🔥 TRENDING 3 सूत्री मांगों को लेकर पटवारी हड़ताल... జీకే వీధి మండల పగ్గాలు వైఎస్సార్సీపీకి... સુરતની ડૉ. પારુલ વડગામા: 18 વર્ષથી TB... સાબરકાંઠા જિલ્લાના ગામોમાં સીસીટીવી સ્... ठाणे जिल्ह्याला दुष्काळाच्या यादीतून व... जेल से निकलते ही आज़म खान ने किया घोषण...
19 Nov 2026•
ગુજરાતી मराठी ਪੰਜਾਬੀ বাংলা
Sports

*ರೈತರ ಹೋರಾಟದಲ್ಲಿ ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿದ ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್*

✍️ Reporter: Basavaraj pujari 🗓 19 Nov 2026, 09:40 PM 👁 23
Share: 💬 WhatsApp 📘 Facebook 𝕏 Post

*ಬೀದರ್ (ನ.19):* ಕಬ್ಬಿನ ದರ ನಿಗದಿ ಪಡಿಸಲು ಒತ್ತಾಯಿಸಿ ಗುರುವಾರದಂದು ಹೈದರಾಬಾದ್ ಮುಂಬೈ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಮಂಗಲಗಿ ಟೋಲ್ ಗೇಟ್ (ಪ್ಲಾಜಾ) ಬಳಿಯ ರಸ್ತೆ ತಡೆದು ರೈ

*ರೈತರ ಹೋರಾಟದಲ್ಲಿ ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿದ ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್*

*ಬೀದರ್ (ನ.19):* ಕಬ್ಬಿನ ದರ ನಿಗದಿ ಪಡಿಸಲು ಒತ್ತಾಯಿಸಿ ಗುರುವಾರದಂದು ಹೈದರಾಬಾದ್ ಮುಂಬೈ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಮಂಗಲಗಿ ಟೋಲ್ ಗೇಟ್ (ಪ್ಲಾಜಾ) ಬಳಿಯ ರಸ್ತೆ ತಡೆದು ರೈತರು ನಡೆಸುತ್ತಿದ್ದ ಬೃಹತ್ ಹೋರಾಟದಲ್ಲಿ ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಪಾಲ್ಗೊಂಡು, ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಬಂಡೆಪ್ಪ ಖಾಶೆಂಪುರ್ ರವರು, ಕಬ್ಬು ಬೆಳೆಯುವಲ್ಲಿ ನಮ್ಮ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಮುಂಚೂಣಿಯಲ್ಲಿದೆ. ಅದರಲ್ಲೂ ನಮ್ಮ ಬೀದರ್ ಜಿಲ್ಲೆಯ ವಾಣಿಜ್ಯ ಬೆಳೆಗಳಲ್ಲಿ ಕಬ್ಬು ಪ್ರಮುಖವಾಗಿದೆ. ಕಬ್ಬಿನ ದರ ನಿಗದಿಗಾಗಿ ಮುಷ್ಕರ ನಡೆಯುತ್ತಿದೆ. ನಾನು ಒಬ್ಬ ರೈತನಾಗಿ ಈ ರೈತರ ಹೋರಾಟಕ್ಕೆ ಬೆಂಬಲ ನೀಡಲು ಬಂದಿದ್ದೇನೆ ಎಂದರು.
ರೈತರೆಂದು ಬಂದಾಗ ಯಾವುದೇ ಪಕ್ಷ ಭೇದವಿಲ್ಲದೇ ಎಲ್ಲರೂ ಒಗ್ಗಟ್ಟಾಗುವ ಸನ್ನಿವೇಶ ಬರುತ್ತದೆ. ಅದು ಇವತ್ತು ಬಂದಿದೆ. ಬೆಳಗಾವಿಯಲ್ಲಿ ದೊಡ್ಡಮಟ್ಟದ ಹೋರಾಟ ತಿಂಗಳುಗಟ್ಟಲೇ ನಡೆಯಿತು. ಅಲ್ಲಿ 04 ಸಾವಿರ ರೂ.ವರಗೆ ಬೆಲೆ ನಿಗದಿಯಾಯಿತು. ಕಲಬುರಗಿಯಲ್ಲಿ ಹೋರಾಟ ನಡೆದು 3600 ರೂ.ವರೆಗೆ ಬಂದು ಬೆಲೆ ಅಂತಿಮವಾಗಿದೆ.
ರೈತರ ಹೋರಾಟಕ್ಕೆ ಯಾವಾಗಲೂ ನಮ್ಮ ಸಂಪೂರ್ಣ ಬೆಂಬಲವಿದೆ. ಜಿಲ್ಲಾಧ್ಯಂತ ಇಂದು ನಡೆಯುತ್ತಿರುವ ಹೋರಾಟಕ್ಕೂ ನಮ್ಮ ಬೆಂಬಲವಿದೆ. ರೈತರಿಗೆ ಪ್ರತಿ ಟನ್ ಕಬ್ಬಿಗೆ 04 ಸಾವಿರ ರೂ. ದರ ನಿಗದಿ ಮಾಡಿ ಘೋಷಣೆ ಮಾಡ್ಬೇಕು. ಅದರ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಕೂಡಲೇ ಸಭೆ ನಡೆಸಿ, ಆದಷ್ಟು ಬೇಗ ಘೋಷಣೆ ಮಾಡ್ಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ನಾನು ಆಗ್ರಹ ಮಾಡುತ್ತೇನೆ.
ಅದರೊಂದಿಗೆ ಟನ್ ಕಬ್ಬಿಗೆ ಕನಿಷ್ಠ ಐದು ನೂರು ರೂ. ಬೆಂಬಲ ಬೆಲೆ ನೀಡಬೇಕು. ಹಿಂದೆ ಎಲ್ಲಾ ನಾವು ಕೊಟ್ಟಿದ್ದೇವೆ. ಇವತ್ತು ಐದು ಗ್ಯಾರಂಟಿ ಕೊಡ್ತಿದ್ದಾರೆ. ಅದರಲ್ಲಿ ರೈತರಿಗೆ ಯಾವ ಗ್ಯಾರಂಟಿ ಇದೆ. ರೈತರಿಗೆ ಯಾವ ಗ್ಯಾರಂಟಿ ಕೂಡ ಇಲ್ಲ ಎಂದು ಬಂಡೆಪ್ಪ ಖಾಶೆಂಪುರ್ ರವರು ಬೇಸರ ವ್ಯಕ್ತಪಡಿಸಿದರು.
*ರೈತರು ಕೇಳುತ್ತಿರುವುದು ಸರಿಯಿದೆ:*
ರೈತರು ಕೇಳುತ್ತಿರುವುದು ಸರಿಯಿದೆ. ರೈತರು ವರ್ಷ ಪೂರ್ತಿ ಕಬ್ಬು ಬೆಳಿಬೇಕು. ಈ ವರ್ಷ ಮಳೆ ಇಲ್ಲದೆ ರೈತರು ಆತಂಕಕ್ಕೆ ಸಿಲುಕ್ಕಿದ್ದಾರೆ. ಆಗಾಗಿ ಕೂಡಲೇ ಸಭೆ ನಡೆಸಿ, ರೈತರ ಬೇಡಿಕೆಗಳನ್ನು ಈಡೇರಿಸುತ್ತೇವೆ ಎಂದು ಘೋಷಣೆ ಮಾಡ್ಬೇಕು ಎಂದು ನಾನು ಮುಖ್ಯಮಂತ್ರಿಗಳಿಗೆ ಹಾಗೂ ಉಸ್ತುವಾರಿ ಸಚಿವರಿಗೆ ಆಗ್ರಹ ಮಾಡುತ್ತೇನೆ.
ಕಳೆದ ವರ್ಷ ಟನ್ ಕಬ್ಬಿಗೆ 2950 ರೂ. ಕೊಟ್ಟಿದ್ದರು. ಆಗ ಸಕ್ಕರೆ ಬೆಲೆ 04 ಸಾವಿರ ರೂ. ಇತ್ತು. ಈ ವರ್ಷ ಸಕ್ಕರೆ ಬೆಲೆ ಕೆಜಿಗೆ ಕನಿಷ್ಠ 52 ರಿಂದ 54 ರೂ. ಇದೆ. ರೈತರಿಗೆ 4000 ರೂ. ಕೊಟ್ಟರು. ಕಾರ್ಖಾನೆಗೆ 02 ರಿಂದ 03 ನೂರು ರೂ. ಹೆಚ್ಚಾಗಿ ಉಳಿಯುತ್ತದೆ. ಮುಂದಿನ ದಿನಗಳಲ್ಲಿ ಬೆಲೆ ಕಮ್ಮಿ ಆದ್ರೆ ಹೇಗೆ ಅಂತ ಕಾರ್ಖಾನೆಯವರು ಯೋಚನೆ ಮಾಡುತ್ತಿರಬಹುದು. ಕಮ್ಮಿ ಆದ್ರೆ ಸರ್ಕಾರ ಇದೆ. ನಿಮಗೆ ಕೊಡುತ್ತೆ. ಜಾಸ್ತಿ ತಲೆ ಕೆಡಸಿಕೊಳ್ಳಬಾರದು ಎಂದು ಬಂಡೆಪ್ಪ ಖಾಶೆಂಪುರ್ ರವರು ಸಲಹೆ ನೀಡಿದರು.
*ನಾನು ಸಹಕಾರಿ ಸಚಿವನಾಗಿ ಕೆಲಸ ಮಾಡಿದ್ದೇನೆ:*
ನಾನು ಬೀದರ್ ಜಿಲ್ಲಾ ಉಸ್ತುವಾರಿ ಸಚಿವರಿಗೆ ಹೇಳುವುದು ಏನೆಂದರೇ, ನಮ್ಮ ಬೀದರ್ ಜಿಲ್ಲೆಯಲ್ಲಿ ಮಹಾತ್ಮಗಾಂಧಿ, ನಾರಂಜಾ ಎರಡು ಸಹಕಾರಿ ಕಾರ್ಖಾನೆಗಳಿವೆ. ಅವು ಸರ್ಕಾರದ ಸ್ವತ್ತುಗಳಾಗಿವೆ. ನಾನು ಸಹಕಾರಿ ಸಚಿವನಾಗಿ ಕೆಲಸ ಮಾಡಿದವನಿದ್ದೇನೆ. ಸರ್ಕಾರ ಕೂಡಲೇ ಕಬ್ಬಿನ ದರ ನಿಗದಿ ಮಾಡಿ ಘೋಷಣೆ ಮಾಡಲಿ. ಅವುಗಳಿಗೆ ಲಾಸ್ ಆದರೇ ಸರ್ಕಾರದಿಂದ ಗ್ರಾಂಟ್ ತರೋಣ. ನಿಮ್ಮೊಂದಿಗೆ ನಾನು ಬರುತ್ತೇನೆ ಎಂದರು.
ಬಿಎಸ್ಎಸ್ಕೆಯನ್ನು 20 ಕೋಟಿ ರೂ. ಗ್ರಾಂಟ್ ಕೊಟ್ಟು ನಾನು ಆರಂಭ ಮಾಡಿದ್ದೆ. ಬಿಎಸ್ಎಸ್ಕೆ ಯಾರಿಗೂ ಲೀಸ್ ಕೊಡದಂತೆ ಇನ್ನೂ ಒಂದು ವರ್ಷ ನೋಡಿಕೊಳ್ಳಿ. ಮುಂದೆ ನಮ್ಮ ಸರ್ಕಾರ ಬರುತ್ತೆ ನಾವು ಅದನ್ನು ಮತ್ತೆ ಗ್ರಾಂಟ್ ಕೊಟ್ಟು ಆರಂಭ ಮಾಡುತ್ತೇವೆ ಎಂದು ಬಂಡೆಪ್ಪ ಖಾಶೆಂಪುರ್ ರವರು ಭರವಸೆ ನೀಡಿದರು.
*ಪೊಲೀಸರು ರೈತರ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡಬಾರದು:*
ಪೊಲೀಸರು ರೈತರ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡಬಾರದು. ಅವರು ತಮ್ಮ ಬೇಡಿಕೆಗಳನ್ನು ಕೇಳಲು ಹೊರಟಿದ್ದಾರೆ. ರೈತರನ್ನು ತಡೆಯುವ ಕೆಲಸವನ್ನು ಪೊಲೀಸರು ಮಾಡಬಾರದು. ಅವರಿಗೆ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಡಬೇಕು ಎಂದು ನಾನು ಆಗ್ರಹಿಸುತ್ತೇನೆ ಎಂದು ಖಾಶೆಂಪುರ್ ರವರು ಹೇಳಿದರು.
*ಬೀದರ್ ನಲ್ಲಿ ಯಾಕೆ ಬೆಲೆ ನಿಗದಿ ಮಾಡಿಲ್ಲ:*
ಬೆಳಗಾವಿ, ಗುಲಬುರ್ಗಾ ಸೇರಿದಂತೆ ಎಲ್ಲಾ ಕಡೆಗೆ ರೈತರು ದೊಡ್ಡಮಟ್ಟದ ಪ್ರತಿಭಟನೆ ಮಾಡ್ತಿದ್ದಾರೆ. ಅದರಂತೆ ಸರ್ಕಾರದವರು ಎಲ್ಲಾ ಕಡೆ ಕಬ್ಬಿನ ದರ ನಿಗದಿ ಮಾಡಿದ್ದಾರೆ‌. ಆದರೇ ಬೀದರ್ ನಲ್ಲಿ ಯಾಕ್ ಮಾಡಿಲ್ಲ ಎಂದು ಬಂಡೆಪ್ಪ ಖಾಶೆಂಪುರ್ ರವರು ಪ್ರಶ್ನಿಸಿದರು.
*ನಾವು ಯಾವತ್ತೂ ಕೇಂದ್ರದ ಕಡೆಗೆ ಬೆರಳು ಮಾಡಿ ತೋರಿಸಿಲ್ಲ:*
ನಾವು ಸರ್ಕಾರ ನಡೆಸಿದ್ದೇವೆ. ನಾವು ಯಾವತ್ತೂ ಕೂಡ ಕೇಂದ್ರ ಸರ್ಕಾರದ ಕಡೆಗೆ ಬೆರಳು ಮಾಡಿ ತೋರಿಸಿಲ್ಲ. ರೈತರ ಸಾಲವನ್ನು ಮನ್ನಾ ಮಾಡಿದ್ದೇವೆ. ರಾಜ್ಯ ಸರ್ಕಾರ ಐದು ಗ್ಯಾರಂಟಿಗಳ ಬಗ್ಗೆ ಹೇಳುತ್ತೆ. ರೈತರಿಗೆ ಯಾವ ಗ್ಯಾರಂಟಿ ಕೊಟ್ಟಿದೆ ಅಂತ ಹೇಳ್ಬೇಕಲ್ವ ಎಂದು ಬಂಡೆಪ್ಪ ಖಾಶೆಂಪುರ್ ರವರು ಪ್ರಶ್ನಿಸಿದರು.
ರೈತರು ರಸ್ತೆಗಿಳಿದು ಪ್ರತಿಭಟನೆ ನಡೆಸಿದರು ಸರ್ಕಾರದ ಯಾವೊಬ್ಬ ಅಧಿಕಾರಿಯೂ ಬಂದು ರೈತರನ್ನು ಮಾತಾಡಿಸಲ್ಲ ಅಂದ್ರೆ ಇದು ಸರ್ಕಾರನಾ? ರೈತರು ಸರ್ಕಾರದ ವಿರುದ್ಧ ತಿರುಗಿ ಬೀಳುವ ದಿನ ದೂರವಿಲ್ಲ ಎಂದು ಬಂಡೆಪ್ಪ ಖಾಶೆಂಪುರ್ ರವರು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವಿವಿಧೆಡೆಯಿಂದ ಆಗಮಿಸಿದ್ದ ಶ್ರೀಗಳು, ರೈತ ಸಂಘದ ಪ್ರಮುಖರು, ವಿವಿಧೆಡೆಯಿಂದ ಆಗಮಿಸಿದ್ದ ರೈತರು, ಬಿಜೆಪಿ, ಜೆಡಿಎಸ್ ಪಕ್ಷಗಳ ಮುಖಂಡರು, ಕಾರ್ಯಕರ್ತರು ಸೇರಿದಂತೆ ಅನೇಕರಿದ್ದರು.
📲Get App