🔥 TRENDING Three Arrested in Dewas for Using Fake... Baba Phoolnath Fair Kicks Off in Bhape... સાબરકાંઠા જિલ્લામાં સજા વોરંટ ધરાવતા મ... ರಾಯಚೂರಿನಲ್ಲಿ ಅಕ್ರಮ ಸೇಂದಿ ಮಾರಾಟ - ಪಶ್ಚಿ... ಮಾನ್ವಿಯಲ್ಲಿ ಬಿಜೆಪಿ ಮಂಡಲದಿಂದ ಭಾರೀ ಪ್ರತಿ... ન્યાયની માંગ સાથે સમસ્ત કચ્છ કોળી સમા...
25 Nov 2026•
ગુજરાતી मराठी ਪੰਜਾਬੀ বাংলা

ಸಂಘಟನಾ ಸೃಜನ್ ಅಭಿಯಾನ-2 - ಕೊಪ್ಪಳದಲ್ಲಿ ಬ್ಲಾಕ್ ಅಧ್ಯಕ್ಷರ ಆಯ್ಕೆ ಸಂಬಂಧ ಸಭೆ - ಸಚಿವ ಎನ್ ಎಸ್ ಬೋಸರಾಜ ಭಾಗಿ - ತಳಮಟ್ಟದಿಂದ ಪಕ್ಷ ಬಲಪಡಿಸಲು ಕರೆ

✍️ Reporter: Ningappa 🗓 25 Nov 2026, 10:45 PM 👁 23
Share: 💬 WhatsApp 📘 Facebook 𝕏 Post

ಸಂಘಟನಾ ಸೃಜನ್ ಅಭಿಯಾನ-2 - ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಸಭೆ - ಸಚಿವ ಎನ್ ಎಸ್ ಬೋಸರಾಜ ಭಾಗಿ - ಕೊಪ್ಪಳ ನಗರ, ಗ್ರಾಮೀಣ, ಯಲಬುರ್ಗಾ ಬ್ಲಾಕ್ ಅಧ್ಯಕ್ಷರ ಆಯ್ಕೆ ಸಂಬಂಧ ಮುಖಂಡರ ಅಭಿಪ್ರಾಯ ಸಂಗ್ರಹ - ಕೆಪಿಸಿಸಿ ವೀಕ್ಷಕಿ ರಾಜೇಶ್ವರಿ ಪಾಟೀಲ್ ಭಾಗಿ

ಕೊಪ್ಪಳ: ಕಾಂಗ್ರೆಸ್ ಪಕ್ಷದ ಸಂಘಟನೆಯನ್ನು ತಳಮಟ್ಟದಿಂದ ಬಲಪಡಿಸಿ, ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಪಕ್ಷದ ಚಟುವಟಿಕೆಗಳಿಗೆ ಮತ್ತಷ್ಟು ವೇಗ ನೀಡುವ ಉದ್ದೇಶದಿಂದ ಕೆಪಿಸಿಸಿ ವತಿಯಿಂದ ಹಮ್ಮಿಕೊಳ್ಳಲಾಗಿರುವ ಸಂಘಟನಾ ಸೃಜನ್ ಅಭಿಯಾನ-2 ರ ಅಂಗವಾಗಿ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ನಡೆದ ಸಭೆಯಲ್ಲಿ ಸಚಿವ ಎನ್ ಎಸ್ ಬೋಸರಾಜ ಅವರು ಭಾಗವಹಿಸಿ ಮಾತನಾಡಿದರು.

ಕೆಪಿಸಿಸಿ ವೀಕ್ಷಕರಾಗಿ ಆಗಮಿಸಿದ್ದ ಹಾವೇರಿಯ ರಾಜೇಶ್ವರಿ ಪಾಟೀಲ್ ಅವರೊಂದಿಗೆ ಕೊಪ್ಪಳ ನಗರ, ಕೊಪ್ಪಳ ಗ್ರಾಮೀಣ ಹಾಗೂ ಯಲಬುರ್ಗಾ ವಿಧಾನಸಭಾ ಕ್ಷೇತ್ರಗಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಸಂಬಂಧ ಜಿಲ್ಲಾ ಹಾಗೂ ಕ್ಷೇತ್ರ ಮಟ್ಟದ ಪಕ್ಷದ ಮುಖಂಡರ ಅಭಿಪ್ರಾಯಗಳನ್ನು ಸಂಗ್ರಹಿಸಲಾಯಿತು.

ಪಕ್ಷದ ಬೆಳವಣಿಗೆ ಮತ್ತು ಸಂಘಟನೆಯನ್ನು ಬಲಪಡಿಸುವಲ್ಲಿ ಪ್ರತಿಯೊಬ್ಬ ಮುಖಂಡರು ಹಾಗೂ ಕಾರ್ಯಕರ್ತರ ಜವಾಬ್ದಾರಿ ಮಹತ್ವದ್ದಾಗಿದೆ. ಬ್ಲಾಕ್ ಮಟ್ಟದಲ್ಲಿ ಸಮರ್ಥ ನಾಯಕತ್ವವನ್ನು ರೂಪಿಸುವುದರೊಂದಿಗೆ ಗ್ರಾಮ ಹಾಗೂ ಬೂತ್ ಮಟ್ಟದಲ್ಲಿ ಪಕ್ಷದ ಸಂಘಟನೆಯನ್ನು ಬಲಪಡಿಸಲು ಆದ್ಯತೆ ನೀಡಬೇಕು ಎಂದು ತಿಳಿಸಲಾಯಿತು.

ಕಾಂಗ್ರೆಸ್ ಪಕ್ಷದ ತತ್ವ, ಸಿದ್ಧಾಂತ ಹಾಗೂ ಜನಪರ ನಿಲುವುಗಳನ್ನು ಸಮಾಜದ ಎಲ್ಲ ವರ್ಗಗಳಿಗೂ ತಲುಪಿಸುವುದು, ಮುಖಂಡರು ಮತ್ತು ಕಾರ್ಯಕರ್ತರ ನಡುವೆ ಸಮನ್ವಯ ಸಾಧಿಸುವುದು, ಹೊಸ ಕಾರ್ಯಕರ್ತರನ್ನು ಪಕ್ಷದೊಂದಿಗೆ ಬೆಸೆಯುವುದು ಹಾಗೂ ಯುವಜನರು ಮತ್ತು ಮಹಿಳೆಯರಿಗೆ ಸಂಘಟನೆಯಲ್ಲಿ ಹೆಚ್ಚಿನ ಅವಕಾಶ ಕಲ್ಪಿಸುವುದು ಅಗತ್ಯವಾಗಿದೆ.

ಅಲ್ಲದೆ, ರಾಜ್ಯ ಸರ್ಕಾರದ ಜನಪರ ಯೋಜನೆಗಳು ಮತ್ತು ಅಭಿವೃದ್ಧಿ ಕಾರ್ಯಗಳ ಕುರಿತು ಜನರಲ್ಲಿ ಅರಿವು ಮೂಡಿಸುವುದರ ಜತೆಗೆ, ಜನರೊಂದಿಗೆ ನೇರ ಸಂಪರ್ಕ ಬೆಳೆಸಿ ಅವರ ಸಮಸ್ಯೆಗಳನ್ನು ಆಲಿಸುವ ಮೂಲಕ ಪಕ್ಷದ ಮೇಲಿನ ವಿಶ್ವಾಸವನ್ನು ಮತ್ತಷ್ಟು ಗಟ್ಟಿಗೊಳಿಸಬೇಕು. ಸಂಘಟನಾ ಸೃಜನ್ ಅಭಿಯಾನವನ್ನು ನಿರಂತರ ಸಂಘಟನಾ ಪ್ರಕ್ರಿಯೆಯಾಗಿ ಮುನ್ನಡೆಸುವಂತೆ ಮುಖಂಡರು ಹಾಗೂ ಕಾರ್ಯಕರ್ತರಿಗೆ ಕರೆ ನೀಡಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ನಾಗಪ್ಪ, ರಾಘವೇಂದ್ರ ಇಟ್ನಾಳ, ಬೂಡಾ ಅಧ್ಯಕ್ಷ ಆಂಜನೇಯ, ಮಾಜಿ ಶಾಸಕರಾದ ಸಂಗಣ್ಣ ಕರಡಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ, ಗಿರಿಜಾ ಸಂಗಟಿ, ಕೃಷ್ಣ ಇಟಗಿ, ಸುರೇಶ್ ರೆಡ್ಡಿ, ಮಲ್ಲಿಕಾರ್ಜುನ ನಂದಾಪುರ, ರಾಜೇಶ್ವರಿ ಪಾಟೀಲ್, ಕೆ.ಎಂ. ಸೈಯದ್, ಕೃಷ್ಣ ಇಟ್ಟಂಗಿ, ಸುನೀತಾ, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
📲Get App