🔥 TRENDING Putin Announces New Nuclear Submarine... South Korean Postal Service Hit by Dat... Odisha Shivers: G. Udaygiri Plunges to... Odisha Government Investigates Financi... Cyclone Arnab Weakens Over Odisha, Ray... Amritsar Conducts Late-Night Mock Dril...
28 Nov 2026•
ગુજરાતી मराठी ਪੰਜਾਬੀ বাংলা

ಹೊಸೂರು ಸಿದ್ದಾಪೂರದಲ್ಲಿ ಕನಕದಾಸರ ಜಯಂತಿ ಸಂಭ್ರಮಕನಕದಾಸರ ಸಮಾನತೆ, ಭಕ್ತಿ ಹಾಗೂ ಸಾಹಿತ್ಯದ ಸಂದೇಶ ಸ್ಮರಣೆ

✍️ Reporter: Khaja Hussain 🗓 28 Nov 2026, 11:58 AM 👁 26
Share: 💬 WhatsApp 📘 Facebook 𝕏 Post
**ಜಾಲಹಳ್ಳಿ ಬ್ರೇಕಿಂಗ್ ನ್ಯೂಸ್**

# ಹೊಸೂರು ಸಿದ್ದಾಪೂರದಲ್ಲಿ ಕನಕದಾಸರ ಜಯಂತಿ ಸಂಭ್ರಮ

### ಕನಕದಾಸರ ಸಮಾನತೆ, ಭಕ್ತಿ ಹಾಗೂ ಸಾಹಿತ್ಯದ ಸಂದೇಶ ಸ್ಮರಣೆ

**ಜಾಲಹಳ್ಳಿ, ನ.27:** ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಹೊಸೂರು ಸಿದ್ದಾಪೂರ ಗ್ರಾಮದಲ್ಲಿ ಮಹಾನ್ ಸಂತ, ದಾಸಶ್ರೇಷ್ಠ ಭಕ್ತ ಕನಕದಾಸರ ಜಯಂತಿಯನ್ನು ಭಕ್ತಿಭಾವದಿಂದ ಆಚರಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪನಮನ ಅರ್ಪಿಸಲಾಯಿತು. ಬಳಿಕ ಅವರ ಜೀವನ, ಸಾಹಿತ್ಯ, ಕೀರ್ತನೆಗಳು ಹಾಗೂ ಸಮಾಜಕ್ಕೆ ಸಾರಿದ ಸಮಾನತೆ, ಭಕ್ತಿ ಮತ್ತು ಮಾನವೀಯ ಮೌಲ್ಯಗಳ ಸಂದೇಶವನ್ನು ಸ್ಮರಿಸಲಾಯಿತು.

ಈ ಸಂದರ್ಭದಲ್ಲಿ ಚಂದಪ್ಪ ಬುದ್ದಿನ್ನಿ, ಸಂಜೀವಣ್ಣ, ಧಳಪತಿ ಶಿವಪ್ಪ ದೊಡ್ಡಮನಿ, ರಂಗಪ್ಪ ಕಾವಲಿ, ರಂಗಪ್ಪ ಜೋಳದಡಗಿ, ತಿಮ್ಮಣ್ಣ ಬಂಕಲದೊಡ್ಡಿ, ಕೆಂಚಪ್ಪ ಮಂಡಲಗುಡ್ಡ, ಬಸವರಾಜ ದೊಡ್ಡಮನಿ, ಜಯಪ್ಪ ಬೆಲ್ಲದ, ಅಮರಪ್ಪ ದೊಡ್ಡಮನಿ, ಸಿದ್ದಪ್ಪ ಚಂದ್ಲಾಪುರು, ಶಿವಪ್ಪ ದೊಡ್ಡಮನಿ, ಸೋಮನಾಥ ಜಲ್ಲಿ, ಸಿದ್ದಣ್ಣ ಚಿಂಚೋಡಿ, ಶರಣಪ್ಪ ಬೆಲ್ಲದ, ಚಂದ್ರಮ ಸೇರಿದಂತೆ ಗ್ರಾಮದ ಮುಖಂಡರು, ಹಿರಿಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

**ವರದಿ: ಖಾಜಾ ಹುಸೇನ್ ಬಾಬಾ, ಜಾಲಹಳ್ಳಿ**
📲Get App