ರಾಮದುರ್ಗ ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳನ್ನು ದೇವದುರ್ಗ ತಾಲೂಕಿಗೆ ಮರುಸೇರ್ಪಡೆಗೊಳಿಸಲು ಒಕ್ಕೊರಲ ಆಗ್ರಹ
**ದೇವದುರ್ಗ ಬ್ರೇಕಿಂಗ್ ನ್ಯೂಸ್**
# ರಾಮದುರ್ಗ ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳನ್ನು ದೇವದುರ್ಗ ತಾಲೂಕಿಗೆ ಮರುಸೇರ್ಪಡೆಗೊಳಿಸಲು ಒಕ್ಕೊರಲ ಆಗ್ರಹ
**ಅರಕೇರಾ, ನ.24:** ರಾಮದುರ್ಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳನ್ನು ಅರಕೇರಾ ತಾಲೂಕಿನಿಂದ ಬೇರ್ಪಡಿಸಿ ಪುನಃ ದೇವದುರ್ಗ ತಾಲೂಕಿಗೆ ಸೇರ್ಪಡೆಗೊಳಿಸುವಂತೆ ಬಹುತೇಕ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ನ.24ರಂದು ರಾಮದುರ್ಗ ಗ್ರಾಮದಲ್ಲಿ ನಡೆದ ಸಾಮೂಹಿಕ ಗ್ರಾಮಸಭೆಯಲ್ಲಿ ಒಟ್ಟು 2,093 ಜನರು ತಮ್ಮ ಅಭಿಪ್ರಾಯ ದಾಖಲಿಸಿದ್ದು, ಅವರಲ್ಲಿ 2,027 ಮಂದಿ ದೇವದುರ್ಗ ತಾಲೂಕಿಗೆ ಮರುಸೇರ್ಪಡೆ ಪರವಾಗಿ ಸಹಿ ಹಾಕಿದ್ದಾರೆ.
ರಾಯಚೂರು ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಅರಕೇರಾ ತಹಸೀಲ್ದಾರರ ನೇತೃತ್ವದಲ್ಲಿ ರಾಮದುರ್ಗ ಗ್ರಾಮದಲ್ಲಿ ಸಾಮೂಹಿಕ ಗ್ರಾಮಸಭೆ ಆಯೋಜಿಸಲಾಗಿತ್ತು. ರಾಮದುರ್ಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಕರಗಲ್, ಸುಂಕೇಶ್ವರಹಾಳ, ಜಿನ್ನಾಪೂರು ಹಾಗೂ ರಾಮದುರ್ಗ ಗ್ರಾಮಗಳ ನಿವಾಸಿಗಳು ಸಭೆಯಲ್ಲಿ ಭಾಗವಹಿಸಿ ತಾಲೂಕು ಬದಲಾವಣೆ ಕುರಿತು ತಮ್ಮ ಅಭಿಪ್ರಾಯಗಳನ್ನು ದಾಖಲಿಸಿದರು.
ಸಭೆಯಲ್ಲಿ ಒಟ್ಟು 2,093 ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದು, ಈ ಪೈಕಿ 2,027 ಮಂದಿ ರಾಮದುರ್ಗ ಗ್ರಾಮ ಪಂಚಾಯಿತಿ ವ್ಯಾಪ್ತಿಯನ್ನು ದೇವದುರ್ಗ ತಾಲೂಕಿಗೆ ಮರುಸೇರ್ಪಡೆಗೊಳಿಸುವಂತೆ ಸಹಿ ಮೂಲಕ ಒತ್ತಾಯಿಸಿದ್ದಾರೆ. ಉಳಿದ 66 ಮಂದಿ ಅರಕೇರಾ ತಾಲೂಕಿನಲ್ಲಿಯೇ ಮುಂದುವರಿಯಲು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
### ಮೇಲಧಿಕಾರಿಗಳಿಗೆ ವರದಿ ಸಲ್ಲಿಕೆ
ಗ್ರಾಮಸಭೆಯ ನಡವಳಿ, ಹಾಜರಾತಿ ಪಟ್ಟಿ ಹಾಗೂ ಗ್ರಾಮಸ್ಥರು ಸಲ್ಲಿಸಿದ ಮನವಿ ಪತ್ರಗಳನ್ನು ಲಗತ್ತಿಸಿ ಅರಕೇರಾ ತಹಸೀಲ್ದಾರರು ರಾಯಚೂರು ಸಹಾಯಕ ಆಯುಕ್ತರಿಗೆ ವರದಿ ಸಲ್ಲಿಸಿದ್ದಾರೆ. ಜಿಲ್ಲಾಧಿಕಾರಿಗಳಿಗೂ ವರದಿಯನ್ನು ರವಾನಿಸಲಾಗಿದೆ.
ದೇವದುರ್ಗ ತಾಲೂಕಿಗೆ ಸೇರ್ಪಡೆ ಕೋರಿ ಬಸನಗೌಡ ಪೊಲೀಸ್ ಪಾಟೀಲ್ ಸೇರಿದಂತೆ ಗ್ರಾಮಸ್ಥರು ಸಲ್ಲಿಸಿದ ಮನವಿ ಹಾಗೂ ಜಿನ್ನಾಪೂರು ಗ್ರಾಮವನ್ನು ಗಬ್ಬೂರು ಹೋಬಳಿಗೆ ಸೇರಿಸುವಂತೆ ಸಂತೋಷ ತಂದೆ ಬಸವರಾಜ ಸಲ್ಲಿಸಿದ ಮನವಿಯನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಗ್ರಾಮಸ್ಥರ ಅಭಿಪ್ರಾಯ ಸಂಗ್ರಹದ ವರದಿ ಮೇಲಧಿಕಾರಿಗಳಿಗೆ ಸಲ್ಲಿಕೆಯಾಗಿದ್ದು, ತಾಲೂಕು ಬದಲಾವಣೆ ಕುರಿತು ಮುಂದಿನ ಆಡಳಿತಾತ್ಮಕ ಕ್ರಮಗಳ ಬಗ್ಗೆ ಗ್ರಾಮಸ್ಥರು ನಿರೀಕ್ಷೆ ಹೊಂದಿದ್ದಾರೆ.
**ಪ್ರಮುಖ ಅಂಕಿ-ಅಂಶಗಳು:**
- ಒಟ್ಟು ಅಭಿಪ್ರಾಯ ದಾಖಲಿಸಿದವರು: 2,093
- ದೇವದುರ್ಗ ತಾಲೂಕಿಗೆ ಮರುಸೇರ್ಪಡೆ ಪರ: 2,027
- ಅರಕೇರಾ ತಾಲೂಕಿನಲ್ಲೇ ಮುಂದುವರಿಯಲು: 66
- ದೇವದುರ್ಗ ತಾಲೂಕಿಗೆ ಸೇರ್ಪಡೆ ಪರ ಅಭಿಪ್ರಾಯ: ಶೇ.96.85
**ವರದಿ: ಖಾಜಾ ಹುಸೇನ್ ಬಾಬಾ, ಜಾಲಹಳ್ಳಿ**