🔥 TRENDING સાણંદ ના બળિયાદેવ મંદિરમાં પ્રાગટ્ય દિ... PM Modi Announces 24,000-Crore Nepal R... Meghalaya Police Officer Suspended Ove... Six Awami League Leaders Sent to Jail... Congress attacks BJP government in Sab... Joint Police Operation Seizes Contraba...
23 Nov 2026•
ગુજરાતી मराठी ਪੰਜਾਬੀ বাংলা
National

ಬಸವಣ್ಣನವರ ವಿರುದ್ಧದ ಆರೋಪ ಖಂಡನೀಯ: ಚಂದ್ರಶೇಖರ್ ಎನ್. ಪಟವಾರಿ

✍️ Reporter: Basavaraj pujari 🗓 23 Nov 2026, 07:12 PM 👁 23
Share: 💬 WhatsApp 📘 Facebook 𝕏 Post

ಬೀದರ್: ಕರ್ನಾಟಕದ ಸಂಸ್ಕೃತಿಯ ನಾಯಕ, ಜಗಜ್ಯೋತಿ ಬಸವಣ್ಣನವರ ಕುರಿತು ‘ಬಸವ ಮಂಟಪ’ ಕೃತಿಯಲ್ಲಿ ಅವಹೇಳನಕಾರಿ ಉಲ್ಲೇಖ ಮಾಡಲಾಗಿದೆ ಎಂದು ಆರೋಪಿಸಿ, ನರಸಪ್ಪ ಹನುಮಂತಪ್ಪ ಪಟವಾರಿ ಟ್ರಸ್ಟ್ (ಎನ್‌ಎಚ್‌ಪಿಟಿ) ಖಂಡನೆ ವ್ಯಕ್ತ

ಬಸವಣ್ಣನವರ ವಿರುದ್ಧದ ಆರೋಪ ಖಂಡನೀಯ: ಚಂದ್ರಶೇಖರ್ ಎನ್. ಪಟವಾರಿ

ಬೀದರ್: ಕರ್ನಾಟಕದ ಸಂಸ್ಕೃತಿಯ ನಾಯಕ, ಜಗಜ್ಯೋತಿ ಬಸವಣ್ಣನವರ ಕುರಿತು ‘ಬಸವ ಮಂಟಪ’ ಕೃತಿಯಲ್ಲಿ ಅವಹೇಳನಕಾರಿ ಉಲ್ಲೇಖ ಮಾಡಲಾಗಿದೆ ಎಂದು ಆರೋಪಿಸಿ, ನರಸಪ್ಪ ಹನುಮಂತಪ್ಪ ಪಟವಾರಿ ಟ್ರಸ್ಟ್ (ಎನ್‌ಎಚ್‌ಪಿಟಿ) ಖಂಡನೆ ವ್ಯಕ್ತಪಡಿಸಿದೆ.

ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ್ ಎನ್. ಪಟವಾರಿ ಅವರು ಪತ್ರಿಕಾ ಪ್ರಕಟಣೆ ಮೂಲಕ, ರವಿ ಹಂಜ್ ಅವರು ತಮ್ಮ ಕೃತಿಯಲ್ಲಿ ಬಸವಣ್ಣನವರು ಬಿಜ್ಜಳನ ಭಂಡಾರ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಉಲ್ಲೇಖಿಸಿರುವುದು ಖಂಡನೀಯ ಎಂದು ತಿಳಿಸಿದ್ದಾರೆ.

ಬಸವಣ್ಣನವರ ‘ಛಲಬೇಕು ಶರಣಂಗೆ ಪರಧನವನೊಲ್ಲೆಂಬ’ ವಚನವೇ ಇಂತಹ ಆರೋಪಗಳಿಗೆ ಉತ್ತರ ನೀಡುತ್ತದೆ. 12ನೇ ಶತಮಾನದಲ್ಲಿ 770 ಅಮರ ಗಣಗಳ ನೇತೃತ್ವದಲ್ಲಿ ಕಾಯಕ ಕ್ರಾಂತಿ ನಡೆಸಿ, ಕಾಯಕದಿಂದ ಗಳಿಸಿದ ಸಂಪತ್ತಿನ ಮೂಲಕ ದಾಸೋಹ ವ್ಯವಸ್ಥೆ ರೂಪಿಸಿದ ಮಹಾನ್ ಸಾಮಾಜಿಕ ಸುಧಾರಕರಾಗಿದ್ದರು ಬಸವಣ್ಣನವರು ಎಂದು ಅವರು ಹೇಳಿದ್ದಾರೆ.

ಬಸವಣ್ಣನವರ ಕ್ರಾಂತಿಯ ಪ್ರಮುಖ ಆಶಯಗಳಾದ ಕಾಯಕದ ಉದಾರೀಕರಣ, ಜಾತಿ ಭೇದ ನಿರ್ಮೂಲನೆ ಹಾಗೂ ಅಂಗಭೇದವಿಲ್ಲದ ಸಮಾನತೆಯ ತತ್ವಗಳು ಸಮಾಜಕ್ಕೆ ಮಹತ್ತರ ಕೊಡುಗೆ ನೀಡಿವೆ. ಇಂತಹ ಮಹಾನ್ ವ್ಯಕ್ತಿತ್ವವನ್ನು ಅಲ್ಪಜ್ಞಾನದಿಂದ ಅವಮಾನಿಸಿರುವುದು ಬಸವಣ್ಣನವರಿಗೆ ಮಾತ್ರವಲ್ಲ, 770 ಅಮರ ಗಣಗಳು, ಶರಣ ಸಮುದಾಯ, ಲಿಂಗಾಯತರು ಹಾಗೂ ಬಹುಜನ ಸಮಾಜಕ್ಕೆ ಮಾಡಿದ ಅವಮಾನವಾಗಿದೆ ಎಂದು ಚಂದ್ರಶೇಖರ್ ಎನ್. ಪಟವಾರಿ ಖಂಡಿಸಿದ್ದಾರೆ.
📲Get App