🔥 TRENDING हजारीबाग में टेलीकॉम समिति ने दूरस्थ क... ग्राम जुवाड़ में धरती जतन यात्रा के तह... श्रीगंगानगर के रावला तहसील में 12knd प... Congress Launches Samvidhan Raksha Mar... Fire in Pawani, Uttarakhand leaves 45... योगापट्टी में पल्स पोलियो अभियान का सम...
26 Nov 2026•
ગુજરાતી मराठी ਪੰਜਾਬੀ বাংলা

ರಾಯಚೂರು ನಗರದಲ್ಲಿ ಕಾನೋಕರ್ಪಸ್ ಮರಗಳ ತೆರವಿಗೆ AIMIM ಆಗ್ರಹ

✍️ Reporter: Khaja Hussain 🗓 26 Nov 2026, 09:15 PM 👁 18
Share: 💬 WhatsApp 📘 Facebook 𝕏 Post
**ರಾಯಚೂರು ಬ್ರೇಕಿಂಗ್ ನ್ಯೂಸ್**

# ರಾಯಚೂರು ನಗರದಲ್ಲಿ ಕಾನೋಕರ್ಪಸ್ ಮರಗಳ ತೆರವಿಗೆ AIMIM ಆಗ್ರಹ

### ಅಸ್ತಮಾ, ಅಲರ್ಜಿ ಹಾಗೂ ಉಸಿರಾಟದ ಸಮಸ್ಯೆಗಳಿಗೆ ಕಾರಣವಾಗುತ್ತಿರುವ ಆರೋಪ: ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದ ಶಬ್ಬೀರ್ ಅಹ್ಮದ್ ಹೌದಡಿ

**ರಾಯಚೂರು, ನ.26:** ರಾಯಚೂರು ನಗರ ಹಾಗೂ ಸುತ್ತಮುತ್ತಲಿನ ಬಡಾವಣೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಸಲಾಗಿರುವ ಕಾನೋಕರ್ಪಸ್ (Conocarpus) ಜಾತಿಯ ಮರಗಳನ್ನು ತೆರವುಗೊಳಿಸುವಂತೆ ಆಗ್ರಹಿಸಿ, ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (AIMIM) ಪಕ್ಷದ ರಾಯಚೂರು ನಗರ ಅಧ್ಯಕ್ಷ ಶಬ್ಬೀರ್ ಅಹ್ಮದ್ ಹೌದಡಿ ಅವರು ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ರಾಯಚೂರು ನಗರದ ವೆಂಕಟೇಶ್ವರ ಕಾಲೋನಿ, ಐ.ಬಿ. ರಸ್ತೆ, ಎಂ.ಜಿ.ಆರ್. ಲೇಔಟ್, ಇಂದಿರಾ ನಗರ ರಸ್ತೆ ಸೇರಿದಂತೆ ವಿವಿಧ ಬಡಾವಣೆಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕಾನೋಕರ್ಪಸ್ ಜಾತಿಯ ಮರಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಸಲಾಗಿದೆ. ಈ ಮರಗಳಿಂದ ಹೊರಬರುವ ಪರಾಗಕಣಗಳು ಸಾರ್ವಜನಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ವಿಶೇಷವಾಗಿ ವೃದ್ಧರು ಹಾಗೂ ಸಾರ್ವಜನಿಕರಲ್ಲಿ ಅಸ್ತಮಾ, ಅಲರ್ಜಿ, ನೆಗಡಿ ಮತ್ತು ಉಸಿರಾಟದ ತೊಂದರೆಗಳಂತಹ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿವೆ ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಆರೋಗ್ಯ ಮತ್ತು ಪರಿಸರದ ಹಿತದೃಷ್ಟಿಯಿಂದ ಕಾನೋಕರ್ಪಸ್ ಮರಗಳನ್ನು ಗುರುತಿಸಿ, ಸಂಬಂಧಪಟ್ಟ ಅಧಿಕಾರಿಗಳ ಪರಿಶೀಲನೆ ಹಾಗೂ ಅಗತ್ಯ ಕಾನೂನುಬದ್ಧ ಅನುಮತಿ ಪಡೆದು ಬೇರು ಸಮೇತ ತೆರವುಗೊಳಿಸಬೇಕು ಎಂದು ಒತ್ತಾಯಿಸಲಾಗಿದೆ.

ಈಗಾಗಲೇ ಪರಿಸರವಾದಿಗಳು ಹಾಗೂ ಪತ್ರಕರ್ತರು ಸೇರಿದಂತೆ ವಿವಿಧ ಸಂಘಟನೆಗಳು ಕಾನೋಕರ್ಪಸ್ ಮರಗಳ ತೆರವಿಗೆ ಸಂಬಂಧಿಸಿದಂತೆ ಧ್ವನಿ ಎತ್ತಿದ್ದು, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.

ರಾಯಚೂರು ನಗರದ ವಿವಿಧ ಪ್ರದೇಶಗಳಲ್ಲಿರುವ ಈ ಮರಗಳ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ, ಸಾರ್ವಜನಿಕ ಆರೋಗ್ಯ, ಪರಿಸರ ಸಂರಕ್ಷಣೆ ಹಾಗೂ ಜನರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು AIMIM ಪಕ್ಷದ ರಾಯಚೂರು ನಗರ ಅಧ್ಯಕ್ಷ ಶಬ್ಬೀರ್ ಅಹ್ಮದ್ ಹೌದಡಿ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಶೈಬಾಜ್ ಖಾನ್ , ತನ್ವೀರ್ ಅಹ್ಮದ್ ಖಾನ್ , ಇರ್ಫಾನ್ ಖಾನ್, ಸೈಯದ್ ಮಹಾದ್ , ಅವೈಜ್ ಉಪಸ್ಥಿತರಿದ್ದರು


**ವರದಿ: ಖಾಜಾ ಹುಸೇನ್ ಬಾಬಾ, ಜಾಲಹಳ್ಳಿ**
📲Get App