ಕನಿಷ್ಕಾ ಹೋಟೆಲ್‌ನಲ್ಲಿ SIR ವಿರೋಧಿ ಜಾತ್ಯತೀತ ಪಕ್ಷಗಳು ಹಾಗೂ ಜನಪರ ಸಂಘಟನೆಗಳ ಒಕ್ಕೂಟ ಕರ್ನಾಟಕ ವತಿಯಿಂದ ಪತ್ರಿಕಾಗೋಷ್ಠಿ ನಡೆಯಿತು.

SIR ಪ್ರಕ್ರಿಯೆಯಲ್ಲಿ ಕೇಂದ್ರ ಚುನಾವಣಾ ಆಯೋಗದ ನಿಲುವುಗಳನ್ನು ಖಂಡಿಸಿದ ಮುಖಂಡರು, ತನ್ನ ನೈತಿಕ ಸೋಲನ್ನು ಮರೆಮಾಚಲು SSR ಪ್ರಕ್ರಿಯೆಯನ್ನು ಮುಂದಿಟ್ಟಿದೆ ಎಂದು ಆರೋಪಿಸಿ, ರಾಜ್ಯ ಸರ್ಕಾರದ ಕೆಲವು ಕಾಂಗ್ರೆಸ್ ಸಚಿವರ ದ್ವಂದ್ವ ನಿಲುವಿಗೆ ಅಸಮಾಧಾನ ವ್ಯಕ್ತಪಡಿಸಿ, ಮತದಾರರ ಹಕ್ಕುಗಳ ರಕ್ಷಣೆಗಾಗಿ ರಾಜ್ಯ ಸರ್ಕಾರ ಸ್ಪಷ್ಟ ನಿಲುವು ತಳೆಯಬೇಕು ಎಂದು ಆಗ್ರಹಿಸಿದರು.

ಜೊತೆಗೆ, SIR ವಿರೋಧಿ ಹೋರಾಟದ ಮೂರನೇ ಹಂತಕ್ಕೆ ಜಾತ್ಯತೀತ ಪಕ್ಷಗಳು ಹಾಗೂ ಜನಪರ ಸಂಘಟನೆಗಳು ಸಜ್ಜಾಗಬೇಕು ಎಂದು ಕರೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ನೂರ್ ಶ್ರೀಧರ್, ವೀರಸಂಗಯ್ಯ, ವಿ. ನಾಗರಾಜ, ಅಮ್ಜದ್ ಪಾಷಾ, ನಾಗೇಶ್ ಅರಳುಕುಪ್ಪೆ, ಹೈದರ್ ಬೇಗ್ ಹಾಗೂ ಜೆ.ಎಂ. ಶ್ರೀಮತಿ ಉಪಸ್ಥಿತರಿದ್ದರು.
📲Get App