🔥 TRENDING शाजापुर के अकोदिया टोल पर 70 रुपये टोल... Teen Killed in Gujarat as Speeding Car... Tata AutoComp Plans ₹1,000 Crore Inves... बरेठा‑वणधर में धन्यवाद सभा: चुनावी हार... દ્રારકાથી પરત ફરી રહેલા ઝુંડાલ ગામના પ... श्री बी. आदित्य, जिला पुलिस अधीक्षक हन...
25 Nov 2026•
ગુજરાતી मराठी ਪੰਜਾਬੀ বাংলা
Education

*“ ಬೀದರ ಜಿಲ್ಲಾ ಪೊಲೀಸ್, ಅಕ್ಕ ಪಡೆ ರವರಿಂದ "ನಶಮುಕ್ತ ಬಾಲ್ಯ, ಆರೋಗ್ಯಕರ ಭವಿಷ್ಯ ಹಾಗೂ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ”*.

✍️ Reporter: Basavaraj pujari 🗓 25 Nov 2026, 12:58 PM 👁 17
Share: 💬 WhatsApp 📘 Facebook 𝕏 Post

ವಿದ್ಯಾರ್ಥಿ/ವಿದ್ಯಾರ್ಥಿನಿಯರ, ಮಹಿಳೆಯರ ಮತ್ತು ಮಕ್ಕಳ ರಕ್ಷಣೆ ಕುರಿತಾಗಿ ರಚಿತಗೊಂಡ ಅಕ್ಕ ಪಡೆಗೆ ಮಾನ್ಯ ಶ್ರೀ ಪ್ರದೀಪ್ ಗುಂಟಿ, ಐ.ಪಿ.ಎಸ್. ಪೊಲೀಸ್ ವರಿಷ್ಠಾಧಿಕಾರಿಗಳು, ಬೀದರ ಜಿಲ್ಲೆ, ಬೀದರ ರವರು ಮಹಿಳೆಯರ, ಮಕ್ಕ

*“ ಬೀದರ ಜಿಲ್ಲಾ ಪೊಲೀಸ್, ಅಕ್ಕ ಪಡೆ ರವರಿಂದ "ನಶಮುಕ್ತ ಬಾಲ್ಯ, ಆರೋಗ್ಯಕರ ಭವಿಷ್ಯ ಹಾಗೂ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ”*.

ವಿದ್ಯಾರ್ಥಿ/ವಿದ್ಯಾರ್ಥಿನಿಯರ, ಮಹಿಳೆಯರ ಮತ್ತು ಮಕ್ಕಳ ರಕ್ಷಣೆ ಕುರಿತಾಗಿ ರಚಿತಗೊಂಡ ಅಕ್ಕ ಪಡೆಗೆ ಮಾನ್ಯ ಶ್ರೀ ಪ್ರದೀಪ್ ಗುಂಟಿ, ಐ.ಪಿ.ಎಸ್. ಪೊಲೀಸ್ ವರಿಷ್ಠಾಧಿಕಾರಿಗಳು, ಬೀದರ ಜಿಲ್ಲೆ, ಬೀದರ ರವರು ಮಹಿಳೆಯರ, ಮಕ್ಕಳ ಮತ್ತು ವಿದ್ಯಾರ್ಥಿ/ವಿದ್ಯಾರ್ಥಿನಿಯರ ಸುರಕ್ಷತೆ ಕುರಿತು ವಿಶೇಷ ಮುತುವರ್ಜಿ ವಹಿಸಿ ಮಹಿಳೆಯರ, ಮಕ್ಕಳ ಸುರಕ್ಷತೆಗಾಗಿ ತಾಲೂಕವಾರು ನೇಮಕ ಮಾಡಿದ ಅಕ್ಕ ಪಡೆಗೆ task ನೀಡಿದ್ದು, ಮಾನ್ಯರ ನಿರ್ದೇಶನ ಮತ್ತು ನೇರ ಮಾರ್ಗದರ್ಶನದಂತೆ ಕಾರ್ಯ ಪ್ರವರ್ತರಾದ ಅಕ್ಕ ಪಡೆಯು ಬೀದರ ಜಿಲ್ಲೆಯನ್ನು ನಶಾ ಮುಕ್ತ ಮಾಡುವ ನಿಟ್ಟಿನಲ್ಲಿ ಬೀದರ ಅಕ್ಕ ಪಡೆಯು ಬೀದರದ ಗುರುದ್ವಾರಕ್ಕೆ ಭೇಟಿ ನೀಡಿ ದರ್ಶನಕ್ಕೆ ಆಗಮಿಸಿದ ಶಾಲಾ ಮಕ್ಕಳಿಗೆ ಅಕ್ಕಾ ಪಡೆಯ ಬಗ್ಗೆ ಪರಿಚಿಯಿಸಿ, ವಿದ್ಯಾರ್ಥಿಗಳಿಗೆ ಮಾದಕ ವಸ್ತು ಸೇವನೆಗಳಿಂದಾಗುವ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಿಸಿದರು. ಅದರಂತೆ ಮಾದಕ ವಸ್ತುಗಳು ವಿವಿಧ ರೀತಿಯಲ್ಲಿ ದೇಶದ ಆಂತರಿಕ ಭದ್ರತೆಗೆ ಧಕ್ಕೆ ತರುವ ಚಟುವಟಿಕೆಗಳಿದ್ದು, ಅದರಲ್ಲಿ ಡ್ರಗ್ಸ್ ಮಾರಾಟ ಕೂಡ ಒಂದು ಬಹು ದೊಡ್ಡ ಅಕ್ರಮ ಚಟುವಟಿಕೆಯಾಗಿದೆ. ಮಾದಕ ವ್ಯಸನ ಒಂದು ಸಮಾಜೀಕ ಪಿಡುವಾಗಿ ಪರಿವರ್ತನೆಯಾಗುತ್ತಿದ್ದು, ವಿದ್ಯಾರ್ಥಿಗಳು ಮಾದಕ ವ್ಯಸನಕ್ಕೆ ಬಹಳ ಬೇಗ ಆಕರ್ಷಣೆಗೆ ಒಳಗಾಗುತ್ತಿದ್ದಾರೆ, ಇದೊಂದು ಆತಂಕ ಕಾರಿ ವಿಷಯ. ತಮ್ಮ ಜೀವನವನ್ನು ನಾಶಪಡಿಸಿಕೊಳ್ಳುವ ಬದಲು ತಾವುಗಳು ಇದನ್ನು ಅರಿತುಕೊಂಡು ದುಶ್ಚಟಗಳಿಂದ ದೂರ ಉಳಿಯುವಂತೆ ತಿಳಿ ಹೇಳಿ ತಮ್ಮ ಕುಟುಂಬದಲ್ಲಿ ಅಕ್ಕ ಪಕ್ಕದ ಮನೆಯವರು ದುಚ್ಚಟಕ್ಕೆ ತುತ್ತಾದಲ್ಲಿ ಅವರಿಗೆ ವ್ಯಸನದಿಂದ ದೂರಿರುವಂತೆ ತಿಳಿ ಹೇಳುವಂತೆ ತಿಳಿಸಿರುತ್ತಾರೆ.

ಬೀದರ ಜಿಲ್ಲಾ ಪೊಲೀಸರು ತಮ್ಮ ಠಾಣಾ ವ್ಯಾಪ್ತಿಯನ್ನು ನಶಾ ಮುಕ್ತವನ್ನಾಗಿಸಲು ಕಾರ್ಯ ಸನ್ನದರಾದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿರವರ ಕಾರ್ಯಕ್ಕೆ ಶ್ಲಾಘಿಸಲಾಗಿದೆ.

ನಾಗರಿಕರೇ ಬೀದರ ಜಿಲ್ಲೆಯನ್ನು ಮಾದಕ ವಸ್ತು ಮುಕ್ತ ಜಿಲ್ಲೆಯನ್ನಾಗಿ ಮಾಡಲು ಬೀದರ ಜಿಲ್ಲಾ ಪೊಲೀಸ್ ತಮ್ಮೇಲ್ಲರ ಸಹಕಾರವನ್ನು ನಿರೀಕ್ಷಿಸಲಾಗಿದೆ.

ಪ್ರದೀಪ್ ಗುಂಟಿ, ಐ.ಪಿ.ಎಸ್.
ಪೊಲೀಸ್ ವರಿಷ್ಠಾಧಿಕಾರಿಗಳು,
ಬೀದರ, ಜಿಲ್ಲಾ ಬೀದರ.
📲Get App