🔥 TRENDING उमाशंकर के अंदाज में रसड़ा की सियासत म... కృష్ణాజిల్లా గుడివాడ పురపాలక సంఘం ఎన్న... 13 வயது யோகலட்சுமி 19 நவம்பர் 2026 கால... बाड़मेर में चुनावी पारा चढ़ा, परिणाम क... Nagaland Unveils New Agarwood Policy t... Two killed, six injured as Fortuner pl...
19 Nov 2026•
ગુજરાતી मराठी ਪੰਜਾਬੀ বাংলা
Sports

*ರೈತರ ಹೋರಾಟದ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದ ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್*

✍️ Reporter: Basavaraj pujari 🗓 15 Nov 2026, 06:15 AM 👁 68
Watch on: ▶️ YouTube
Share: 💬 WhatsApp 📘 Facebook 𝕏 Post

*ಬೀದರ್ (ನ.14):* ಟನ್ ಕಬ್ಬಿಗೆ 04 ಸಾವಿರ ರೂ. ದರ ನೀಡಬೇಕು, 01 ಸಾವಿರ ರೂ. ಬೆಂಬಲ ಬೆಲೆ ಘೋಷಣೆ ಮಾಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ರೈತರು ಅಹೋರಾತ್ರಿ ಧರಣಿ ನಡೆಸುತ್ತಿದ್ದ ಸ್ಥಳ

*ರೈತರ ಹೋರಾಟದ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದ ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್*

*ಬೀದರ್ (ನ.14):* ಟನ್ ಕಬ್ಬಿಗೆ 04 ಸಾವಿರ ರೂ. ದರ ನೀಡಬೇಕು, 01 ಸಾವಿರ ರೂ. ಬೆಂಬಲ ಬೆಲೆ ಘೋಷಣೆ ಮಾಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ರೈತರು ಅಹೋರಾತ್ರಿ ಧರಣಿ ನಡೆಸುತ್ತಿದ್ದ ಸ್ಥಳಕ್ಕೆ ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಜೆಡಿಎಸ್ ಮುಖಂಡರೊಂದಿಗೆ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದರು.
ಬೀದರ್ ನಗರದ ಅಂಬೇಡ್ಕರ್ ಸರ್ಕಲ್ ಹತ್ತಿರದ ಜಿಲ್ಲಾ ಉಸ್ತುವಾರಿ ಸಚಿವರ ಕಛೇರಿ ಮುಂಭಾಗದಲ್ಲಿ ಜಿಲ್ಲಾ ರೈತ ಸಂಘಗಳ ಸಮನ್ವಯ ಸಮಿತಿಯ ಮುಖಂಡತ್ವದಲ್ಲಿ ನ.12ರಿಂದ ನಡೆಯುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹದ ಸ್ಥಳಕ್ಕೆ ಶನಿವಾರ ಭೇಟಿ ನೀಡಿದ ಅವರು, ರೈತರ ಹೋರಾಟಕ್ಕೆ ನಮ್ಮ ಬೆಂಬಲವಿದೆ ಎಂದರು.
ಈ ವೇಳೆ ಮಾತನಾಡಿದ ಬಂಡೆಪ್ಪ ಖಾಶೆಂಪುರ್ ರವರು, ನಮ್ಮ ಬೀದರ್ ಜಿಲ್ಲೆಯಲ್ಲಿ ಕಬ್ಬು ಒಂದೇ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಈ ಕಬ್ಬಿನ ಬೆಲೆ ಹೆಚ್ಚಳಕ್ಕಾಗಿ, ಜಿಲ್ಲೆಯ ರೈತರ ಒಳಿತಿಗಾಗಿ ಧರಣಿ ಕುಳಿತಿರುವ ರೈತರ ಹೋರಾಟಕ್ಕೆ ನಮ್ಮ ಬೆಂಬಲವಿದೆ. ನಾವು ನಮ್ಮ ಪಕ್ಷದ ಜಿಲ್ಲಾಧ್ಯಕ್ಷರು ಒಳಗೊಂಡಂತೆ ಪ್ರಮುಖ ಮುಖಂಡರ ಸಮ್ಮುಖದಲ್ಲಿ ನಿಮ್ಮ ಬೆಂಬಲಕ್ಕೆ ಬಂದಿದ್ದೇವೆ. ಜೊತೆಗೆ 18, 19ಕ್ಕೆ ನೀವು ನಡೆಸುವ ದೊಡ್ಡಮಟ್ಟದ ಹೋರಾಟಕ್ಕೆ ಕೂಡ ನಮ್ಮ ಬೆಂಬಲವಿದೆ ಎಂದರು.
ಪ್ರತಿ ಟನ್ ಕಬ್ಬಿಗೆ 04 ಸಾವಿರ ರೂ. ದರ ನೀಡಬೇಕು. ಕನಿಷ್ಠ 500 ರೂ. ಬೆಂಬಲ ಬೆಲೆ ನೀಡಬೇಕು ಎಂದು ನಾವು ಮೊನ್ನೆ ಮಾಧ್ಯಮಗೋಷ್ಠಿ ನಡೆಸಿ ಒತ್ತಾಯ ಮಾಡಿದ್ದೇವು. ಪ್ರತಿ ಟನ್ ಕಬ್ಬಿಗೆ ನಾಲ್ಕು ಸಾವಿರ ರೂ. ನೀಡಬೇಕು ಎಂಬ ರೈತರ ಬೇಡಿಕೆ ಬಹಳಷ್ಟು ವೈಜ್ಞಾನಿಕವಾಗಿದೆ ಎಂದು ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.
*ಬಿ.ಎಸ್.ಎಸ್.ಕೆ ಲೀಸ್ ಗೆ ಕೊಡುವುದು ಬೇಡ:*
ಬಿ.ಎಸ್.ಎಸ್.ಕೆ ಲೀಸ್ ಗೆ ಕೊಡಿ ಎಂದು ರೈತರು ಕೇಳುವುದು ಬೇಡ, ಅದನ್ನು ಸರ್ಕಾರದಿಂದಲೇ ನಡೆಸುವಂತೆ ಒತ್ತಾಯ ಮಾಡಬೇಕು. ಇನ್ನೂ ಒಂದುವರೆ ವರ್ಷ ಹಾಗೆಯೇ ನಡೆಸಲಿ. ಮುಂದೆ ನಮ್ಮ ಸರ್ಕಾರ ಬರಲಿದೆ, ನಮ್ಮ ಸರ್ಕಾರ ಬಂದ ಬಳಿಕ ಸರ್ಕಾರದಿಂದ ನಾವೇ ಅದನ್ನು ಚಾಲನೆ ಮಾಡಿಸಲಿದ್ದೇವೆ.
ಈ ಹಿಂದೆ ನಮ್ಮ ಸರ್ಕಾರವಿದ್ದಾಗ 20 ಕೋಟಿ ರೂ. ಗ್ರಾಂಟ್ ಕೊಟ್ಟು ಬಿ.ಎಸ್.ಎಸ್.ಕೆಯನ್ನು ನಾವೇ ಪ್ರಾರಂಭ ಮಾಡಿಸಿದ್ವಿ. ಅದನ್ನು ಹೇಗೆ ಆರಂಭ ಮಾಡಿಸಿದ್ವಿ ಎಂಬುದನ್ನು ಒಂದು ಪುಸ್ತಕದ ರೂಪದಲ್ಲೇ ತಿಳಿಸಬಹುದಾಗಿದೆ ಅದಕ್ಕೆ ಅಷ್ಟೊಂದು ದೊಡ್ಡ ಇತಿಹಾಸವಿದೆ ಎಂದರು.
*ಸರ್ಕಾರ ನಡೆಸುವವರಿಗೆ ಬದ್ದತೆ ಇರಬೇಕು:*
ಬರ ಪರಿಹಾರದ ದುಡ್ಡು ಐದು ನೂರು, ಸಾವಿರ ರೂ. ರೈತರ ಖಾತೆಗಳಿಗೆ ಹಾಕಿದ್ದಾರೆ. ಅದಕ್ಕೆ ಸಂಬಂಧಿಸಿದ ಸಚಿವರಿಂದ, ಮುಖ್ಯಮಂತ್ರಿಗಳಿಂದ ಉತ್ತರವಿಲ್ಲ. ಅವರು ಏನು ಆದೇಶ ಮಾಡಿದ್ದಾರೋ ಅಧಿಕಾರಿಗಳು ಅದನ್ನು ಜಾರಿಗೆ ತಂದಿದ್ದಾರೆ. ಮೊದಲನೆಯ ಹಂತದಲ್ಲಿ ಹೆಕ್ಟೇರ್ ಗೆ 2500 ರೂಪಾಯಿ ಅಂತ ಹೇಳಿದ್ರಿ, ರೈತರಿಂದ ವ್ಯಾಪಕ ಆಕ್ರೋಶ ವ್ಯಕ್ತವಾದ ಬಳಿಕ ಒಂದು ಕುಟುಂಬಕ್ಕೆ ಐದು ಸಾವಿರ ರೂ. ಕೊಡ್ತಿವಿ ಅಂತ ಹೇಳಿದ್ದಿರಿ ಇದು ಯಾವ ಲೆಕ್ಕ.
ನಮ್ಮ ಸರ್ಕಾರವಿದ್ದಾಗ ರೈತರ ಮೇಲಿನ ಬಾರ ಕಮ್ಮಿ ಮಾಡಬೇಕು ಎಂದು ಎರಡು ಬಾರಿ ರೈತರ ಸಾಲ ಮನ್ನಾ ಮಾಡಿದ್ವಿ. ಒಂದು ಖಾತೆಗೆ ಒಂದು ಲಕ್ಷ ನೀಡಿದ್ವಿ. ಸರ್ಕಾರ ನಡೆಸುವವರಿಗೆ ಬದ್ದತೆ ಇರಬೇಕು ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ರವರು ಆಕ್ರೋಶ ವ್ಯಕ್ತಪಡಿಸಿದರು.
*ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ ಬಿಜೆಪಿ ಮುಖಂಡರು:*
ರೈತರ ಹೋರಾಟಕ್ಕೆ ಬೆಂಬಲ ನೀಡಲು ಧರಣಿ ಸ್ಥಳಕ್ಕೆ ಜೆಡಿಎಸ್ ಮುಖಂಡರು ಆಗಮಿಸಿ ಬೆಂಬಲ ವ್ಯಕ್ತಪಡಿಸುತ್ತಿದ್ದ ಸಮಯದಲ್ಲೇ, ಮಾಜಿ ಕೇಂದ್ರ ಸಚಿವ ಭಗವಂತ ಖೂಬಾರವರ ಸಮ್ಮುಖದಲ್ಲಿ ಬಿಜೆಪಿ ಮುಖಂಡರು ಧರಣಿ ಸ್ಥಳಕ್ಕೆ ಆಗಮಿಸಿ ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ರಮೇಶ್ ಪಾಟೀಲ್ ಸೋಲ್ಪೂರ್, ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್, ರೈತ ಸಂಘದ ಮುಖಂಡರಾದ ಮಲ್ಲಿಕಾರ್ಜುನ ಸ್ವಾಮಿ, ಶಿವರಾಜ್ ಪಾಟೀಲ್ ಅತಿವಾಳ, ಪ್ರಮುಖರಾದ ಅಶೋಕ್ ಕೊಡಗೆ, ಶಶಿ ಹೊಸಳ್ಳಿ, ಪೀರಪ್ಪ ಯರನಳ್ಳಿ, ಸಜ್ಜದ್ ಸಾಹೇಬ್, ದೇವೆಂದ್ರ ಸೋನಿ, ರಾಜು ಕಡ್ಯಾಳ, ರಾಜಶೇಖರ ಜವಳೆ, ಬಸವರಾಜ್ ಪಾಟೀಲ್ ಹಾರೋಗೇರಿ, ಸುದರ್ಶನ್ ಸುಂದರರಾಜ್, ಬೋಮಗೊಂಡ ಚಿಟ್ಟಾವಾಡಿ, ಅಭಿ ಕಾಳೆ, ಸಂಗು ಚಿದ್ರಿ, ಶಿವಕುಮಾರ್ ಬಾವಿಕಟ್ಟಿ, ಅರುಣ್ ಹೊಸಪೇಟೆ, ಲಲಿತಾ ಕರಂಜೆ, ಸಂಗಮ್ಮ ಪಾಟೀಲ್, ರೇವಣಸಿದ್ದಪ್ಪ ಶಿರಕಟ್ಟನಳ್ಳಿ, ಗಣಪತಿ ಶಂಭು ಕಂಗನಕೋಟ್, ಮನೋಹರ ದಂಡೆ, ಜಾಫೇಡ್ ಕಡ್ಯಾಳ, ತಾನಾಜಿ ತೋರಣೇಕರ್, ಚಿಕಾನ್ ಸಲಿಂ ಸೇರಿದಂತೆ ಬಿಜೆಪಿ, ಜೆಡಿಎಸ್ ಮುಖಂಡರು, ರೈತ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
📲Get App