🔥 ट्रेंडिंग प्रकाश कुमार ने करौंदी रैयत गाँव से पह... *जिला प्रमुख की कुर्सी पर आज होगा फैसल... फूड सेफ़्टी में केंद्रीय-राज्य संघर्ष:... महाराष्ट्र परीक्षा पैनल ने पेपर लीक पर... उत्तर प्रदेश के सांसद जड़म्बिका पॉल ने... फतूहा में मिले 102 लाइव कार्ट्रिज और प...
24 नव. 2026•
ગુજરાતી मराठी ਪੰਜਾਬੀ বাংলা

ಸೂಕ್ತ ಅವಕಾಶ ಮತ್ತು ಬೆಂಬಲ ನೀಡಿದರೆ ಯಶಸ್ವಿಯಾಗಿ ಮುನ್ನಡೆಯಬಲ್ಲರು.-ಶ್ರೀಮತಿ ರೇಣುಕಾ ಕಲಬುರ್ಗಿ

✍️ रिपोर्टर: Mallikarjun Gabbur 🗓 24 नव. 2026, 07:53 PM 👁 42
शेयर करें: 💬 WhatsApp 📘 Facebook 𝕏 Post

ಮಕ್ಕಳು ದೇವರ ಅಮೂಲ್ಯ ಕೊಡುಗೆಗಳು. ಪ್ರತಿಯೊಂದು ಮಗುವೂ ತನ್ನದೇ ಆದ ಪ್ರತಿಭೆ, ಸಾಮರ್ಥ್ಯ, ಆಸಕ್ತಿ ಮತ್ತು ಕನಸುಗಳನ್ನು ಹೊಂದಿರುತ್ತದೆ. ಕೆಲವು ಮಕ್ಕಳು ದೈಹಿಕ, ಬೌದ್ಧಿಕ, ದೃಷ್ಟಿ, ಶ್ರವಣ, ಮಾತು ಅಥವಾ ಕಲಿಕೆಗೆ ಸಂಬಂಧಿಸಿದ ಸವಾಲುಗಳನ್ನು ಎದುರಿಸುತ್ತಿರಬಹುದು. ಆದರೆ ಅವರಲ್ಲಿರುವ ಸಾಮರ್ಥ್ಯವನ್ನು ಗುರುತಿಸಿ, ಸೂಕ್ತ ಅವಕಾಶ ಮತ್ತು ಬೆಂಬಲ ನೀಡಿದರೆ ಅವರು ಕೂಡ ಸಮಾಜದ ಮುಖ್ಯವಾಹಿನಿಯಲ್ಲಿ ಯಶಸ್ವಿಯಾಗಿ ಮುನ್ನಡೆಯಬಲ್ಲರು ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ರೇಣುಕಾ ಕಲಬುರ್ಗಿ ಮಾತನಾಡಿದರು

ಮಕ್ಕಳಿಗೆ ಶಿಕ್ಷಣ ನೀಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ವಿಶೇಷ ಅಗತ್ಯವುಳ್ಳ ಮಕ್ಕಳನ್ನು ಶಾಲೆಯಿಂದ ದೂರವಿಡದೆ, ಸಾಮಾನ್ಯ ಮಕ್ಕಳೊಂದಿಗೆ ಕಲಿಯುವ ಅವಕಾಶ ಕಲ್ಪಿಸುವುದು ಸಮಾವೇಶಿತ ಶಿಕ್ಷಣದ ಆಶಯವಾಗಿದೆ.
ಶಾಲಾ ಹಂತದಲ್ಲಿ ವಿಶೇಷ ಅಗತ್ಯವುಳ್ಳ ಮಕ್ಕಳನ್ನು ಗುರುತಿಸಿ, ಅವರಿಗೆ ಅಗತ್ಯವಿರುವ ಶೈಕ್ಷಣಿಕ ಹಾಗೂ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲು ವೈದ್ಯಕೀಯ ಮೌಲ್ಯಾಂಕನ ಶಿಬಿರ ಅತ್ಯಂತ ಮಹತ್ವದ ಹಂತವಾಗಿದೆ ಎಂದು ತಾಲೂಕ ಸಮನ್ವಯ ಶಿಕ್ಷಣದ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಐ ಆಮ್ ಇಂಡಿ ಪ್ರಾಸ್ತಾವಿಕವಾಗಿ ಮಾತನಾಡಿದರು
ವೈದ್ಯಕೀಯ ಮೌಲ್ಯಾಂಕನವೆಂದರೆ ಕೇವಲ ಅಂಗವೈಕಲ್ಯವನ್ನು ಗುರುತಿಸುವ ಪ್ರಕ್ರಿಯೆಯಲ್ಲ. ಇದು ಮಗುವಿನ ಅಗತ್ಯಗಳನ್ನು ಅರ್ಥಮಾಡಿಕೊಳ್ಳುವ, ಅದರ ಸಾಮರ್ಥ್ಯವನ್ನು ಗುರುತಿಸುವ ಮತ್ತು ಮುಂದಿನ ಅಭಿವೃದ್ಧಿಗೆ ಸೂಕ್ತ ಮಾರ್ಗದರ್ಶನ ನೀಡುವ ಮಹತ್ವದ ಹಂತವಾಗಿದೆ.
ವೈದ್ಯಕೀಯ ತಜ್ಞರ ತಪಾಸಣೆಯಿಂದ ಮಗುವಿನ ಅಂಗವೈಕಲ್ಯದ ಸ್ವರೂಪ ಮತ್ತು ಪ್ರಮಾಣವನ್ನು ಗುರುತಿಸಿ, ಅಗತ್ಯ ಚಿಕಿತ್ಸೆ, ಪುನರ್ವಸತಿ, ಥೆರಪಿ, ಸಹಾಯಕ ಸಾಧನಗಳು ಹಾಗೂ ವಿವಿಧ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಮಾರ್ಗದರ್ಶನ ನೀಡಲಾಗುತ್ತದೆ ಎಂದು ತಾಲೂಕ ಆರೋಗ್ಯ ಅಧಿಕಾರಿಗಳಾದ ಡಾಕ್ಟರ ಪ್ರಕಾಶ ರವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು
ಮಕ್ಕಳ ವೈದ್ಯಕೀಯ ತಪಾಸಣೆಗಾಗಿ ಮಕ್ಕಳ ತಜ್ಞರಾದ ಡಾಕ್ಟರ ಸಂಜೀವ್, ಕಿವಿ ಗಂಟಲು ನೋವಿಗೆ ಸಂಬಂಧಿಸಿದಂತೆ ಡಾಕ್ಟರ ಫಾರಾ, ನೇತೃ ತಜ್ಞರಾದ ಡಾಕ್ಟರ ಹಿರೇಮಠ ಹಾಗೂ ಆರ್ ಬಿ ಎಸ್ ಕೆ ತಂಡದ ಸದಸ್ಯರು ಭಾಗವಹಿಸಿದ್ದರು.
ಬಸವನಬಾಗೇವಾಡಿ ತಾಲೂಕಿನಲ್ಲಿ ವಿವಿಧ ವಿಕಲತೆಯನ್ನು ಹೊಂದಿರುವ ಸುಮಾರು 530 ಮಕ್ಕಳಿದ್ದು ಇಂದು ತಾಲೂಕಿನ ಬಹುತೇಕ ಗ್ರಾಮೀಣ ಪ್ರದೇಶದಿಂದ ವಿಕಲಚೇತನ ಮಕ್ಕಳೊಂದಿಗೆ ಪಾಲಕರು ಆಗಮಿಸಿ ವೈದ್ಯಕೀಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿದರು.
ಶ್ರೀಮತಿ ವಿಜಯಲಕ್ಷ್ಮಿ ಕಕ್ಕಸಗೇರಿ ಸ್ವಾಗತಿಸಿದರು. ಶ್ರೀಮತಿ ಭಾರತಿ ಪಾಟೀಲ ವಂದಿಸಿದರು. ಶ್ರೀ ಎಮ್ ವ್ಹಿ ಗಬ್ಬೂರ ಕಾರ್ಯಕ್ರಮ ನಿರೂಪಿಸಿದರು.
📲Get App