🔥 TRENDING સાબરકાંઠાના પોશીના-ખેડબ્રહ્મામાં 278 બ... 39 ਸਾਲ ਦੀ ਉਮਰ ''ਚ ਮਾਂ ਬਣੀ ਮਸ਼ਹੂਰ ਅਦਾਕਾਰ... ಕೊಡೇಕಲ್ ಗ್ರಾಮದಲ್ಲಿ ರೈತರ ಪಾದಯಾತ್ರೆಗೆ ಅದ... ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ... ગुજરાતમાં ખાનગી વાહનોમાં જાતિ-લેબલ અને... ਸੋਨੇ-ਚਾਂਦੀ ਦੀਆਂ ਕੀਮਤਾਂ 'ਚ ਭਾਰੀ ਗਿਰਾਵਟ,...
20 Nov 2026•
ગુજરાતી मराठी ਪੰਜਾਬੀ বাংলা
Education

ನ.25ರಿಂದ ಬೆಂಗಳೂರಿನಲ್ಲಿ ಬಿಸಿಯೂಟ ನೌಕರರ ಅನಿರ್ದಿಷ್ಟಾವಧಿ ಹೋರಾಟ

✍️ Reporter: Basavaraj pujari 🗓 20 Nov 2026, 09:24 PM 👁 17
Share: 💬 WhatsApp 📘 Facebook 𝕏 Post

ಕ್ಲಸ್ಟರ್ ಕಿಚನ್ ಸೆಂಟರ್ ಯೋಜನೆ ವಿರೋಧಿಸಿ ಕೆಲಸ ಸ್ಥಗಿತ; ಲಕ್ಷಾಂತರ ಮಹಿಳೆಯರ ಉದ್ಯೋಗ ಉಳಿಸಲು ಆಗ್ರಹ ಬೀದರ್: ಅಕ್ಷರ ದಾಸೋಹ ಯೋಜನೆಯಡಿ ಶಾಲೆಗಳಲ್ಲಿ ಮಕ್ಕಳಿಗೆ ಬಿಸಿಯೂಟ ತಯಾರಿಸಿ ವಿತರಿಸುತ್ತಿರುವ ಅಡುಗೆ ನೌಕರರ ಉದ

ನ.25ರಿಂದ ಬೆಂಗಳೂರಿನಲ್ಲಿ ಬಿಸಿಯೂಟ ನೌಕರರ ಅನಿರ್ದಿಷ್ಟಾವಧಿ ಹೋರಾಟ
ಕ್ಲಸ್ಟರ್ ಕಿಚನ್ ಸೆಂಟರ್ ಯೋಜನೆ ವಿರೋಧಿಸಿ ಕೆಲಸ ಸ್ಥಗಿತ; ಲಕ್ಷಾಂತರ ಮಹಿಳೆಯರ ಉದ್ಯೋಗ ಉಳಿಸಲು ಆಗ್ರಹ

ಬೀದರ್: ಅಕ್ಷರ ದಾಸೋಹ ಯೋಜನೆಯಡಿ ಶಾಲೆಗಳಲ್ಲಿ ಮಕ್ಕಳಿಗೆ ಬಿಸಿಯೂಟ ತಯಾರಿಸಿ ವಿತರಿಸುತ್ತಿರುವ ಅಡುಗೆ ನೌಕರರ ಉದ್ಯೋಗಕ್ಕೆ ಕುತ್ತು ತರುವ ಕ್ಲಸ್ಟರ್ ಕಿಚನ್ ಸೆಂಟರ್ ಪ್ರಾರಂಭಿಸುವ ಕ್ರಮವನ್ನು ವಿರೋಧಿಸಿ, ನವೆಂಬರ್ 25ರಿಂದ ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರ ಸಂಘದ ವತಿಯಿಂದ ರಾಜ್ಯಮಟ್ಟದ ಅನಿರ್ದಿಷ್ಟಾವಧಿ ಹೋರಾಟ ಹಮ್ಮಿಕೊಳ್ಳಲಾಗಿದೆ.

ಅಕ್ಷರ ದಾಸೋಹ ಯೋಜನೆ ಪ್ರಾರಂಭವಾದಾಗಿನಿAದ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಅಡುಗೆ ನೌಕರರು ಮಕ್ಕಳಿಗೆ ಬಿಸಿಯೂಟ ತಯಾರಿಸಿ ನೀಡುತ್ತಿದ್ದಾರೆ. ಆದರೆ, ಶಿಕ್ಷಕರಿಗೆ ಬಿಸಿಯೂಟ ನಿರ್ವಹಣೆಯಿಂದ ಕೆಲಸದ ಹೊರೆ ಹೆಚ್ಚಾಗುತ್ತಿದೆ ಎಂಬ ಕಾರಣ ಮುಂದಿಟ್ಟು, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಕ್ಲಸ್ಟರ್ ಮಟ್ಟದಲ್ಲಿ ಕಿಚನ್ ಸೆಂಟರ್ ಆರಂಭಿಸಿ, ಸಂಘ-ಸAಸ್ಥೆಗಳು, ಮಹಿಳಾ ಸಂಘಗಳು ಹಾಗೂ ಸ್ವಸಹಾಯ ಸಂಘಗಳ ಮೂಲಕ ಅಡುಗೆ ಮಾಡಿಸುವಂತೆ ಶಿಕ್ಷಣ ಇಲಾಖೆಗೆ ಮನವಿ ಮಾಡಿರುವುದು ಖಂಡನೀಯ ಎಂದು ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರ ಸಂಘ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕ್ರಮದಿಂದ ಈಗಾಗಲೇ ಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ಬಿಸಿಯೂಟ ನೌಕರರು ಉದ್ಯೋಗ ಕಳೆದುಕೊಳ್ಳುವ ಆತಂಕ ಎದುರಿಸುತ್ತಿದ್ದಾರೆ. ಯೋಜನೆಯ ಮೂಲ ಉದ್ದೇಶವನ್ನು ಮರೆತು, ಬಡ ಮಹಿಳೆಯರ ಜೀವನೋಪಾಯ ಕಸಿದುಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ರಾಜ್ಯಾದ್ಯಂತ ಲಕ್ಷಾಂತರ ಬಡ, ವಿಧವಾ ಹಾಗೂ ವಿಚ್ಛೇದಿತ ಮಹಿಳೆಯರು ಕೇವಲ ₹300ರಿಂದ ₹650ರ ಅಲ್ಪ ಸಂಭಾವನೆಗೆ ದುಡಿಯುತ್ತಾ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ. ಇಂತಹ ಮಹಿಳೆಯರ ಬದುಕಿಗೆ ಆಧಾರವಾಗಿರುವ ಉದ್ಯೋಗವನ್ನು ಕಿತ್ತುಕೊಳ್ಳುವ ಕ್ಲಸ್ಟರ್ ಕಿಚನ್ ಸೆಂಟರ್ ವ್ಯವಸ್ಥೆ ಅಮಾನವೀಯವಾಗಿದೆ ಬಿಸಿಯೂಟ ನೌಕರರ ಕೆಲಸ ಮತ್ತು ಉದ್ಯೋಗ ಭದ್ರತೆಯನ್ನು ಉಳಿಸುವುದು, ಕ್ಲಸ್ಟರ್ ಕಿಚನ್ ಸೆಂಟರ್ ಪ್ರಾರಂಭಿಸುವ ಪ್ರಸ್ತಾವ ಕೈಬಿಡುವುದು ಹಾಗೂ ಅಡುಗೆ ನೌಕರರ ಹಿತ ಕಾಪಾಡುವಂತೆ ಒತ್ತಾಯಿಸಿ ನವೆಂಬರ್ 25ರಿಂದ ಬೆಂಗಳೂರಿನಲ್ಲಿ ಅನಿರ್ದಿಷ್ಟಾವಧಿ ಹೋರಾಟ ನಡೆಸಲಾಗುತ್ತಿದೆ. ಅಂದಿನಿAದ ರಾಜ್ಯದ ಬಿಸಿಯೂಟ ಅಡುಗೆ ನೌಕರರು ಕೆಲಸ ಸ್ಥಗಿತಗೊಳಿಸಿ ಹೋರಾಟದಲ್ಲಿ ಭಾಗವಹಿಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರ ಸಂಘದ ಅಧ್ಯಕ್ಷರಾದ ಪುಷ್ಪಾ ಮಜಗೆ, ಹಾಗೂ ಪ್ರಧಾನ ಕಾರ್ಯದರ್ಶಿ ರೇಖಾ ಹಮೀಲಪೂರಕರ್ ಹಾಗೂ ಖಜಾಂಚಿ ರುಕ್ಮಿಣಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
📲Get App