🔥 ट्रेंडिंग મટોડા માં ઘરમાંથી કોડેઈનવાળી કફ સિરપની... गांव हारनी खुर्द में श्री अखंड पाठ साह... कश्मीर में दर्ज हुई शून्य से कम तापमान... CineInfinity ने रामायण: डे 23, G9 गनमा... रामायण ने एक दिन की बॉक्स ऑफिस संग्रह... क्विल्ट वर्कर से एआईसीसी सचिव: योगेंद्...
26 नव. 2026•
ગુજરાતી मराठी ਪੰਜਾਬੀ বাংলা

ಸಂವಿಧಾನವೇ ನಮ್ಮೆಲ್ಲರ ರಕ್ಷಣಾ ಕವಚ, ಸಂವಿಧಾನದ ಮೌಲ್ಯಗಳನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. - ರಂಗಣ್ಣ ಕೊಲ್ಕಾರ್

✍️ रिपोर्टर: Ningappa 🗓 26 नव. 2026, 01:26 PM 👁 25
शेयर करें: 💬 WhatsApp 📘 Facebook 𝕏 Post
ದೇವದುರ್ಗ: 'ಸಂವಿಧಾನವೇ ನಮ್ಮೆಲ್ಲರ ರಕ್ಷಣಾ ಕವಚ, ಸಂವಿಧಾನದ ಮೌಲ್ಯಗಳನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ' ಎಂದು ಮಾಜಿ ಗ್ರಾ.ಪಂ ಅಧ್ಯಕ್ಷ ರಂಗಣ್ಣ ಕೊಲ್ಕಾರ್ ಹೇಳಿದರು.

ಅವರಿಂದು ಜಾಲಹಳ್ಳಿಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಕಾಲಾರ್ಪಣೆ ಮಾಡಿ ಮಾತನಾಡಿದ ಅವರು, ರಾಜ ಪ್ರಭುತ್ವಕ್ಕೆ ತಿಲಾಂಜಲಿ ನೀಡಿ ಪ್ರಜಾಪ್ರಭುತ್ವ ಎತ್ತಿ ಹಿಡಿದ ದಿನವಾಗಿದೆ. ಭಾರತ ಸಂವಿಧಾನವನ್ನು ಸಂವಿಧಾನ ಸಭೆಯು ಅಂಗೀಕರಿಸಿದ ದಿನವಾದ ನವೆಂಬರ್ 26 ರಂದು ದೇಶಾದ್ಯಂತ ಸಂವಿಧಾನ ದಿನವನ್ನಾಗಿ ಆಚರಿಸಲಾಗುತ್ತಿದೆ. ಸಂವಿಧಾನವು 1949ರ ನವೆಂಬರ್ 26 ರಂದು ಅಂಗೀಕಾರಗೊಂಡು,1950ರ ಜನವರಿ 26 ರಂದು ಜಾರಿಗೆ ಬಂದಿತ್ತು. ಡಾ. ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದ ಸಂವಿಧಾನ ರಚನಾ ಸಮಿತಿಯ ಕಾರ್ಯವನ್ನು ಸ್ಮರಿಸುವ ಸುದಿನ ಇದಾಗಿದೆ ಎಂದರು.

ಮುಖಂಡರಾದ ವೆಂಕನಗೌಡ ವಕೀಲರು,ಭೀಮಣ್ಣ ಗುಮೇದಾರ್,ಸಾಬಣ್ಣ ಕಮ್ಮಲದಿನ್ನಿ,ಚನ್ನಪ್ಪ ಸೌದ್ರಿ,ಮೌನೇಶ ಗಾಣದಾಳ,ಯಲ್ಲಪ್ಪ ಗಚ್ಚಿನಮನಿ,ಈಶಣ್ಣ ಕಾಟಮಳ್ಳಿ, ಏಸು ಕಮಲದಿನ್ನಿ,ಮೌನೇಶ ಚಪ್ಪಳಕಿ,ಭೀಮಣ್ಣ ವೀರಗೋಟ,ಬಾಳಪ್ಪ ಬಾವಿಮನಿ,ರಮೇಶ್ ಬಾಗೂರು,ತಮ್ಮಣ್ಣ ಹೇರುಂಡಿ, ಖುರ್ಷಿದ್ ಪಟೇಲ್,ಸುರೇಶ್ ಗೌಡ ಹಂಪರಗುಂದಿ,ರಂಗಪ್ಪ ತೊಗರಿ, ಮಕ್ತುಮ್ ಪರಾಸಿ,ಹೈದರ್ ಸಾಬ್ ಕೊಪ್ಪರ ಮುಲ್ಲಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
📲Get App