🔥 TRENDING _कांग्रेस के यशवीर सूरा जयपुर जिला परि... Akash Chopra predicts Vaibhav could fe... BJP clinches Udaipur district council... बुंडू अनुमंडलीय अस्पताल में नए उपाधीक्... आखिर क्यों सम्राट चौधरी के सरकार से न... गुना में नगरपालिका कार्यकर्ता पर मौन ह...
25 Nov 2026•
ગુજરાતી मराठी ਪੰਜਾਬੀ বাংলা
National

*” ಬೀದರ ಜಿಲ್ಲಾ ಪೊಲೀಸ್ ಇಲಾಖೆಯ ವಿಶೇಷ ಮಹಿಳಾ ಪೊಲೀಸ್ ತಂಡ ಅಕ್ಕ ಪಡೆ ರವರಿಂದ *ಸಂಚಾರಿ ನಿಯಮಗಳ* ಬಗ್ಗೆ ಅರಿವು ಕಾರ್ಯಕ್ರಮ”*

✍️ Reporter: Basavaraj pujari 🗓 25 Nov 2026, 06:23 PM 👁 18
Share: 💬 WhatsApp 📘 Facebook 𝕏 Post

ವಿದ್ಯಾರ್ಥಿ/ವಿದ್ಯಾರ್ಥಿನಿಯರ, ಮಹಿಳೆಯರ ಮತ್ತು ಮಕ್ಕಳ ರಕ್ಷಣೆ ಕುರಿತಾಗಿ ರಚಿತಗೊಂಡ ಅಕ್ಕ ಪಡೆಗೆ ಮಾನ್ಯ ಶ್ರೀ ಪ್ರದೀಪ್ ಗುಂಟಿ, ಐ.ಪಿ.ಎಸ್. ಪೊಲೀಸ್ ವರಿಷ್ಠಾಧಿಕಾರಿಗಳು, ಬೀದರ ಜಿಲ್ಲೆ, ಬೀದರ ರವರು ಮಹಿಳೆಯರ, ಮಕ್ಕ

*” ಬೀದರ ಜಿಲ್ಲಾ ಪೊಲೀಸ್ ಇಲಾಖೆಯ ವಿಶೇಷ ಮಹಿಳಾ ಪೊಲೀಸ್ ತಂಡ ಅಕ್ಕ ಪಡೆ ರವರಿಂದ *ಸಂಚಾರಿ ನಿಯಮಗಳ* ಬಗ್ಗೆ ಅರಿವು ಕಾರ್ಯಕ್ರಮ”*

ವಿದ್ಯಾರ್ಥಿ/ವಿದ್ಯಾರ್ಥಿನಿಯರ, ಮಹಿಳೆಯರ ಮತ್ತು ಮಕ್ಕಳ ರಕ್ಷಣೆ ಕುರಿತಾಗಿ ರಚಿತಗೊಂಡ ಅಕ್ಕ ಪಡೆಗೆ ಮಾನ್ಯ ಶ್ರೀ ಪ್ರದೀಪ್ ಗುಂಟಿ, ಐ.ಪಿ.ಎಸ್. ಪೊಲೀಸ್ ವರಿಷ್ಠಾಧಿಕಾರಿಗಳು, ಬೀದರ ಜಿಲ್ಲೆ, ಬೀದರ ರವರು ಮಹಿಳೆಯರ, ಮಕ್ಕಳ ಮತ್ತು ವಿದ್ಯಾರ್ಥಿ/ವಿದ್ಯಾರ್ಥಿನಿಯರ ಸುರಕ್ಷತೆ ಕುರಿತು ವಿಶೇಷ ಮುತುವರ್ಜಿ ವಹಿಸಿ ಮಹಿಳೆಯರ, ಮಕ್ಕಳ ಸುರಕ್ಷತೆಗಾಗಿ task ನೀಡಿದ್ದು, ಮಾನ್ಯರ ನೇರ ಮಾರ್ಗದರ್ಶನ ಮತ್ತು ನಿರ್ದೇಶನದಂತೆ ಕಾರ್ಯ ಪ್ರವರ್ತರಾದ *ಬಸವಕಲ್ಯಾಣ ತಾಲೂಕಿನ* ಅಕ್ಕ ಪಡೆಯು ಬಸವಕಲ್ಯಾಣ ನಗರದಲ್ಲಿ ನೇರೆದ ಮಕ್ಕಳಿಗೆ, ಮಹಿಳೆಯರಿಗೆ ಅಕ್ಕ ಪಡೆಯ ಬಗ್ಗೆ ಪರಿಚಯಿಸಿ ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸಿ, ತಮ್ಮ ಮನೆಯಲ್ಲಿ18 ವರ್ಷದ ಒಳಗಿನ ಮಕ್ಕಳು ಇದ್ದಲ್ಲಿ ವಾಹನ ಚಲಾವಣೆ ಮಾಡಲು ಬಿಡದಿರುವುದು, ಒಂದು ವೇಳೆ 18 ವರ್ಷ ಮೇಲ್ಪಟ್ಟವರು ಇದ್ದಲ್ಲಿ ದ್ವಿಚಕ್ರ ವಾಹನ ಚಲಾಯಿಸುವಾಗ ತಪ್ಪದೇ ಹೆಲ್ಮೆಟ್ & ಕಾರ ಚಲಾಯಿಸುವಾಗ ಸೀಟ್ ಬೆಲ್ಟ್ ಧರಿಸುವುದರ ಬಗ್ಗೆ ತಮ್ಮ ಪೊಷಕರಿಗೆ ಮತ್ತು ಅಕ್ಕ ಪಕ್ಕದ ಮನೆಯವರಿಗೆ ತಿಳಿ ಹೇಳುವಂತೆ ತಿಳಿ ಹೇಳಿ, ಸಂಚಾರಿ ಸುರಕ್ಷತಾ ನಿಯಮಗಳ ಕುರಿತಾಗಿ ಅರಿವು ಮೂಡಿಸಿ, ಮಕ್ಕಳ ಸಹಾಯವಾಣಿ ಸಂ: 1098, ಸಹಾಯವಾಣಿ ಸಂ: 112, ಸೈಬರ್ ಅಪರಾಧ ಸಹಾಯವಾಣಿ ಸಂ: 1930 ಗಳ ಬಗ್ಗೆ ತಿಳಿಸಿ. ನಾವು ಸದಾ ನಿಮ್ಮ ಸುರಕ್ಷತೆಗಾಗಿ ಇದ್ದು, ನೀವು ಭಯ ಪಡುವ ಅವಶ್ಯಕತೆ ಇಲ್ಲಾ ಸದಾ ನಿಮ್ಮೊಂದಿಗೆ ಇದ್ದೆವೆಂದು ಸಕಾರಾತ್ಮಕ ಭಾವವನ್ನು ಮೂಡಿಸುವ ಮೂಲಕ ಮಹಿಳೆಯರಿಗೆ, ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ 24×7 ಸುರಕ್ಷತೆ ಒದಗಿಸುತ್ತಿರುವ ನಿಮ್ಮೇಲ್ಲರ ಮತ್ತು ಪೊಲೀಸ್ ಇಲಾಖೆಯ ಹೆಮ್ಮೆಯ "ಅಕ್ಕ ಪಡೆ" ಯ ಅಧಿಕಾರಿ, ಸಿಬ್ಬಂದಿ ರವರ ಕಾರ್ಯಕ್ಕೆ ಶ್ಲಾಘಿಸಿ ಅಭಿನಂದಿಸಲಾಗಿದೆ.

*ಪ್ರದೀಪ್ ಗುಂಟಿ, ಐ.ಪಿ.ಎಸ್*
ಪೊಲೀಸ್ ವರಿಷ್ಠಾಧಿಕಾರಿಗಳು,
ಬೀದರ ಜಿಲ್ಲೆ, ಬೀದರ.
📲Get App