🔥 ट्रेंडिंग भारत का अंतरिक्ष अर्थव्यवस्था लक्ष्य:... न्यू हेवन ने जॉर्ज गोल्ड को 30 मिलियन... तेलंगाना हाई कोर्ट ने अपील को फिर से ज... कैलासनगर के गणेश मंदिर में कार्तिक माह... मुंबई की लक्जरी अर्थव्यवस्था तेजी से ब... भारत में महंगाई की चुनौती: क्या ब्याज...
25 नव. 2026•
ગુજરાતી मराठी ਪੰਜਾਬੀ বাংলা
देश

ಅಪಘಾತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಈಶ್ವರಸಿಂಗ್ ಠಾಕೂರ್ ಸಾಂತ್ವನ

✍️ रिपोर्टर: Basavaraj pujari 🗓 25 नव. 2026, 06:40 AM 👁 25
शेयर करें: 💬 WhatsApp 📘 Facebook 𝕏 Post

ಬೀದರ್: ನಗರದ ಶಾಹಾಪುರ ಸಮೀಪ ಇಂದು (ಮಂಗಳವಾರ) ಬೆಳಗ್ಗೆ ಬೈಕ ಮೇಲೆ ತೇರಳುತ್ತಿದ್ದ ಸಂದರ್ಭದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರೂ ಮೃತಪಟ್ಟಿದ್ದು ಬಿಜೆಪಿ ಮುಖಂಡ ಈಶ್ವರಸಿಂಗ್ ಠಾಕೂರ್ ಕುಟುಂಬಸ್ಥರನ್ನು ಭ

ಅಪಘಾತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಈಶ್ವರಸಿಂಗ್ ಠಾಕೂರ್ ಸಾಂತ್ವನ

ಬೀದರ್: ನಗರದ ಶಾಹಾಪುರ ಸಮೀಪ ಇಂದು (ಮಂಗಳವಾರ) ಬೆಳಗ್ಗೆ ಬೈಕ ಮೇಲೆ ತೇರಳುತ್ತಿದ್ದ ಸಂದರ್ಭದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರೂ ಮೃತಪಟ್ಟಿದ್ದು ಬಿಜೆಪಿ ಮುಖಂಡ ಈಶ್ವರಸಿಂಗ್ ಠಾಕೂರ್ ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.
ರಸ್ತೆ ಅಪಘಾತದಲ್ಲಿ ಸಾವು ಸಂಭವಿಸಿರುವ ಸುದ್ದಿ ತಿಳಿದ ತಕ್ಷಣ ಈಶ್ವರಸಿಂಗ್ ಠಾಕೂರ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಘಟನೆಯ ಕುರಿತು ಮಾಹಿತಿ ಪಡೆದರು. ಬಳಿಕ ಮೃತರ ಕುಟುಂಬಸ್ಥರನ್ನು ಭೇಟಿಯಾಗಿ ಅವರ ದುಃಖದಲ್ಲಿ ಭಾಗಿಯಾದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಶಾಹಾಪುರ ಸಮೀಪ ಬೆಳಗ್ಗೆ ಸಂಭವಿಸಿದ ರಸ್ತೆ ಅಪಘಾತದ ಸುದ್ದಿ ತಿಳಿದು ತೀವ್ರ ಆಘಾತವಾಯಿತು. ಅಪಘಾತದಲ್ಲಿ ಲಾಡಗೇರಿ ನಿವಾಸಿ ದುರ್ಗೇಶ್ (39) ಹಾಗೂ ಟಿ. ಮಿರ್ಜಾಪೂರ ಗ್ರಾಮದ ನಿವಾಸಿ ಅಶೋಕ ನರ್ಸಿಂಗರಾವ ವಾಘಮಾರೆÀ (37) ಎಂಬುವವರು ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿ ಮಾಹಿತಿ ಲಭಿಸಿದೆ. ಈ ಘಟನೆ ಕುರಿತು ಮಾಹಿತಿ ತಿಳಿದ ತಕ್ಷಣ ಆಸ್ಪತ್ರೆಗೆ ಆಗಮಿಸಿ, ಕುಟುಂಬಸ್ಥರನ್ನು ಭೇಟಿಯಾಗಿ ಘಟನೆ ನಡೆದಿರುವ ಬಗ್ಗೆ ವಿಚಾರಿಸಿದ್ದೇನೆ. ಕುಟುಂಬದ ಸದಸ್ಯರನ್ನು ಕಳೆದುಕೊಂಡಿರುವ ಅವರ ನೋವು ಅಪಾರವಾಗಿದೆ. ಇಂತಹ ದುಃಖದ ಸಂದರ್ಭದಲ್ಲಿ ಕುಟುಂಬಸ್ಥರಿಗೆ ಧೈರ್ಯ ತುಂಬುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.
ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಹಾಗೂ ಮೃತರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಮೃತರ ಸಂಬAಧಿಕರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
📲Get App