🔥 TRENDING Karnataka to Launch Two New Medical Co... Basel Mission Museum and Art Gallery t... Kotak Neo publishes live gold rates fo... Union Minister Blames BJP's Poor Rajas... Rajasthan BJP chief accepts blame for... নবদ্বীপ ধামে সাংবাদিকদের মুখোমুখি শুভে...
22 Nov 2026•
ગુજરાતી मराठी ਪੰਜਾਬੀ বাংলা

ದೇವದುರ್ಗ ದಲ್ಲಿ ಪ್ರಿಯಾಂಕ್ ಖರ್ಗೆ 48ನೇ ಜನ್ಮದಿನ: ತಾಲೂಕ ಸರ್ಕಾರಿ ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಹಣ್ಣು, ಬ್ರೆಡ್ ವಿತರಣೆ

✍️ Reporter: Khaja Hussain 🗓 22 Nov 2026, 09:50 PM 👁 20
Share: 💬 WhatsApp 📘 Facebook 𝕏 Post
**ದೇವದುರ್ಗ ಬ್ರೇಕಿಂಗ್ ನ್ಯೂಸ್**

# ದೇವದುರ್ಗ ದಲ್ಲಿ ಪ್ರಿಯಾಂಕ್ ಖರ್ಗೆ 48ನೇ ಜನ್ಮದಿನ: ತಾಲೂಕ ಸರ್ಕಾರಿ ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಹಣ್ಣು, ಬ್ರೆಡ್ ವಿತರಣೆ

### ಆಡಂಬರದ ಆಚರಣೆಗೆ ಬದಲಾಗಿ ರೋಗಿಗಳಿಗೆ ನೆರವು ನೀಡುವ ಮೂಲಕ ಸಚಿವರ ಹುಟ್ಟುಹಬ್ಬ ಆಚರಣೆ

**ದೇವದುರ್ಗ, ನ. 22:** ಗೃಹ ಸಚಿವ ಹಾಗೂ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರ 48ನೇ ಜನ್ಮದಿನದ ಅಂಗವಾಗಿ ದೇವದುರ್ಗದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಬ್ರೆಡ್, ಹಾಲು ಹಾಗೂ ಹಣ್ಣು-ಹಂಪಲು ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕರ್ನಾಟಕ ರಾಜ್ಯ ಬಲಗೈ ಸಮುದಾಯಗಳ ಒಕ್ಕೂಟ ಮಹಾಸಭಾ (ರಿ.) ದೇವದುರ್ಗ ತಾಲೂಕು ಸಮಿತಿಯ ವತಿಯಿಂದ ಈ ಸೇವಾ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಹುಟ್ಟುಹಬ್ಬದ ಆಡಂಬರದ ಆಚರಣೆಗೆ ಬದಲಾಗಿ ಬಡವರಿಗೆ ನೆರವಾಗುವ ಉದ್ದೇಶದಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ತಾಲೂಕು ಅಧ್ಯಕ್ಷ ಮಹಾಂತೇಶ ಭವಾನಿ ಮಾತನಾಡಿ, ಸಚಿವ ಪ್ರಿಯಾಂಕ್ ಖರ್ಗೆ ಅವರ ರಾಜಕೀಯ ಪಯಣ, ಜನಸೇವೆ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಸ್ಮರಿಸಿದರು.

2009ರ ಉಪಚುನಾವಣೆಯಲ್ಲಿ ಸೋಲು ಕಂಡ ಬಳಿಕ 2013, 2018 ಹಾಗೂ 2023ರ ಚುನಾವಣೆಗಳಲ್ಲಿ ಚಿತ್ತಾಪುರ ಕ್ಷೇತ್ರದಿಂದ ಸತತ ಮೂರು ಬಾರಿ ಗೆಲುವು ಸಾಧಿಸಿ ಹ್ಯಾಟ್ರಿಕ್ ಜಯ ದಾಖಲಿಸಿದ್ದಾರೆ. ಐಟಿ-ಬಿಟಿ, ಸಮಾಜ ಕಲ್ಯಾಣ, ಗ್ರಾಮೀಣಾಭಿವೃದ್ಧಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಚಿವರಾಗಿ ಸೇವೆ ಸಲ್ಲಿಸಿರುವ ಅವರು, ಪ್ರಸ್ತುತ ಗೃಹ ಸಚಿವರಾಗಿ ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಜನರ ಕಷ್ಟಗಳಿಗೆ ತಕ್ಷಣ ಸ್ಪಂದಿಸುವ ಸರಳ ಹಾಗೂ ಸಜ್ಜನ ನಾಯಕರಾಗಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಆನಂದ ತುಪ್ಪದ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಆಂಜಿನೇಯ್ಯ ಬಡಿಗೇರ, ನಾಗರಾಜ ಶಾವಂತಗೇರಾ, ಮಂಜುನಾಥ ಹೇರುಂಡಿ, ನಿವೃತ್ತ ಶಿಕ್ಷಕ ಮಲ್ಲಿಕಾರ್ಜುನ, ನರಸಪ್ಪ ಚಿಂಚೋಡಿ, ಮಲ್ಲಿಕಾರ್ಜುನ ಮಸರಕಲ್, ಹೊನ್ನಪ್ಪ ಯರಮಸಾಳ, ರಂಗನಾಥ ಕೊಂಬಿನ್, ಮರಲಿಂಗಪ್ಪ ಹೇರುಂಡಿ, ರಮೇಶ ಸಿ., ಪ್ರಕಾಶ ಭವಾನಿ, ಡಾ. ಖಾಜಾ, ರಫಿ, ಆಕಾಶ ತೇಲ್ಕರ್, ರಾಹುಲ್ ಮಾರ್ಚಾಲ್, ಮಹೇಶ ಹೀರೇಬೂದುರು, ಶಿವಕುಮಾರ ಚಲವಾದಿ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಹಾಗೂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

ವರದಿ ಖಾಜಾ ಹುಸೇನ್ ಬಾಬಾ
ಜಾಲಹಳ್ಳಿ
📲Get App