🔥 TRENDING Police Arrest Main Accused in Rs 2.24 ... Gold prices slip as buyers await deepe... Yemen and India Strengthen Ties at IOR... શિનોર ગામની નવી નગરી વસાહતમાં પાણી બોર... Delhi Metro Users Express Growing Safe... गोपालगंज में पुरानी पुल की घेराबंदी, व...
27 Nov 2026•
ગુજરાતી मराठी ਪੰਜਾਬੀ বাংলা
Politics

ಕಲ್ಯಾಣ ರಾಜ್ಯ ಪ್ರಜಾಶಕ್ತಿ ಸಮಿತಿಯ ಬೀದರ್ ಜಿಲ್ಲಾ ಪದಾಧಿಕಾರಿಗಳ ನೇಮಕ

✍️ Reporter: Basavaraj pujari 🗓 27 Nov 2026, 09:51 AM 👁 12
Share: 💬 WhatsApp 📘 Facebook 𝕏 Post

ಜಿಲ್ಲಾಧ್ಯಕ್ಷರಾಗಿ ವಿಜಯಕುಮಾರ ನಾಗೂರೆ, ಉಪಾಧ್ಯಕ್ಷರಾಗಿ ಸ್ವಾಮಿದಾಸ ಹೆಡಗಾಪೂರೆ ಹಾಗೂ ಸುನಿಲಕುಮಾರ ಬಸಂತಪೂರೆ ನೇಮಕ ಬೀದರ್: ಕಲ್ಯಾಣ ರಾಜ್ಯ ಪ್ರಜಾಶಕ್ತಿ ಸಮಿತಿ (ರಿ.)ಯ ಕಾರ್ಯಕಾರಿ ಸಮಿತಿ ಸಭೆಯ ನಿರ್ಣಯದಂತೆ, ಸಂಘಟ

ಕಲ್ಯಾಣ ರಾಜ್ಯ ಪ್ರಜಾಶಕ್ತಿ ಸಮಿತಿಯ ಬೀದರ್ ಜಿಲ್ಲಾ ಪದಾಧಿಕಾರಿಗಳ ನೇಮಕ
ಜಿಲ್ಲಾಧ್ಯಕ್ಷರಾಗಿ ವಿಜಯಕುಮಾರ ನಾಗೂರೆ, ಉಪಾಧ್ಯಕ್ಷರಾಗಿ ಸ್ವಾಮಿದಾಸ ಹೆಡಗಾಪೂರೆ ಹಾಗೂ ಸುನಿಲಕುಮಾರ ಬಸಂತಪೂರೆ ನೇಮಕ

ಬೀದರ್: ಕಲ್ಯಾಣ ರಾಜ್ಯ ಪ್ರಜಾಶಕ್ತಿ ಸಮಿತಿ (ರಿ.)ಯ ಕಾರ್ಯಕಾರಿ ಸಮಿತಿ ಸಭೆಯ ನಿರ್ಣಯದಂತೆ, ಸಂಘಟನೆಯಲ್ಲಿ ಸಲ್ಲಿಸಿರುವ ಸೇವೆ ಹಾಗೂ ಸಾಮಾಜಿಕ ಕಾರ್ಯಗಳನ್ನು ಪರಿಗಣಿಸಿ ಬೀದರ್ ಜಿಲ್ಲಾ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.

ವಿಜಯಕುಮಾರ ನಾಗೂರೆ ಅವರನ್ನು ಬೀದರ್ ಜಿಲ್ಲಾ ಅಧ್ಯಕ್ಷರನ್ನಾಗಿ, ಸ್ವಾಮಿದಾಸ ಹೆಡಗಾಪೂರೆ ಹಾಗೂ ಸುನಿಲಕುಮಾರ ಬಸಂತಪೂರೆ ಅವರನ್ನು ಜಿಲ್ಲಾ ಉಪಾಧ್ಯಕ್ಷರನ್ನಾಗಿ ಮತ್ತು ಮಹೇಶಕುಮಾರ ಸೋರಳ್ಳಿಕರ ಅವರನ್ನು ಜಿಲ್ಲಾ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ.

ಈ ನೇಮಕಾತಿಗಳು ತಕ್ಷಣದಿಂದ ಜಾರಿಗೆ ಬರಲಿದ್ದು, ಸಮಿತಿಯ ನಿಯಮಾವಳಿಗಳಿಗೆ ಬದ್ಧರಾಗಿ ಜಿಲ್ಲೆಯಲ್ಲಿ ಸಂಘಟನೆಯನ್ನು ಬಲಪಡಿಸುವುದು ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ಜವಾಬ್ದಾರಿಯುತವಾಗಿ ತೊಡಗಿಸಿಕೊಳ್ಳುವಂತೆ ನೂತನ ಪದಾಧಿಕಾರಿಗಳಿಗೆ ಸೂಚಿಸಲಾಗಿದೆ.

ನೇಮಕಾತಿ ಸಭೆಯಲ್ಲಿ ಹಿರಿಯ ಕಾನೂನು ಸಲಹೆಗಾರ ಅಶೋಕ ಗೋಖಲೆ, ಸಹ ಸಲಹೆಗಾರ ಸಂತೋಷ ಟೈಗರ್, ಸಂಘಟನಾ ಕಾರ್ಯದರ್ಶಿ ರಾಜಕುಮಾರ ಲಕ್ಷ್ಮಿ ದೊಡ್ಡಿ, ಸುನಿಲ ಕನ್ನಡಿಕರ್, ಸುನಿಲಕುಮಾರ, ಅರುಣಕುಮಾರ ರತ್ನಾಪೂರೆ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಶಾದ್ರಕ ಪಿ. ಸಿತ್ತಳಗೇರಾ ಅವರು ಪತ್ರಿಕಾ ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿದ್ದಾರೆ.
📲Get App