🔥 ट्रेंडिंग ಅರಕೆರೆ ತಾಲೂಕಿನಿಂದ ಕೈಬಿಟ್ಟು ಪುನಃ ದೇವದುರ... वरिष्ठ IAS अधिकारी को जॉइंट सचिव नियुक... केरल ने जारी किया NEET PG 2026 राउंड 2... સાંતલપુર ખાતે આર્મીના જવાનોનું પાંચ હે... सबरिमाला में तीर्थयात्रियों की गिरावट,... केरल के मुख्यमंत्री ने बच्चों को माता‑...
24 नव. 2026•
ગુજરાતી मराठी ਪੰਜਾਬੀ বাংলা
धर्म

ಕಾರ್ತಿಕ ಪೂರ್ಣಿಮೆ ಅಂಗವಾಗಿ ಹನುಮಾನ್ ಮಂದಿರದಲ್ಲಿ ದೀಪೋತ್ಸವ

✍️ रिपोर्टर: Basavaraj pujari 🗓 24 नव. 2026, 01:35 PM 👁 29
शेयर करें: 💬 WhatsApp 📘 Facebook 𝕏 Post

ಬೀದರ್: ನಗರದ ಜನವಾಡ ರಸ್ತೆಯಲ್ಲಿರುವ ರೋಕಡೆ ಶ್ರೀ ಹನುಮಾನ್ ಮಂದಿರದಲ್ಲಿ ಕಾರ್ತಿಕ ಪೂರ್ಣಿಮೆ ಅಂಗವಾಗಿ ನ. 24ರಂದು ಮುಂಜಾನೆ ಭವ್ಯ ದೀಪೋತ್ಸವ ಹಾಗೂ ವಿಶೇಷ ಪೂಜಾ ಕಾರ್ಯಕ್ರಮ ಭಕ್ತಿಭಾವದಿಂದ ನೆರವೇರಿತು. ಕಾರ್ತಿಕ ಪೂರ

ಕಾರ್ತಿಕ ಪೂರ್ಣಿಮೆ ಅಂಗವಾಗಿ ಹನುಮಾನ್ ಮಂದಿರದಲ್ಲಿ ದೀಪೋತ್ಸವ
ಬೀದರ್: ನಗರದ ಜನವಾಡ ರಸ್ತೆಯಲ್ಲಿರುವ ರೋಕಡೆ ಶ್ರೀ ಹನುಮಾನ್ ಮಂದಿರದಲ್ಲಿ ಕಾರ್ತಿಕ ಪೂರ್ಣಿಮೆ ಅಂಗವಾಗಿ ನ. 24ರಂದು ಮುಂಜಾನೆ ಭವ್ಯ ದೀಪೋತ್ಸವ ಹಾಗೂ ವಿಶೇಷ ಪೂಜಾ ಕಾರ್ಯಕ್ರಮ ಭಕ್ತಿಭಾವದಿಂದ ನೆರವೇರಿತು.

ಕಾರ್ತಿಕ ಪೂರ್ಣಿಮೆಯ ಅಂಗವಾಗಿ ಮಂದಿರದಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಮುಂಜಾನೆಯಿAದಲೇ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಶ್ರೀ ಹನುಮಂತನ ದರ್ಶನ ಪಡೆದು ಕುಟುಂಬದ ಸುಖ, ಶಾಂತಿ, ಆರೋಗ್ಯ ಹಾಗೂ ಲೋಕಕಲ್ಯಾಣಕ್ಕಾಗಿ ಪ್ರಾರ್ಥಿಸಿದರು.

ದೇವಸ್ಥಾನದ ಅರ್ಚಕರಾದ ಚಂದ್ರಕಾAತ್ ಜೋಶಿ ಸೇರಿದಂತೆ ಇತರ ಅರ್ಚಕರು ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಶೇಷ ಪೂಜೆ ನೆರವೇರಿಸಿದರು. ಮಹಿಳಾ ಭಕ್ತರು ದೇವಸ್ಥಾನದ ಆವರಣದಲ್ಲಿ ಆಕರ್ಷಕ ರಂಗೋಲಿಗಳನ್ನು ಬಿಡಿಸಿ ದೀಪೋತ್ಸವಕ್ಕೆ ಮೆರಗು ನೀಡಿದರು.

ದೀಪಗಳ ಬೆಳಕು, ಭಜನೆ ಹಾಗೂ ಭಕ್ತರ ಪ್ರಾರ್ಥನೆಯಿಂದ ದೇವಸ್ಥಾನದ ಪರಿಸರದಲ್ಲಿ ಭಕ್ತಿಮಯ ವಾತಾವರಣ ನಿರ್ಮಾಣವಾಗಿತ್ತು. ಪೂಜೆಯ ಬಳಿಕ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.
📲Get App