ತನ್ನದೇ ಬದುಕಲ್ಲಿ 10 ಲಕ್ಷ ಸಾಲವಿದ್ದರೂ ಹೋರಾಟನಿರತ ಆಶಾ ಕಾರ್ಯಕರ್ತೆಯರ ಹಸಿವು ನೀಗಿಸಿದ ಪೌರಕಾರ್ಮಿಕ ತಾಯಿ - ಫ್ರೀಡಂಪಾರ್ಕ್ ನಲ್ಲಿ ಮಾನವೀಯತೆ ಮೆರೆದ ಪುಷ್ಪಾ
ತನ್ನದೇ ಬದುಕಲ್ಲಿ 10 ಲಕ್ಷ ಸಾಲವಿದ್ದರೂ ಹೋರಾಟನಿರತ ಆಶಾ ಕಾರ್ಯಕರ್ತೆಯರ ಹಸಿವು ನೀಗಿಸಿದ ಪೌರಕಾರ್ಮಿಕ ತಾಯಿ - ಫ್ರೀಡಂಪಾರ್ಕ್ ನಲ್ಲಿ 8ನೇ ದಿನದ ಧರಣಿಗೆ ನೀರು, ಬ್ರೆಡ್, ಬಿಸ್ಕೆಟ್, ಸ್ಯಾನಿಟರಿ ಪ್ಯಾಡ್ ನೀಡಿದ ಪುಷ್ಪಾ - 3,000 ರೂ. ಮುಂಗಡ ನೀಡಿ ಊಟದ ವ್ಯವಸ್ಥೆಗೆ ಭರವಸೆ
ಬೆಂಗಳೂರು: ಬಡವರ ಮನೆ ಬರಿದಾಗಿರಬಹುದು, ಆದರೆ ಅವರ ಮನಸ್ಸು ಎಂದಿಗೂ ಬರಿದಲ್ಲ ಎಂಬ ಮಾತಿಗೆ ಸಾಕ್ಷಿಯಾಗುವಂತಹ ಹೃದಯಸ್ಪರ್ಶಿ ಘಟನೆಯೊಂದು ರಾಜಧಾನಿಯ ಫ್ರೀಡಂಪಾರ್ಕ್ ನಲ್ಲಿ ನಡೆದಿದೆ. ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಎಂಟನೇ ದಿನವೂ ಪ್ರತಿಭಟನೆ ನಡೆಸುತ್ತಿರುವ ಸಾವಿರಾರು ಆಶಾ ಕಾರ್ಯಕರ್ತೆಯರ ನೆರವಿಗೆ ಪೌರಕಾರ್ಮಿಕ ಮಹಿಳೆಯೊಬ್ಬರು ಧಾವಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ನಗರ ಪಾಲಿಕೆಯಲ್ಲಿ ಕಸ ಗುಡಿಸುವ ಕಾಯಕ ಮಾಡುತ್ತಿರುವ ಪುಷ್ಪಾ ಎಂಬುವವರೇ ಈ ನಿಸ್ವಾರ್ಥ ತಾಯಿ. ಇಬ್ಬರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುತ್ತಿರುವ ಇವರ ತಲೆಯ ಮೇಲೆ ಬರೋಬ್ಬರಿ 10 ಲಕ್ಷ ರೂಪಾಯಿ ಸಾಲದ ಹೊರೆಯಿದೆ. ಇಷ್ಟೆಲ್ಲಾ ಆರ್ಥಿಕ ಸಂಕಷ್ಟಗಳ ನಡುವೆಯೂ, ಆಶಾ ಕಾರ್ಯಕರ್ತೆಯರು ಹಕ್ಕುಗಳಿಗಾಗಿ ಫ್ರೀಡಂಪಾರ್ಕ್ ನಲ್ಲಿ ಅಹೋರಾತ್ರಿ ಧರಣಿ ಕುಳಿತಿರುವುದನ್ನು ಇನ್ ಸ್ಟಾಗ್ರಾಮ್ ನಲ್ಲಿ ಗಮನಿಸಿದ್ದ ಪುಷ್ಪಾ ಅವರ ಮನಸ್ಸು ಮರುಗಿದೆ.
ಸಂಬಳ ಬಂದ ತಕ್ಷಣ ನೆರವಿಗೆ ಧಾವಿಸಿದ ತಾಯಿ:
ಕಳೆದ ಎರಡು ದಿನಗಳಿಂದ ಪ್ರತಿಭಟನಾ ಸ್ಥಳಕ್ಕೆ ಬಂದು ಹೋಗುತ್ತಿದ್ದ ಪುಷ್ಪಾ ಅವರ ಕೈಯಲ್ಲಿ ಆಗ ಹಣವಿರಲಿಲ್ಲ. ಆದರೆ, ಸಂಬಳ ಕೈಸೇರಿದ ತಕ್ಷಣವೇ ಮಂಗಳವಾರ ಮತ್ತೆ ಫ್ರೀಡಂಪಾರ್ಕ್ ಗೆ ಆಗಮಿಸಿದ ಅವರು, ತಮ್ಮ ಶಕ್ತಿಯನುಸಾರ ನೀರಿನ ಬಾಟಲಿಗಳು, ಸ್ಯಾನಿಟರಿ ಪ್ಯಾಡ್ ಗಳು, ಬ್ರೆಡ್ ಹಾಗೂ ಬಿಸ್ಕೆಟ್ ಗಳನ್ನು ತಂದು ಹೋರಾಟಗಾರರಿಗೆ ಹಂಚಿದ್ದಾರೆ. ಅಷ್ಟೇ ಅಲ್ಲದೆ, ಸಮೀಪದ ಅಂಗಡಿಯೊಂದರಲ್ಲಿ ಮುಂಗಡವಾಗಿ 3,000 ರೂಪಾಯಿ ಪಾವತಿಸಿ, ಮರುದಿನ ಪ್ರತಿಭಟನಾನಿರತ ಮಹಿಳೆಯರಿಗೆ ಸಾಧ್ಯವಾದಷ್ಟು ಊಟದ ವ್ಯವಸ್ಥೆ ಮಾಡುವುದಾಗಿ ತಿಳಿಸಿ ಹೃದಯವೈಶಾಲ್ಯತೆ ಮೆರೆದಿದ್ದಾರೆ.