🔥 TRENDING जमुना शराब ठेकेदार के कथित गुर्गों की... अररिया हादसे में छह युवकों की मौत के ब... अररिया दिया होटल में बब्बन झा की सुपुत... किशनगंज में बंद घरों से चोरी का गिरोह... जोकीहाट पुलिस ने भगवानपुर से एनबीडब्ल्... Chief Minister Meets Anal Tribe's CSOs...
23 Nov 2026•
ગુજરાતી मराठी ਪੰਜਾਬੀ বাংলা

ಬಸವಣ್ಣನವರ ಕುರಿತು ಅವಹೇಳನಕಾರಿ ಹೇಳಿಕೆ: ರವಿ ಹಂಜ್ ವಿರುದ್ಧ ಕಠಿಣ ಕ್ರಮಕ್ಕೆ ಜಾಲಹಳ್ಳಿ ಬಸವ ಸಮಿತಿ ಆಗ್ರಹಉಪತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಕೆ; ‘ಬಸವ ಮಂಟಪ’ ಕೃತಿ ಮುಟ್ಟುಗೋಲು ಹಾಕಿಕೊಳ್ಳುವಂತೆ ಒತ್ತಾಯ

✍️ Reporter: Khaja Hussain 🗓 23 Nov 2026, 08:32 PM 👁 14
Share: 💬 WhatsApp 📘 Facebook 𝕏 Post
.

**ಜಾಲಹಳ್ಳಿ ಬ್ರೇಕಿಂಗ್ ನ್ಯೂಸ್**

# ಬಸವಣ್ಣನವರ ಕುರಿತು ಅವಹೇಳನಕಾರಿ ಹೇಳಿಕೆ: ರವಿ ಹಂಜ್ ವಿರುದ್ಧ ಕಠಿಣ ಕ್ರಮಕ್ಕೆ ಜಾಲಹಳ್ಳಿ ಬಸವ ಸಮಿತಿ ಆಗ್ರಹ

### ಉಪತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಕೆ; ‘ಬಸವ ಮಂಟಪ’ ಕೃತಿ ಮುಟ್ಟುಗೋಲು ಹಾಕಿಕೊಳ್ಳುವಂತೆ ಒತ್ತಾಯ

**ಜಾಲಹಳ್ಳಿ, ನ. 23:** ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಪಟ್ಟಣದಲ್ಲಿ ಜಗಜ್ಯೋತಿ ಬಸವಣ್ಣನವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಅನಿವಾಸಿ ಭಾರತೀಯ ಲೇಖಕ ರವಿ ಹಂಜ್ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬಸವ ಸಮಿತಿ ಜಾಲಹಳ್ಳಿ ವತಿಯಿಂದ ಉಪತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಜಾಲಹಳ್ಳಿ ನಾಡಕಚೇರಿಯಲ್ಲಿ ಮನವಿ ಸ್ವೀಕರಿಸಿದ ಕಂದಾಯ ಇಲಾಖೆಯ ಅಧಿಕಾರಿ ಶರಣೆಗೌಡ ಅವರು, ಮನವಿಯನ್ನು ಸರ್ಕಾರಕ್ಕೆ ರವಾನಿಸಲಾಗುವುದು ಎಂದು ತಿಳಿಸಿದರು.

12ನೇ ಶತಮಾನದಲ್ಲಿ ಸಾಮಾಜಿಕ ಸಮಾನತೆ, ಮಾನವೀಯ ಮೌಲ್ಯಗಳು ಹಾಗೂ ಜಾತಿರಹಿತ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿದ ಬಸವಣ್ಣನವರ ತತ್ವಾದರ್ಶಗಳು ಮತ್ತು ವಚನಗಳನ್ನು ತಪ್ಪಾಗಿ ವ್ಯಾಖ್ಯಾನಿಸುವ ಮೂಲಕ ಇತಿಹಾಸವನ್ನು ತಿರುಚುವ ಪ್ರಯತ್ನ ನಡೆಯುತ್ತಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.

ಕಳೆದ ಎರಡು ವರ್ಷಗಳಿಂದ ವಿವಾದಾತ್ಮಕ ಲೇಖನಗಳನ್ನು ಪ್ರಕಟಿಸುತ್ತಿರುವ ರವಿ ಹಂಜ್, ಇದೀಗ ಅವುಗಳನ್ನು ‘ಬಸವ ಮಂಟಪ’ ಕೃತಿಯ ರೂಪದಲ್ಲಿ ಹೊರತಂದಿದ್ದಾರೆ. ಅಲ್ಲದೆ, ಯೂಟ್ಯೂಬ್ ಚಾನೆಲ್‌ನಲ್ಲಿ ಲಿಂಗಾಯತ ಸಮುದಾಯದ ಕುರಿತು ಅವಹೇಳನಕಾರಿ ಪದಗಳನ್ನು ಬಳಸಿರುವುದು ಬಸವ ಅನುಯಾಯಿಗಳು ಹಾಗೂ ಸಮುದಾಯದ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ಸಮಿತಿ ಆಕ್ಷೇಪ ವ್ಯಕ್ತಪಡಿಸಿದೆ.

ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆಗೆ ಧಕ್ಕೆ ಉಂಟುಮಾಡುವ ಇಂತಹ ಕೃತ್ಯಗಳ ವಿರುದ್ಧ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು. ರವಿ ಹಂಜ್ ವಿರುದ್ಧ ಸ್ವಯಂಪ್ರೇರಿತವಾಗಿ (ಸುಮೋಟೋ) ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕು. ವಿವಾದಕ್ಕೆ ಕಾರಣವಾಗಿರುವ ‘ಬಸವ ಮಂಟಪ’ ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಈ ಸಂದರ್ಭದಲ್ಲಿ ಬಸವ ಸಮಿತಿ ಸಂಚಾಲಕ ಚಂದ್ರಶೇಖರ ನಾಡಗೌಡ, ಬಸನಗೌಡ ಪಾಟೀಲ್, ಸಲಬಣ್ಣ ಸೌದ್ರಿ, ರಂಗಪ್ಪ ಗುಂಡಗುರ್ತಿ, ಚಂದಪ್ಪ ಬುದಿನ್ನಿ, ಶಿವಲಿಂಗಪ್ಪ, ಇಮಾಮಸಾಬ್ ಉದ್ದರ, ಗುರುನಾಥ ಚಿಂಚೋಡಿ, ಖುರ್ಶಿದ್ ಪಟೇಲ್, ಅದಪ್ಪ ಇಳಿಗಡಿ, ಅಂಬರೇಗೌಡ, ಸಿದ್ದಪ್ಪ ತಗ್ಗೆಳ್ಳಿ, ನವೀನ್, ಭೀಮಣ್ಣ ನಾಯಕ, ಶ್ರೀನಿವಾಸ ತಿಂಪುರ್, ಲಿಂಗಣ್ಣ ಮಕಾಶಿ, ಬಸವರಾಜ, ವೆಂಕನಗೌಡ ನಾಯಕ (ವಕೀಲರು), ಯೇಸು ಡಿ.ಕೆ., ಬಸವರಾಜ ಗೋಪಾಳಪೂರ, ರಂಗಣ್ಣ ಕೊಲ್ಕರ್, ಮಹೇಶ್ ಹೊಟ್ಟಿ, ಸೂಗಪ್ಪ ಸೌದ್ರಿ, ರಂಗಪ್ಪ ತ್ಯಾಪ್ಲಿ, ರಾಚಯ್ಯ ಸ್ವಾಮಿ, ನಿಂಗಪ್ಪ ಹಂಪರಗುಂದಿ (ಗ್ರಾ.ಪಂ. ಸದಸ್ಯ), ಸಾಬಣ್ಣ ಕಮಲದಿನ್ನಿ, ರಮೇಶ ಬಾಗೂರು, ಹನುಮಯ್ಯ ಪೂಜಾರಿ, ಶಿವನಗೌಡ, ರಾಮನಗೌಡ, ಶಿವು ದೇಸಾಯಿ, ಬಾಳಪ್ಪ ಭಾವಿಮನಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ವಿವಿಧ ಪಕ್ಷಗಳ ಮುಖಂಡರು ಹಾಗೂ ಬಸವಣ್ಣನವರ ಅಭಿಮಾನಿಗಳು ಉಪಸ್ಥಿತರಿದ್ದು, ಮನವಿ ಪತ್ರಕ್ಕೆ ಸಹಿ ಹಾಕಿದರು.

**ವರದಿ: ಖಾಜಾ ಹುಸೇನ್ ಬಾಬಾ, ಜಾಲಹಳ್ಳಿ**
📲Get App