🔥 TRENDING वाराणसी के रामनगर पुलिस ने 01 वारंटी क... African Banks Embrace AI Despite Legac... PU ਵਿਚ ਵਿਦਿਆਰਥੀ ਨੇ ਕੀਤੀ ਖ਼ੁਦਕੁਸ਼ੀ Himachal Pradesh Sets Raw Water Price... Delhi Opens Former CM Kejriwal's Resid... Meghalaya High Court orders DGP to sus...
27 Nov 2026•
ગુજરાતી मराठी ਪੰਜਾਬੀ বাংলা
National

ನರಸಿಂಹ ಝರಣಿ ದೇವಸ್ಥಾನದ ಸರ್ಕಾರಿ ಜಮೀನು ಕಬಳಿಕೆ ಆರೋಪ: ಕಾರ್ಯನಿರ್ವಾಹಕ ಅಧಿಕಾರಿಯ ವಿರುದ್ಧ ಕ್ರಮಕ್ಕೆ ಆಗ್ರಹ

✍️ Reporter: Basavaraj pujari 🗓 27 Nov 2026, 09:52 AM 👁 22
Share: 💬 WhatsApp 📘 Facebook 𝕏 Post

ಖಾಸಗಿ ವ್ಯಕ್ತಿಗಳೊಂದಿಗೆ ಸೇರಿ ಬೇನಾಮಿ ಆಸ್ತಿ ಸೃಷ್ಟಿ, ಟೆಂಡರ್ ವಿಳಂಬ ಹಾಗೂ ಕಾಮಗಾರಿಗಳಲ್ಲಿ ಅವ್ಯವಹಾರ ಆರೋಪ ಬೀದರ್: ನಗರದ ಐತಿಹಾಸಿಕ ಶ್ರೀ ನರಸಿಂಹ ಝರಣಿ ದೇವಸ್ಥಾನದ ಸರ್ಕಾರಿ ಜಮೀನಿನಲ್ಲಿ ಖಾಸಗಿ ವ್ಯಕ್ತಿಗಳೊಂದಿ

ನರಸಿಂಹ ಝರಣಿ ದೇವಸ್ಥಾನದ ಸರ್ಕಾರಿ ಜಮೀನು ಕಬಳಿಕೆ ಆರೋಪ: ಕಾರ್ಯನಿರ್ವಾಹಕ ಅಧಿಕಾರಿಯ ವಿರುದ್ಧ ಕ್ರಮಕ್ಕೆ ಆಗ್ರಹ
ಖಾಸಗಿ ವ್ಯಕ್ತಿಗಳೊಂದಿಗೆ ಸೇರಿ ಬೇನಾಮಿ ಆಸ್ತಿ ಸೃಷ್ಟಿ, ಟೆಂಡರ್ ವಿಳಂಬ ಹಾಗೂ ಕಾಮಗಾರಿಗಳಲ್ಲಿ ಅವ್ಯವಹಾರ ಆರೋಪ

ಬೀದರ್: ನಗರದ ಐತಿಹಾಸಿಕ ಶ್ರೀ ನರಸಿಂಹ ಝರಣಿ ದೇವಸ್ಥಾನದ ಸರ್ಕಾರಿ ಜಮೀನಿನಲ್ಲಿ ಖಾಸಗಿ ವ್ಯಕ್ತಿಗಳೊಂದಿಗೆ ಸೇರಿ ಕಬಳಿಕೆ ಮಾಡಿರುವುದು ಹಾಗೂ ಬೇನಾಮಿ ಆಸ್ತಿ ಸೃಷ್ಟಿಯಲ್ಲಿ ಪಾಲುದಾರಿಕೆ ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಅನಂತ ಕುಲಕರ್ಣಿ ಅವರ ವಿರುದ್ಧ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಶ್ರೀ ನರಸಿಂಹ ಸ್ವಾಮಿ ದೇವಸ್ಥಾನ ಭೂಸಂರಕ್ಷಣಾ ಸಮಿತಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ನವೆಂಬರ್ 26ರಂದು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ, ಶ್ರೀ ನರಸಿಂಹ ಝರಣಿ ದೇವಸ್ಥಾನದ ಹೆಸರಿನಲ್ಲಿ ಸರ್ವೆ ನಂ. 82ರಲ್ಲಿ 114 ಎಕರೆ ಸರ್ಕಾರಿ ಜಮೀನು ಇದೆ. ಧಾರ್ಮಿಕ ದತ್ತಿ ಇಲಾಖೆಯ ಅಧೀನದಲ್ಲಿರುವ ದೇವಸ್ಥಾನದಲ್ಲಿ ಅನಂತ ಕುಲಕರ್ಣಿ ಅವರು ಕಳೆದ ಎಂಟು ವರ್ಷಗಳಿಂದ ಒಂದೇ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈ ಅವಧಿಯಲ್ಲಿ ಹಲವು ಅವ್ಯವಹಾರಗಳಲ್ಲಿ ಭಾಗಿಯಾಗಿದ್ದಾರೆ ಎಂದು ಸಮಿತಿ ಆರೋಪಿಸಲಾಗಿದೆ.

ಸರ್ಕಾರಿ ಜಮೀನಿನಲ್ಲಿ ಕೆಲ ಖಾಸಗಿ ವ್ಯಕ್ತಿಗಳೊಂದಿಗೆ ಸೇರಿ ಬೇನಾಮಿ ಆಸ್ತಿ ಸೃಷ್ಟಿಸಿರುವುದಲ್ಲದೆ, ನಕಲಿ ದಾಖಲೆಗಳನ್ನು ಸೃಷ್ಟಿಸಿ ಜಮೀನು ಕಬಳಿಸಿರುವ ಆರೋಪವೂ ಇದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ದೇವಸ್ಥಾನದ ಆವರಣದಲ್ಲಿರುವ ಅಂಗಡಿಗಳನ್ನು ನಿಯಮಾನುಸಾರ ಟೆಂಡರ್ ಮೂಲಕ ಹಂಚಿಕೆ ಮಾಡಬೇಕಿದ್ದರೂ, ಉದ್ದೇಶಪೂರ್ವಕವಾಗಿ ಟೆಂಡರ್ ಪ್ರಕ್ರಿಯೆ ವಿಳಂಬಗೊಳಿಸಿ ಮೇಲಾಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ, ಟೆಂಡರ್ ಕರೆಯದೆ ಹಣ ಲಪಟಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಇದಲ್ಲದೆ, ದೇವಸ್ಥಾನದಲ್ಲಿ ನಡೆಯುವ ವಿವಿಧ ಕಾಮಗಾರಿಗಳಲ್ಲಿ ಕಮಿಷನ್ ಪಡೆದು ಕಳಪೆ ಕಾಮಗಾರಿಗಳಿಗೆ ಸಹಕರಿಸುತ್ತಿದ್ದಾರೆ ಎಂಬ ಆರೋಪವನ್ನೂ ಸಮಿತಿ ಮಾಡಿದ್ದಾರೆ.

ಈ ಎಲ್ಲ ಆರೋಪಗಳ ಕುರಿತು ಸಮಗ್ರ ವಿಚಾರಣೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಅನಂತ ಕುಲಕರ್ಣಿ ಅವರನ್ನು ತಕ್ಷಣ ಬೇರೆ ಸ್ಥಳಕ್ಕೆ ವರ್ಗಾವಣೆ ಮಾಡಬೇಕು ಎಂದು ಶ್ರೀ ನರಸಿಂಹ ಸ್ವಾಮಿ ದೇವಸ್ಥಾನ ಭೂಸಂರಕ್ಷಣಾ ಸಮಿತಿ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರಾದ ಮಹೇಶ ಪಲಂ, ಶಶಿ ಹೊಸಳ್ಳಿ, ಸಚಿನ್ ರಾಗಾ, ಅಕಾಶ್, ರಾಜು ಮಂಗಳಪೇಟೆ, ಬಸವರಾಜ ಪವಾರ್, ಕಾಶಿನಾಥ ಶೆಟಕಾರ, ವೀರಯ್ಯ ಸ್ವಾಮಿ, ಚನ್ನಬಸವಯ್ಯ ಸ್ವಾಮಿ, ಸುಭಾಷ್ ಮಡಿವಾಳ, ಕಿರಣ್ ಪಲಂ, ನರೇಶ್ ಗವಳಿ, ರೋಷನ್ ವರ್ಮಾ, ನಿತಿನ್, ನವೀನ್ ನವದಗಿರಿ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.
📲Get App