🔥 TRENDING बिहार के स्वास्थ मंत्री पटना साहिब स्थ... મહેસાણા-મોઢેરા રોડ પર ખોદકામને કારણે ટ... ఎల్లారెడ్డిపేట జాతరలో తప్పిపోయిన బాలిక... उन्नाव में दर्दनाक हादसा: बहन को लेने... આજે ગુજરાત સરકારના વન અને પર્યાવરણ મંત... Karan Johar Warns: Social Media Algori...
24 Nov 2026•
ગુજરાતી मराठी ਪੰਜਾਬੀ বাংলা

ಅಹಂಕಾರ, ದ್ವೇಷ ತೊರೆದು ಮಾನವೀಯತೆಯತ್ತ ಸಾಗೋಣ: ಶಂಕರ್ ಲಿಂಗಯ್ಯ ಸ್ವಾಮಿಸತ್ಸಂಗದಿಂದ ಸತ್ಯದ ಅರಿವು, ಪ್ರೀತಿ–ಸಹೋದರತ್ವ ಮತ್ತು ಸಮಾನತೆಯ ಬದುಕು ಸಾಧ್ಯ:ನಾಮದವಗೌಡ ಶರಣರು

✍️ Reporter: Khaja Hussain 🗓 24 Nov 2026, 07:33 PM 👁 22
Share: 💬 WhatsApp 📘 Facebook 𝕏 Post
**ದೇವದುರ್ಗ–ಅರಕೇರಾ ಬ್ರೇಕಿಂಗ್ ನ್ಯೂಸ್**

# ಅಹಂಕಾರ, ದ್ವೇಷ ತೊರೆದು ಮಾನವೀಯತೆಯತ್ತ ಸಾಗೋಣ: ಶಂಕರ್ ಲಿಂಗಯ್ಯ ಸ್ವಾಮಿ

### ಸತ್ಸಂಗದಿಂದ ಸತ್ಯದ ಅರಿವು, ಪ್ರೀತಿ–ಸಹೋದರತ್ವ ಮತ್ತು ಸಮಾನತೆಯ ಬದುಕು ಸಾಧ್ಯ:ನಾಮದವಗೌಡ ಶರಣರು

**ಅರಕೇರಾ, ನ.24:** ರಾಯಚೂರು ಜಿಲ್ಲೆಯ ಅರಕೇರಾ ತಾಲೂಕಿನ ಮದರಕಲ್ ಗ್ರಾಮದ ಅಂಭಾ ಮಠದಲ್ಲಿ ಹುಣ್ಣಿಮೆ ಅಂಗವಾಗಿ ಮಂಗಳವಾರ ವಿಶೇಷ ಅನುಭವ ಹಾಗೂ ಸತ್ಸಂಗ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.

ಕಾರ್ಯಕ್ರಮದಲ್ಲಿ ದೇವರಗುಡ್ಡ ಅಮಾತೇಶ್ವರ ಸಂಸ್ಥಾನ ಮಠದ ಶಂಕರ್ ಲಿಂಗಯ್ಯ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿ ಪ್ರವಚನ ನೀಡಿದರು.

“ಸತ್ಸಂಗ ಎಂದರೆ ಕೇವಲ ಒಟ್ಟಿಗೆ ಕೂಡಿ ಕುಳಿತುಕೊಳ್ಳುವುದಲ್ಲ; ಸತ್ಯದ ಸಂಗ ಮಾಡುವುದು. ಸತ್ಯದ ಅರಿವು ಮೂಡಿದಾಗ ಮಾತ್ರ ಅನುಭವಕ್ಕೆ ಪರಮಾರ್ಥದ ಅರ್ಥ ತಿಳಿಯುತ್ತದೆ” ಎಂದು ಹೇಳಿದರು.

ತಪಸ್ಸು, ಅನುಷ್ಠಾನ ಮತ್ತು ಸಿದ್ಧಿ ಪ್ರಾಪ್ತಿಯೇ ಜೀವನದ ಮೂಲ ಉದ್ದೇಶವಲ್ಲ. ಸರ್ವ ಜೀವಿಗಳಲ್ಲಿಯೂ ಸಮಾನತೆಯನ್ನು ಕಾಣುವುದು, ಪ್ರತಿಯೊಬ್ಬರನ್ನೂ ಮಾನವೀಯ ದೃಷ್ಟಿಯಿಂದ ನೋಡುವುದೇ ನಿಜವಾದ ಯೋಗವಾಗಿದೆ. ಮನುಷ್ಯರ ನಡುವೆ ಭೇದಭಾವ ತೋರದೆ ಪ್ರೀತಿ, ಸಹೋದರತ್ವ ಮತ್ತು ಸಮಾನತೆಯಿಂದ ಬದುಕಿದಾಗ ಮಾತ್ರ ನಿಜವಾದ ಆಧ್ಯಾತ್ಮಿಕ ಸಿದ್ಧಿಯತ್ತ ಸಾಗಲು ಸಾಧ್ಯ ಎಂದು ಭಕ್ತರಿಗೆ ತಿಳಿಸಿದರು.

ಅಹಂಕಾರ, ದ್ವೇಷ, ಅಸೂಯೆ ಹಾಗೂ ಭೇದಭಾವಗಳನ್ನು ತೊರೆದು ಪರಸ್ಪರ ಪ್ರೀತಿ ಮತ್ತು ಸಹಬಾಳ್ವೆಯಿಂದ ಜೀವನ ನಡೆಸಬೇಕು. ಸಮಾಜದಲ್ಲಿ ಶಾಂತಿ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಸತ್ಸಂಗ ಕಾರ್ಯಕ್ರಮಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳಿದರು.


**ಜೀವನದಲ್ಲಿ ಸಂಸ್ಕಾರ ಮುಖ್ಯ: ನಾಮದೇವಗೌಡ ಶರಣರು**

ಅಂಭಾ ಮಠದ ಪೀಠಾಧಿಪತಿ ಸಂತ ನಾಮದೇವಗೌಡ ಶರಣರು ಮಾತನಾಡಿ, ಸ್ವಾಮೀಜಿಗಳ ನುಡಿಮುತ್ತುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಂಸ್ಕಾರಯುತವಾಗಿ ಪ್ರತಿಯೊಬ್ಬರೂ ಸನ್ಮಾರ್ಗದಲ್ಲಿ ನಡೆಯಬೇಕು. ಇಂತಹ ಸತ್ಸಂಗ ಕಾರ್ಯಕ್ರಮಗಳು ಭಕ್ತರಲ್ಲಿ ಆಧ್ಯಾತ್ಮಿಕ ಜಾಗೃತಿ ಮೂಡಿಸಲು ಸಹಕಾರಿಯಾಗುತ್ತವೆ ಎಂದು ಹೇಳಿದರು.

**ಒಳ್ಳೆಯದನ್ನು ಮಾಡೋಣ: ವೆಂಕನಗೌಡ ಪಾಟೀಲ್**

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ತಹಶೀಲ್ದಾರ್ ವೆಂಕನಗೌಡ ಪಾಟೀಲ್ ಮಾತನಾಡಿ, ಎಲ್ಲರಿಗೂ ಒಳ್ಳೆಯದನ್ನು ಮಾಡಬೇಕು, ಯಾರಿಗೂ ಕೆಟ್ಟದ್ದನ್ನು ಬಯಸಬಾರದು. ನಾವೆಲ್ಲರೂ ಒಗ್ಗಟ್ಟಿನಿಂದ ಸಮಾಜದಲ್ಲಿ ಒಳ್ಳೆಯ ಕಾರ್ಯಗಳನ್ನು ಮಾಡೋಣ ಎಂದು ಕರೆ ನೀಡಿದರು.

**ಮಠಗಳು ಜನರನ್ನು ಸನ್ಮಾರ್ಗಕ್ಕೆ ಕರೆದೊಯ್ಯುತ್ತಿವೆ: ವಿ.ಎಂ. ಮೇಟಿ**

ಹಿರಿಯ ನ್ಯಾಯವಾದಿ ವಿ.ಎಂ. ಮೇಟಿ ಮಾತನಾಡಿ, ಮಠಗಳು ಜನರ ತಪ್ಪುಗಳನ್ನು ತಿದ್ದಿ ಸನ್ಮಾರ್ಗಕ್ಕೆ ಕರೆದುಕೊಂಡು ಹೋಗುವ ಕಾರ್ಯ ಮಾಡುತ್ತಿವೆ. ನಾಮದೇವಗೌಡ ಶರಣರು ಜಾತಿ ಭೇದವಿಲ್ಲದೆ ಎಲ್ಲರನ್ನೂ ಪ್ರೀತಿ ಹಾಗೂ ಸೌಹಾರ್ದತೆಯಿಂದ ಕಾಣುತ್ತಿರುವುದು ಶ್ಲಾಘನೀಯ ಎಂದರು.

**ಸಮಾನತೆಯ ಸಂದೇಶ ಸಾರಿದ ವೆಂಕನಗೌಡ ವಕೀಲರು**

ಅತಿಥಿ ಗಳಾದ ವಕೀಲ ವೆಂಕನಗೌಡ ಮಾತನಾಡಿ, ಮಠಗಳು ಜಾತಿ ಭೇದವಿಲ್ಲದೆ ಎಲ್ಲರನ್ನು ಸಮಾನತೆಯಿಂದ ಒಗ್ಗೂಡಿಸಿಕೊಂಡು ಸಮಾಜವನ್ನು ಮುನ್ನಡೆಸಬೇಕು ಎಂದು ಅಭಿಪ್ರಾಯಪಟ್ಟರು.

**ರವಿ ಹುಂಜ ವಿರುದ್ಧ ಕ್ರಮಕ್ಕೆ ಆಗ್ರಹ**

ಶಿವಪ್ಪ ಪಲಕನಮರಡಿ ಮಾತನಾಡಿ, ಬಸವಣ್ಣನವರ ವಿರುದ್ಧ ಅವಹೇಳನಕಾರಿ ಬರಹ ಪ್ರಕಟಿಸಿರುವ ರವಿ ಹುಂಜ ಅವರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ನಾಮದೇವಗೌಡ ಶರಣರ ನೇತೃತ್ವದಲ್ಲಿ ರವಿ ಹುಂಜ ವಿರುದ್ಧ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶ್ರೀ ಶಂಕಲಿಂಗಯ್ಯ ಸ್ವಾಮಿ, ಶ್ರೀ ನಾಮದೇವಗೌಡ ಶರಣರು, ವೆಂಕನಗೌಡ ನಿವೃತ್ತ ತಹಶೀಲ್ದಾರ್, ಹಿರಿಯ ನ್ಯಾಯವದಿ ವಿ, ಎಮ್, ಮೇಟಿ,ಡಾ. ಸಂಗನ ಬಸಪ್ಪ, ರಾಚಯ್ಯ ಅನುಭವಿಗಳು, ಹನುಮಂತ ಶರಣರು ಗೆದ್ದಲಮಾರಿ,ಶಂಕರಗೌಡ ಜಾಲಹಳ್ಳಿ, ಸಾಬಣ್ಣ ಹೂಗಾರ್, ಶಿವಣ್ಣ ಫಿಳಗುಂಡ್ ವಿಠೋಭ ನಾಯಕ ನಿವೃತ್ತ ಶಿಕ್ಷಕರು, ವೆಂಕನಗೌಡ ವಕೀಲರು,ವೀರಯ್ಯ ಸ್ವಾಮಿ ದೇವಣ್ಣಗೌಡ ಮಾಲಿ ಪಾಟೀಲ್, ಬಸವರಾಜ ಸಾಹುಕಾರ್ ಮಾಜಿ ಗ್ರಾಮ ಸದಸ್ಯರು, ಮಲ್ಲಪ್ಪ ಸಾಹುಕಾರ್, ಚಿನ್ನಪ್ಪ ದೊಡ್ಡಮನಿ, ಮಹದೇವಪ್ಪ ಗುರೇಬಾಳ್, ಊರುಕುಂದಪ್ಪ ಗಟ್ಟಿ ಬಿಚ್ಚಾಲಿ, ಹನುಮಂತ ದೇಸಾಯಿ, ಗೋವಿಂದಪ್ಪ ಅಲಗೇರಿ,ಶಿವಪ್ಪ ಪಲಕನಮರಡಿ, ಚನ್ನಬಸವ ಮ್ಯಾಕ ಲದೊಡ್ಡಿ,ಸೇರಿದಂತೆ ಮಠದ ಸದ್ಭಕ್ತರು, ಗ್ರಾಮದ ಹಿರಿಯರು, ಮಹಿಳಾ ಭಕ್ತ ಮಂಡಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ ನೂರಾರು ಭಕ್ತರು ಭಾಗವಹಿಸಿದ್ದರು.

**ವರದಿ: ಖಾಜಾ ಹುಸೇನ್ ಬಾಬಾ, ಜಾಲಹಳ್ಳಿ*
📲Get App