🔥 TRENDING हनुमानगढ़ रूट की कई ट्रेनों में बढ़ाए... વડિયા તાલુકાના નદી કાંઠે 2 સિંહો દેખાય... Scheduled Power Outage in Chhatarpur o... Over 2,500 athletes compete in Chhatti... Five Maoists Surrender to Police in Ka... ರಿಪೋರ್ಟರ್ಸ್ ಗಿಲ್ಡ್ ಬೆಳ್ಳಿ ಮಹೋತ್ಸವ ಕಾರ...
29 Nov 2026•
ગુજરાતી मराठी ਪੰਜਾਬੀ বাংলা

ರಿಪೋರ್ಟರ್ಸ್ ಗಿಲ್ಡ್ ಬೆಳ್ಳಿ ಮಹೋತ್ಸವ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಅಜಯ್‌ ಸಿಂಗ್ ಶುಭ ಹಾರೈಕೆ

✍️ Reporter: Ningappa 🗓 29 Nov 2026, 11:40 PM 👁 52
Share: 💬 WhatsApp 📘 Facebook 𝕏 Post
ರಾಯಚೂರಿನ ಡಾ. ಬಿ. ಆರ್ ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾವ್ ಭವನದಲ್ಲಿ ರಾಯಚೂರು ರಿಪೋರ್ಟರ್ಸ್ ಗಿಲ್ಡ್ (ರಿ.) ವತಿಯಿಂದ ಆಯೋಜಿಸಿದ್ದ ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಬೆಳ್ಳಿ ಮಹೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಅಜಯ್‌ ಸಿಂಗ್ ಅವರು ಭಾಗವಹಿಸಿದ ಅವರು ಗಿಲ್ಡ್‌ನ ರಿಪೋರ್ಟರ್ಸ್ 25 ವರ್ಷಗಳ ಸಾರ್ಥಕ ಪಯಣಕ್ಕೆ ಶುಭ ಹಾರೈಸಿ ಮಾತನಾಡಿದರು

ಪತ್ರಿಕೋದ್ಯಮವು ಸಮಾಜದ ಆಗುಹೋಗುಗಳನ್ನು ಜನರಿಗೆ ತಲುಪಿಸುವುದರ ಜೊತೆಗೆ, ಜನರ ಸಮಸ್ಯೆಗಳಿಗೆ ಧ್ವನಿಯಾಗಿ, ಪ್ರಜಾಪ್ರಭುತ್ವದ ಆಶಯಗಳನ್ನು ಬಲಪಡಿಸುವ ಮಹತ್ವದ ಜವಾಬ್ದಾರಿಯನ್ನು ನಿರ್ವಹಿಸುತ್ತದೆ. ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಕಳೆದ 25 ವರ್ಷಗಳಿಂದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆ ಶ್ಲಾಘನೀಯವಾಗಿದೆ ಎಂದರು.

ಗಿಲ್ಡ್ ರಿಪೋರ್ಟರ್ಸ್ ಮುಂದಿನ ದಿನಗಳಲ್ಲಿಯೂ ವಸ್ತುನಿಷ್ಠ, ಜವಾಬ್ದಾರಿಯುತ ಹಾಗೂ ಜನಪರ ಪತ್ರಿಕೋದ್ಯಮಕ್ಕೆ ತನ್ನ ಕೊಡುಗೆಯನ್ನು ಮುಂದುವರಿಸಿ, ಇನ್ನಷ್ಟು ಯಶಸ್ಸಿನ ಮೈಲಿಗಲ್ಲುಗಳನ್ನು ಸಾಧಿಸಲಿ ಎಂದು ಈ ಸಂದರ್ಭದಲ್ಲಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರು ಹಾಗೂ ಮಾಜಿ ಸಚಿವರಾದ ಶ್ರೀ ಎನ್ ಎಸ್ ಬೋಸರಾಜು, ಕೆಕೆಆರ್‌ಡಿಬಿ ಅಧ್ಯಕ್ಷರು ಹಾಗೂ ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಬಸನಗೌಡ ದದ್ದಲ್, ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ರುದ್ರಪ್ಪ ಅಂಗಡಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಶಿವಾನಂದ ತಗಡೂರು, ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಅಧ್ಯಕ್ಷರಾದ ಶ್ರೀ ವಿಜಯ ಜಾಗಟಗಲ್, ಸೇರಿದಂತೆ ಗಿಲ್ಡ್‌ನ ಪದಾಧಿಕಾರಿಗಳು, ಹಿರಿಯ ಪತ್ರಕರ್ತರು ಹಾಗೂ ವಿವಿಧ ಮಾಧ್ಯಮಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
📲Get App