🔥 TRENDING शाहपुरा मनोहरपुर से दौसा तक 62.20 KM स... कलेक्टर ने सीएम हेल्पलाइन में ग्रेड‑ए... कुत्ते को बचाने के प्रयास में बाइक सवा... હારીજ નગરપાલિકામાં રજૂઆત કરવા ગયેલા ના... बहराइच के वन कर्मियों को लखनऊ के प्रधा... नवाबगंज के रामपुर में नेशनल मेडिकोस ने...
23 Nov 2026•
ગુજરાતી मराठी ਪੰਜਾਬੀ বাংলা
National

ಭಾರತೀಯ ಭೀಮಸೇನಾದ ವಿವಿಧ ಘಟಕಗಳಿಗೆ ಪದಾಧಿಕಾರಿಗಳ ನೇಮಕ

✍️ Reporter: Basavaraj pujari 🗓 23 Nov 2026, 07:31 PM 👁 14
Share: 💬 WhatsApp 📘 Facebook 𝕏 Post

ಅಶೋಕಕುಮಾರ ಮಾಳಗೆ ನೇತೃತ್ವದಲ್ಲಿ ನೇಮಕಾತಿ ಪ್ರಕ್ರಿಯೆ ಬೀದರ್: ಭಾರತೀಯ ಭೀಮಸೇನಾ ಸಂಘಟನೆಯ ರಾಜ್ಯ, ಜಿಲ್ಲಾ, ತಾಲೂಕು ಹಾಗೂ ಗ್ರಾಮ ಮಟ್ಟದ ಪದಾಧಿಕಾರಿಗಳ ನೇಮಕಾತಿ ಸಭೆ ನ.22ರಂದು ನಗರದ ಶಿವನಗರ ಭೀಮಸೇನಾ ಕಾರ್ಯಾಲಯದಲ್

ಭಾರತೀಯ ಭೀಮಸೇನಾದ ವಿವಿಧ ಘಟಕಗಳಿಗೆ ಪದಾಧಿಕಾರಿಗಳ ನೇಮಕ

ಅಶೋಕಕುಮಾರ ಮಾಳಗೆ ನೇತೃತ್ವದಲ್ಲಿ ನೇಮಕಾತಿ ಪ್ರಕ್ರಿಯೆ

ಬೀದರ್: ಭಾರತೀಯ ಭೀಮಸೇನಾ ಸಂಘಟನೆಯ ರಾಜ್ಯ, ಜಿಲ್ಲಾ, ತಾಲೂಕು ಹಾಗೂ ಗ್ರಾಮ ಮಟ್ಟದ ಪದಾಧಿಕಾರಿಗಳ ನೇಮಕಾತಿ ಸಭೆ ನ.22ರಂದು ನಗರದ ಶಿವನಗರ ಭೀಮಸೇನಾ ಕಾರ್ಯಾಲಯದಲ್ಲಿ ರಾಷ್ಟ್ರೀಯ ಉಪಾಧ್ಯಕ್ಷ ಅಶೋಕಕುಮಾರ ಮಾಳಗೆ ಅವರ ನೇತೃತ್ವದಲ್ಲಿ ನಡೆಯಿತು.

ಸಭೆಯಲ್ಲಿ ವಿವಿಧ ಘಟಕಗಳ ಪದಾಧಿಕಾರಿಗಳನ್ನು ಸರ್ವಾನುಮತದಿಂದ ನೇಮಕ ಮಾಡಲಾಯಿತು.

ರಾಜ್ಯ ಮಹಿಳಾ ಘಟಕದ ಪದಾಧಿಕಾರಿಗಳು: ಚಿತ್ರಾ ಗಾಯಕವಾಡ ರಾಜ್ಯಾಧ್ಯಕ್ಷರು, ಅಂಜಲಿ ಕಿವಡೆ ರಾಜ್ಯ ಉಪಾಧ್ಯಕ್ಷರು, ಸುರೇಖಾ ವಾಘಮಾರೆ ಜಿಲ್ಲಾಧ್ಯಕ್ಷರು ಹಾಗೂ ಜನಾಬಾಯಿ ಡೊಂಗ್ರೆ ಜಿಲ್ಲಾ ಉಪಾಧ್ಯಕ್ಷರಾಗಿ ನೇಮಕಗೊಂಡರು.

ಕಮಲನಗರ ತಾಲೂಕು ಘಟಕ: ಪ್ರಿಯಾಂಕ ಸೂರ್ಯವಂಶಿ ತಾಲೂಕಾಧ್ಯಕ್ಷರು, ಸುಧಾಮಣಿ ಸೂರ್ಯವಂಶಿ ಪ್ರಧಾನ ಕಾರ್ಯದರ್ಶಿ, ರೇಖಾ ನಿರ್ಮಳೆ ಉಪಾಧ್ಯಕ್ಷರು ಹಾಗೂ ಹರಿಬಾಜಿ ಸಿಂಧೆ ತಾಲೂಕಾಧ್ಯಕ್ಷರಾಗಿ ನೇಮಕಗೊಂಡರು.

ಮುಧೋಳ ಗ್ರಾಮ ಶಾಖೆ: ಸಾವಿತ್ರಾ ಮೇಲ್ದೊಡ್ಡಿ ಗ್ರಾಮ ಶಾಖೆ ಅಧ್ಯಕ್ಷರಾಗಿ ನೇಮಕಗೊಂಡರು.

ಬಸವಕಲ್ಯಾಣ ತಾಲೂಕು ಘಟಕ: ಭೀಮಪುತ್ರಿ ಕರುಣಾದೇವಿ ತಾಲೂಕಾಧ್ಯಕ್ಷರಾಗಿ ನೇಮಕಗೊಂಡರು. ಮೌಲಪ್ಪ ಬಳತೆ ಸುಂಧಾಳ ಅವರು ರೈತ ಸಂಘದ ಜಿಲ್ಲಾಧ್ಯಕ್ಷರಾಗಿದ್ದಾರೆ.

ಸಭೆಯಲ್ಲಿ ರಾಷ್ಟ್ರೀಯ ಸಂಯೋಜಕ ಮಹಾದೇವ ಮೂಲಭಾರತಿ, ರಾಷ್ಟ್ರೀಯ ಕಾರ್ಯದರ್ಶಿ ಸುನೀಲಕುಮಾರ ಡೊಳ್ಳೆ, ರಾಜ್ಯಾಧ್ಯಕ್ಷ ಸುರೇಶ ಸಿಂಧೆ, ರಾಜ್ಯ ಸಂಘಟನಾ ಕಾರ್ಯದರ್ಶಿ ಬಕ್ಕಪ್ಪ ದಂಡಿನ್, ಜಿಲ್ಲಾಧ್ಯಕ್ಷ ಸಂಜು ಸಾಗರ, ಸುರಕ್ಷಾ ದಳದ ಜಿಲ್ಲಾಧ್ಯಕ್ಷ ರಮೇಶ ಸಿಂಧೆ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
📲Get App