🔥 TRENDING नोहर जाने वाली सड़क पर पंचमुखी बालाजी... Shraddha Kapoor Lands in Jaipur to Kic... Ajay Devgn's Drishyam: The Conclusion... Dhanush and Aanand L Rai’s Period Acti... Bhediya 2 Confirmed: Director Amar Kau... Arunachal Governor KT Parnaik Addresse...
26 Nov 2026•
ગુજરાતી मराठी ਪੰਜਾਬੀ বাংলা

ಜಾಲಹಳ್ಳಿಯಲ್ಲಿ ಕರವೇ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ

✍️ Reporter: Khaja Hussain 🗓 26 Nov 2026, 06:39 PM 👁 18
Share: 💬 WhatsApp 📘 Facebook 𝕏 Post
**ಜಾಲಹಳ್ಳಿ ಬ್ರೇಕಿಂಗ್ ನ್ಯೂಸ್**

# ಜಾಲಹಳ್ಳಿಯಲ್ಲಿ ಕರವೇ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ

### ಕನ್ನಡ ಭಾಷೆ, ನಾಡು-ನುಡಿ, ಜಲ ಹಾಗೂ ಸರ್ಕಾರಿ ಶಾಲೆಗಳ ರಕ್ಷಣೆಗೆ ಹೋರಾಟ: ಬಸವರಾಜ್ ಗೋಪಾಲಪುರ

**ಜಾಲಹಳ್ಳಿ, ನ.26:** ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಪಟ್ಟಣದ ಗ್ರಾಮ ಪಂಚಾಯಿತಿ ಸಮೀಪದಲ್ಲಿರುವ ಕನ್ನಡ ಧ್ವಜಕಟ್ಟೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ಕನ್ನಡ ಧ್ವಜಕಟ್ಟೆಯಲ್ಲಿ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಬಳಿಕ ಕರವೇ ತಾಲೂಕು ಅಧ್ಯಕ್ಷ ಬಸವರಾಜ್ ಗೋಪಾಲಪುರ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುನಿಲ್ ಕುಮಾರ್ ಅವರು ಧ್ವಜಾರೋಹಣ ನೆರವೇರಿಸಿದರು. ಶಾಲಾ ಮಕ್ಕಳು ನಾಡಗೀತೆ ಹಾಡಿದರು.



ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕರವೇ ತಾಲೂಕು ಅಧ್ಯಕ್ಷ ಬಸವರಾಜ್ ಗೋಪಾಲಪುರ, ಕನ್ನಡ ಭಾಷೆ, ನಾಡು-ನುಡಿ ಹಾಗೂ ಜಲದ ರಕ್ಷಣೆಗಾಗಿ ಕರ್ನಾಟಕ ರಕ್ಷಣಾ ವೇದಿಕೆ ಸದಾ ಹೋರಾಟಕ್ಕೆ ಸಿದ್ಧವಿದೆ. ಯಾವುದೇ ಕಾರಣಕ್ಕೂ ಸರ್ಕಾರಿ ಶಾಲೆಗಳನ್ನು ಮುಚ್ಚಲು ಬಿಡುವುದಿಲ್ಲ. ಸರ್ಕಾರಿ ಶಾಲೆಗಳನ್ನು ಮುಚ್ಚುವ ನಿರ್ಧಾರವನ್ನು ಸರ್ಕಾರ ಕೈಬಿಡಬೇಕು ಎಂದು ಒತ್ತಾಯಿಸಿದರು.



ಗ್ರಾಮ ಪಂಚಾಯಿತಿ ಸದಸ್ಯ ಅಬ್ದುಲ್ ರಹಮಾನ್ ಖುರೇಶಿ ಮಾತನಾಡಿ, ರಾಷ್ಟ್ರಕವಿ ಕುವೆಂಪು ಅವರ “ಕನ್ನಡಕ್ಕಾಗಿ ಕೈ ಎತ್ತು, ನಿನ್ನ ಕೈ ಕಲ್ಪವೃಕ್ಷವಾಗುತ್ತದೆ” ಎಂಬ ಸಂದೇಶದಂತೆ ಕನ್ನಡ ಭಾಷೆಯ ಉಳಿವು ಮತ್ತು ಬೆಳವಣಿಗೆಗೆ ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಕರೆ ನೀಡಿದರು.



ಸಾಬಣ್ಣ ಕಮ್ಮಾಲದಿನ್ನಿ ಮಾತನಾಡಿ, ಕನ್ನಡ ನಮ್ಮ ಅಮೂಲ್ಯ ಸಂಪತ್ತಾಗಿದೆ. ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಉಳಿವಿಗಾಗಿ ಎಲ್ಲರೂ ಶ್ರಮಿಸಬೇಕು. ಕನ್ನಡ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳುವುದರ ಜತೆಗೆ ಕನ್ನಡ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಗಮನಹರಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕರವೇ ತಾಲೂಕು ಅಧ್ಯಕ್ಷ ಬಸವರಾಜ್ ಗೋಪಾಲಪುರ, ಜಾಲಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುನಿಲ್ ಕುಮಾರ್, ಶ್ರೀಧರ್ ದೇಸಾಯಿ, ಚಂದಪ್ಪ ಬುದ್ಧಿನ್ನಿ, ಸಾಬಣ್ಣ ಕಮ್ಮಾಲದಿನ್ನಿ, ಅಬ್ದುಲ್ ರಹಮಾನ್ ಖುರೇಶಿ, ಶಿವನಗೌಡ ವಂದಲಿ, ಈಶಣ್ಣ ಕಾಟಮಳ್ಳಿ, ರಂಗಪ್ಪ ತೊಗರಿ, ಶಿವರಾಜ್, ಮಹೇಂದ್ರ ಕುಮಾರ್, ಬಾಳಪ್ಪ ಭಾವಿಮನಿ, ಖಾಜಾ ಆರ್ತಿ, ರಂಗಪ್ಪ ಬಂಡಿ, ನಂದಪ್ಪ ಪಿ. ಮಡ್ಡಿ, ತಮ್ಮಣ್ಣ ಹೆರುಂಡಿ, ಬಸವ ಹೆರುಂಡಿ, ಭೀಮಣ್ಣ ನಾಯಕ, ಭೀಮರಾಯ ಮಕಾಶಿ, ಶಿವಪ್ಪ ಕರಡಿ, ಅಮರೇಶ್, ಮಲ್ಲೇಶ್ ಮಸ್ಕಿ, ಯಲ್ಲಪ್ಪ ಬಿಸಲ್, ಯಲ್ಲಪ್ಪ, ಖಾಜಾ ಹುಸೇನ್, ಸಿದ್ದಯ್ಯ ಎಡ್ಡೇರಿ, ಉಸ್ಮಾನ್ ಬೂವಾಜಿ, ಸಲ್ಮಾನ್ ಸೇರಿದಂತೆ ತಾಲೂಕು ಹಾಗೂ ಜಾಲಹಳ್ಳಿ ಕರವೇ ಪದಾಧಿಕಾರಿಗಳು ಮತ್ತು ಊರಿನ ಮುಖಂಡರು ಉಪಸ್ಥಿತರಿದ್ದರು.

**ವರದಿ: ಖಾಜಾ ಹುಸೇನ್ ಬಾಬಾ, ಜಾಲಹಳ್ಳಿ**
📲Get App