🔥 TRENDING NIA launches fresh probe into Myanmar‑... Meghalaya CM Equips Garo Hills Leaders... ED Raids Assam, Meghalaya Businesses i... Meghalaya CM: Tech and Data Crucial fo... BJP Candidate Alleges Post-Poll Vandal... Tripura Seeks 2,500 Nurses for Healthc...
28 Nov 2026•
ગુજરાતી मराठी ਪੰਜਾਬੀ বাংলা

ರಾಜನಹಳ್ಳಿ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠ ಟ್ರಸ್ಟ್ (ರಿ.) ಶಾಖಾ ಮಠದ ವತಿಯಿಂದ ನೂತನ ಶಾಖಾ ಮಠ, ವಸತಿ ನಿಲಯ, ಸಮುದಾಯ ಭವನ ಹಾಗೂ ಶೈಕ್ಷಣಿಕ ಸೌಲಭ್ಯಗಳ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ

✍️ Reporter: Ningappa 🗓 28 Nov 2026, 05:10 PM 👁 15
Share: 💬 WhatsApp 📘 Facebook 𝕏 Post
ಸುರಪುರ: ತಾಲೂಕಿನ ಬಂಡೊಳ್ಳಿ ಗ್ರಾಮದಲ್ಲಿ ರಾಜನಹಳ್ಳಿ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠ ಟ್ರಸ್ಟ್ (ರಿ.) ಶಾಖಾ ಮಠದ ವತಿಯಿಂದ ನೂತನ ಶಾಖಾ ಮಠ, ವಸತಿ ನಿಲಯ, ಸಮುದಾಯ ಭವನ ಹಾಗೂ ಶೈಕ್ಷಣಿಕ ಸೌಲಭ್ಯಗಳ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡುವ ಅಂಗವಾಗಿ ಶ್ರೀ ಮಠದ ಪರಮಪೂಜ್ಯ ಶ್ರೀ ಪ್ರಸನ್ನಾನಂದ ಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ ನಡೆದ ಅಡಿಗಲ್ಲು ಸಮಾರಂಭದಲ್ಲಿ ಮಾನ್ಯ ಶ್ರೀ ಸಚಿವ ಸತೀಶ್ ಜಾರಕಿಹೋಳಿ ಅವರು ಭಾಗವಹಿಸಿದರು.

ಈ ಸಂದರ್ಭದಲ್ಲಿ ಶ್ರೀ ವರನಾಂದೇಶ್ವರ ಸ್ವಾಮೀಜಿಯವರು, ಸಚಿವರಾದ ಶ್ರೀ ಟಿ. ರಘುಮೂರ್ತಿ ಅವರು,ಸುರಪುರ ಕ್ಷೇತ್ರದ ಶಾಸಕರಾದ ಶ್ರೀ ರಾಜಾ ವೇಣುಗೋಪಾಲ ನಾಯಕ‌ ಅವರು,
ಶಾಸಕರಾದ ಶ್ರೀ ದೇವೇಂದ್ರಪ್ಪ ಅವರು, ಶ್ರೀಮತಿ ಅನ್ನಪೂರ್ಣ ಈ. ತುಕಾರಾಂ ಅವರು, ಶ್ರೀ ಚಿಕ್ಕ ಮಾಧು ಅವರು, ಶ್ರೀ ಶರಣೇಗೌಡ ಬಯ್ಯಾಪುರ ಅವರು, ಮಾಜಿ ಸಂಸದರಾದ ಶ್ರೀ ಬಿ.ವಿ. ನಾಯಕ ಅವರು, ಮಾಜಿ ಶಾಸಕರಾದ ಶ್ರೀ ರಾಜುಗೌಡ ಅವರು, ಶ್ರೀ ಗಂಗಾಧರ ನಾಯಕ ಅವರು, ಶ್ರೀ ಪ್ರತಾಪಗೌಡ ಪಾಟೀಲ್ ಅವರು ಸೇರಿದಂತೆ ಸಮಾಜದ ಗಣ್ಯರು, ಮುಖಂಡರು ಹಾಗೂ ಅಪಾರ ಸಂಖ್ಯೆಯಲ್ಲಿ ಸಾರ್ವಜನಿಕರು ಉಪಸ್ಥಿತರಿದ್ದರು.
📲Get App