🔥 TRENDING राष्ट्रीय ट्रांसजेण्डर दिवस पर जिला स्... द आई स्कूल का द्वितीय वार्षिकोत्सव धूम... सोलापुर जिल्ह्यात ऊसाला 3500 दर न देण्... ಸಿರವಾರದಲ್ಲಿ ಟಿಪ್ಪು ಸುಲ್ತಾನ್ ಜಯಂತಿ ಆಚರಣ... শীত পড়তেই খেজুর গুড় তৈরির ধুম মানবাজ... बिहार के सबसे बड़े फ्लोटिंग सोलर का कल...
20 Nov 2026•
ગુજરાતી मराठी ਪੰਜਾਬੀ বাংলা

ಸಿರವಾರದಲ್ಲಿ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ: ರಾಜಾ ವೆಂಕಟಪ್ಪ ನಾಯಕ ದೊರೆಯಿಂದ ಪುತ್ಥಳಿಗೆ ಮಾಲಾರ್ಪಣೆ

✍️ Reporter: Khaja Hussain 🗓 20 Nov 2026, 08:24 PM 👁 10
Share: 💬 WhatsApp 📘 Facebook 𝕏 Post
ಸಿರವಾರ ಬ್ರೇಕಿಂಗ್ ನ್ಯೂಸ್

### ಸಿರವಾರದಲ್ಲಿ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ: ರಾಜಾ ವೆಂಕಟಪ್ಪ ನಾಯಕ ದೊರೆಯಿಂದ ಪುತ್ಥಳಿಗೆ ಮಾಲಾರ್ಪಣೆ

### ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರ ಸಮ್ಮುಖದಲ್ಲಿ ಜಯಂತಿ ಕಾರ್ಯಕ್ರಮ

ಸಿರವಾರ, ನ. 20: ಸಿರವಾರ ಪಟ್ಟಣದ ಟಿಪ್ಪು ಸುಲ್ತಾನ್ ವೃತ್ತದಲ್ಲಿ ಟಿಪ್ಪು ಸುಲ್ತಾನ್ ಜಯಂತಿಯನ್ನು ಆಚರಿಸಲಾಯಿತು. ಮಾನ್ವಿ ವಿಧಾನಸಭಾ ಕ್ಷೇತ್ರದ ನಿಕಟಪೂರ್ವ ಶಾಸಕರಾದ ರಾಜಾ ವೆಂಕಟಪ್ಪ ನಾಯಕ ದೊರೆ ಅವರು ಟಿಪ್ಪು ಸುಲ್ತಾನ್ ಜಯಂತಿಯ ಅಂಗವಾಗಿ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಈ ಸಂದರ್ಭದಲ್ಲಿ ಸಿರವಾರ ತಾಲೂಕು ಜೆಡಿಎಸ್ ಅಧ್ಯಕ್ಷ ಟಿ. ಮಲ್ಲಿಕಾರ್ಜುನ ಪಾಟೀಲ್ ಬಲ್ಲಟಗಿ, ಹಿರಿಯ ಮುಖಂಡರಾದ ಜಿ. ಲೋಕರೆಡ್ಡಿ, ಯುವ ಮುಖಂಡ ರಾಜಾ ಆದರ್ಶ ನಾಯಕ ದೊರೆ, ತಾಲೂಕು ಮಹಾ ಪ್ರಧಾನ ಕಾರ್ಯದರ್ಶಿ ದಾನಪ್ಪ ಸಿರವಾರ, ನಗರ ಘಟಕದ ಅಧ್ಯಕ್ಷ ರಂಜಿತ್ ಕುಮಾರ್, ತಾಲೂಕು ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ವಿಜಯಲಕ್ಷ್ಮಿ, ಹಿರಿಯ ಮುಖಂಡ ಮೌಲಾ ಸಾಬ್ ಉಪಸ್ಥಿತರಿದ್ದರು.

ಇದೇ ವೇಳೆ ಕವಿತಾಳ ಪಟ್ಟಣ ಪಂಚಾಯಿತಿ ಸದಸ್ಯರಾದ ಖಾಜಾ ಪಾಷಾ ಹಾಗೂ ರುಕ್ಮದ್ದೀನ್, ಯುವ ಮುಖಂಡರಾದ ರಂಜಿತ್ ಧಣಿ, ಅಮರೇಶ್ ಗೌಡ ಖರಾಬದಿನ್ನಿ, ಶಾಂತಪ್ಪ ಪಿತಗಲ್, ಯಲ್ಲಪ್ಪ ದೊರೆ, ರಾಮು ಗಿಂಡಿ, ಮಹಿಬೂಬ್ ಸಾಬ್, ಎಂ.ಡಿ. ಇಸ್ಮಾಯಿಲ್, ಬಂದೇನವಾಜ್ ಸೇರಿದಂತೆ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

ವರದಿ ಖಾಜಾ ಹುಸೇನ್ ಬಾಬಾ
ಜಾಲಹಳ್ಳಿ
📲Get App